ಮೂಡುಬಿದಿರೆ: ಮೆಕ್ಯಾನಿಕ್ಸ್ V/s ಇಲೆಕ್ಟ್ರಿಕಲ್ ವಿದ್ಯಾರ್ಥಿಗಳ ನಡುವೆ ಡಿಶ್ಯುಂ…ಡಿಶ್ಯು…| 8 ಮಂದಿ ಡಿಬಾರ್
ಮಂಗಳೂರು: ಇಲ್ಲಿಗೆ ಸಮೀಪದ ತೋಡಾರುವಿನಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜ್ ಒಂದರಲ್ಲಿ ಮೆಕ್ಯಾನಿಕ್ ಮತ್ತು ಎಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿಗಳ ಗುಂಪುಗಳ ಮಧ್ಯೆ ಹೊಡೆದಾಟ ನಡೆದು ಇಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.ಗಾಯಗೊಂಡ ವಿದ್ಯಾರ್ಥಿಗಳನ್ನು ಸಹಾಝ್ ಮತ್ತು ಮಹಮ್ಮದ್ ಸ್ವರೂಬ್ ಎಂದು ಗುರುತಿಸಲಾಗಿದೆ. ಇವರು ಸದ್ಯ ಸರಕಾರಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದರೆ.ಘಟನೆ ಹಿನ್ನೆಲೆ:ಸಂಪ್ರದಾಯ ದಿನ ಎಂಬ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಪೂರ್ವ ತಯಾರಿ ನಡೆಸುತ್ತಿದ್ದರು. ಈ ವೇಳೆ ತೃತೀಯ ವರ್ಷದ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದ ವೇಳೆ ಅಂತಿಮ ವರ್ಷದ ವಿದ್ಯಾರ್ಥಿಗಳ









