Editor

ಕೊಡಗಿನಲ್ಲಿ ಭೀಕರ ಹತ್ಯಾಕಾಂಡ| ನಾಲ್ವರನ್ನು ಹತ್ಯೆಗೈದು ಪರಾರಿಯಾದ ದುಷ್ಕರ್ಮಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಕಾಫಿ ತೋಟದ ಮನೆಯಲ್ಲಿ ನಾಲ್ವರನ್ನು ಕತ್ತರಿಸಿ ಬರ್ಬರ ಹತ್ಯೆ ಮಾಡಲಾಗಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೊಳತೋಡು ಗ್ರಾಮದ ಕಾಫಿ ತೋಟದ ಲೈನ್ ಮನೆಯಲ್ಲಿ ನಾಲ್ವರನ್ನು ಓರ್ವ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ಈ ಕೊಲೆ ನಡೆದಿದೆ ಎನ್ನಲಾಗಿದೆ. ಕೊಲೆಯಾದವರನ್ನು ಕರಿಯ, ಗೌರಿ, ನಾಗಿ, ಕಾವೇರಿ(7) ಎಂದು ಗುರುತಿಸಲಾಗಿದೆ. 35 ವರ್ಷದ ಗಿರೀಶ್ ಎಂಬಾತ ಈ ಕೊಲೆ ಮಾಡಿ

ಕೊಡಗಿನಲ್ಲಿ ಭೀಕರ ಹತ್ಯಾಕಾಂಡ| ನಾಲ್ವರನ್ನು ಹತ್ಯೆಗೈದು ಪರಾರಿಯಾದ ದುಷ್ಕರ್ಮಿ Read More »

ಎರಡು ಪ್ರಬಲ ಭೂಕಂಪ| ಅಪಾರ ನಷ್ಟ, ಸಾವು, ನೋವು ಪ್ರಾಣಾಹುತಿ

ಸಮಗ್ರ ನ್ಯೂಸ್: ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪವಾಗಿದೆ. 7.7 ಮತ್ತು 6.4 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದು, ಕಂಪನದ ತೀವ್ರತೆ ಎಷ್ಟು ಪ್ರಬಲವಾಗಿದೆಯೆಂದರೆ ಅವು ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲೂ ಅನುಭವಕ್ಕೆ ಬಂದಿದೆ. ಭೂಕಂಪದ ಪರಿಣಾಮ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಮತ್ತು ಮ್ಯಾನ್ಮಾರ್‌ನಲ್ಲಿ ಸೇತುವೆಯೊಂದು ಕುಸಿದು ಬಿದ್ದಿವೆ. ವಿಯೆಟ್ನಾಂ ಸೇರಿದಂತೆ ನೆರೆಯ ದೇಶಗಳಲ್ಲಿ ಕಂಪನದ ಅನುಭವವಾಗಿದೆ. ವಿಯೆಟ್ನಾಂನಲ್ಲಿ, ಹನೋಯ್ ಮತ್ತು ಹೋ ಚಿ ಮಿನ್ಹ್ ನಗರಗಳೆರಡೂ ಕಂಪನಗಳನ್ನು ಅನುಭವಿಸಿದವು, ಭೂಕಂಪನ ಚಟುವಟಿಕೆಯಿಂದಾಗಿ ಬೆಳಕಿನ ನೆಲೆವಸ್ತುಗಳು ತೂಗಾಡುತ್ತಿದ್ದವು. ಅಮೆರಿಕದ

ಎರಡು ಪ್ರಬಲ ಭೂಕಂಪ| ಅಪಾರ ನಷ್ಟ, ಸಾವು, ನೋವು ಪ್ರಾಣಾಹುತಿ Read More »

ಮಯನ್ಮಾರ್ ನಲ್ಲಿ ಪ್ರಬಲ ಭೂಕಂಪ| ರಿಕ್ಟರ್ ನಲ್ಲಿ 7.2 ತೀವ್ರತೆ ದಾಖಲು

ಸಮಗ್ರ ನ್ಯೂಸ್: ಮಯನ್ಮಾರ್ ನಲ್ಲಿ 7.2 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ. ನೆರೆಯ ದೇಶಗಳಲ್ಲೂ ಭೂಕಂಪನದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಬೆಳಿಗ್ಗೆ 11.50 ರ ಸುಮಾರಿಗೆ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. “ಇಕ್ಯೂ ಆಫ್ ಎಂ: 7.2, ಆನ್: 28/03/2025 11:50:52 IST, Lat: 21.93 N, ಉದ್ದ: 96.07 E, ಆಳ: 10 ಕಿ.ಮೀ, ಸ್ಥಳ: ಮ್ಯಾನ್ಮಾರ್” ಎಂದು ಎನ್ಸಿಎಸ್ ಎಕ್ಸ್ನಲ್ಲಿ ಪೋಸ್ಟ್

ಮಯನ್ಮಾರ್ ನಲ್ಲಿ ಪ್ರಬಲ ಭೂಕಂಪ| ರಿಕ್ಟರ್ ನಲ್ಲಿ 7.2 ತೀವ್ರತೆ ದಾಖಲು Read More »

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ|ಇದು ನಾಲ್ಕಾಣೆ ಬೆಕ್ಕು ಎಂಟಾಣೆ ಹಾಲು ಕುಡಿದ ಕಥೆ!!

ಸಮಗ್ರ ನ್ಯೂಸ್: ಕೇವಲ 22 ತಿಂಗಳ ಅಧಿಕಾರವಧಿಯಲ್ಲಿ ಕಾಂಗ್ರೆಸ್‌ ಸರ್ಕಾರ ಜನರಿಂದ ಕ್ಯಾಕರಸಿ ಉಗಿಸಿಕೊಳ್ಳುತ್ತಿದೆ. ಅದಕ್ಕೆ ಕಾರಣ ಬೆಲೆ ಏರಿಕೆ. ಅಧಿಕಾರಕ್ಕೆ ಬಂದ ದಿನದಿಂದ ಪ್ರತಿ ತಿಂಗಳೂ ಎನ್ನುವಂತೆ ಅಗತ್ಯ ವಸ್ತುಗಳ ದರ ಏರಿಕೆ ಮಾಡುತ್ತಲೇ ಬಂದಿದೆ. ಗುರುವಾರ ನಂದಿನಿ ಹಾಲಿನ ಬೆಲೆಯನ್ನು ದಾಖಲೆಯ ಮಟ್ಟದಲ್ಲಿ ನಾಲ್ಕು ರೂಪಾಯಿ ಏರಿಕೆ ಮಾಡಿದೆ. 22 ತಿಂಗಳ ಹಿಂದೆ ನಡೆದ ಚುನಾವಣೆಯ ಸಮಯದಲ್ಲಿ ‘ಉಚಿತ, ಖಚಿತ, ನಿಶ್ಚಿತ..’, ‘ಕಾಕಾಪಾಟೀಲ್‌ ನಿಂಗೂ ಫ್ರೀ, ಮಹದೇವಪ್ಪ ನಿಂಗೂ ಫ್ರೀ..’ ಎನ್ನುತ್ತ ಗ್ಯಾರಂಟಿ ಆಸೆ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ|ಇದು ನಾಲ್ಕಾಣೆ ಬೆಕ್ಕು ಎಂಟಾಣೆ ಹಾಲು ಕುಡಿದ ಕಥೆ!! Read More »

ಬೆಂಗಳೂರಿನಲ್ಲೊಂದು ಘನಘೋರ ಘಟನೆ| ಮುದ್ದಾದ ಪತ್ನಿಯ‌ ಕೊಂದು ಕತ್ತರಿಸಿ ಸೂಟ್ ಕೇಸ್ ನಲ್ಲಿ ತುಂಬಿದ ಪತಿ

ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರ ಮೂಲದ ಜೋಡಿಯೊಂದ ಉದ್ಯೋಗ ನಿಮಿತ್ತ ಬೆಂಗಳೂರಿನ ಹೊರವಲಯ ಹುಳಿಮಾವು ಸಮೀಪದ ದೊಡ್ಡ ಕಮ್ಮನಹಳ್ಳಿಯ ಮನೆಯೊಂದರಲ್ಲಿ ವಾಸವಾಗಿದ್ದರು. ರಾಕೇಶ್ ರಾಜೇಂದ್ರ ಹಾಗೂ ಗೌರಿ ಅನಿಲ್ ಸಾಂಬೆಕರ್ ಕೆಲ ವರ್ಷಗಳಿಂದ ಇಲ್ಲಿ ಅನ್ಯೋನ್ಯವಾಗಿದ್ದರು. ಆಗಾಗ್ಗೆ ಮಹಾರಾಷ್ಟ್ರಕ್ಕೂ ಹೋಗಿ ಬರುತ್ತಿದ್ದರು. ಆದರೆ, ಕೆಲ ದಿನಗಳಿಂದ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ತಡರಾತ್ರಿ ವೇಳೆಯೂ ಇಬ್ಬರ ಜಗಳ ಪಕ್ಕದ ಮನೆಯವರಿಗೂ ಕೇಳಿಸುತ್ತಿತ್ತು. ಆದರೆ, ಇದೀಗ ಗಂಡ

ಬೆಂಗಳೂರಿನಲ್ಲೊಂದು ಘನಘೋರ ಘಟನೆ| ಮುದ್ದಾದ ಪತ್ನಿಯ‌ ಕೊಂದು ಕತ್ತರಿಸಿ ಸೂಟ್ ಕೇಸ್ ನಲ್ಲಿ ತುಂಬಿದ ಪತಿ Read More »

ಹವಾಮಾನ ವೈಪರೀತ್ಯದಿಂದ ಫಸಲು ಕುಂಠಿತ| ಅಡಿಕೆ, ತೆಂಗಿನಕಾಯಿ ಧಾರಣೆಯಲ್ಲಿ ಏರಿಕೆ

ಸಮಗ್ರ ನ್ಯೂಸ್: ಎರಡು ವರ್ಷಗಳಿಂದ ತೀವ್ರ ಸ್ವರೂಪದ ಹವಾಮಾನ ವೈಪರೀತ್ಯದಿಂದ ಅಡಿಕೆ ತೋಟದಲ್ಲಿ ಭಾರೀ ಪ್ರಮಾಣದ ಫಸಲು ಕುಸಿತ ಉಂಟಾದ ಪರಿಣಾಮ ಮಾರುಕಟ್ಟೆಯಲ್ಲಿ ಅಡಿಕೆ ಕೊರತೆ ಉದ್ಭವಿಸಿದೆ. ಹಾಗಾಗಿ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಲ ದಿನಗಳಿಂದ ಸ್ಥಿರವಾಗಿದ್ದ ಡಬ್ಬಲ್‌ ಚೋಲ್‌ ಧಾರಣೆಯಲ್ಲಿ ಏರಿಕೆ ಲಕ್ಷಣ ಕಂಡು ಬಂದಿದೆ. ಹೊರ ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಧಾರಣೆ ಕೆ.ಜಿ.ಗೆ 502 ರೂ. ದಾಖಲಾಗಿದೆ. ಅಡಿಕೆ ಮಾತ್ರವಲ್ಲದೆ ರಬ್ಬರ್‌, ತೆಂಗಿನಕಾಯಿ, ಕಾಳುಮೆಣಸು ಧಾರಣೆಯು ಹೆಚ್ಚಳ ಕಾಣುತ್ತಿದ್ದು ಉಪ ಬೆಳೆಗಳು ಕೃಷಿಕರಿಗೆ

ಹವಾಮಾನ ವೈಪರೀತ್ಯದಿಂದ ಫಸಲು ಕುಂಠಿತ| ಅಡಿಕೆ, ತೆಂಗಿನಕಾಯಿ ಧಾರಣೆಯಲ್ಲಿ ಏರಿಕೆ Read More »

ರಾಜ್ಯದ ಜನತೆಗೆ ಶಾಕ್ ಮೇಲೆ‌ ಶಾಕ್| ವಿದ್ಯುತ್ ದರ ಏರಿಸಿ ರಾಜ್ಯ ಸರ್ಕಾರ ಆದೇಶ| ಎ.1ರಿಂದಲೇ ಪರಿಷ್ಕೃತ ದರ ಜಾರಿ

ಸಮಗ್ರ ನ್ಯೂಸ್: ರಾಜ್ಯದ ಜನತೆಗೆ ಬಿಗ್ ಶಾಕ್ ಎದುರಾಗಿದ್ದು, ಹಾಲಿನ ದರ ಏರಿಕೆ ಬೆನ್ನಲ್ಲೇ ವಿದ್ಯುತ್ ದರ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಿಸಿ ‘KERC’ ಆದೇಶ ಹೊರಡಿಸಿದೆ. ಪ್ರತಿ ಯೂನಿಟ್ ಗೆ 36 ಪೈಸೆಯಂತೆ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ವಿದ್ಯುತ್ ಪ್ರಸರಣ ಮತ್ತು ವ್ ಎಸ್ಕಾಮ್ ಸಿಬ್ಬಂದಿ ಪಿಂಚಣಿ ಗ್ರ್ಯಾಚುಟಿ ಹಣವನ್ನು ಗ್ರಾಹಕರಿಂದ ವಸೂಲಿಗೆ ಮುಂದಾಗಿರುವ ಕೆಇಆರ್ ಸಿ, ವಿದ್ಯುತ್ ದರ 36 ಪೈಸೆ ಹೆಚ್ಚಿಸಿದೆ. ಏಪ್ರಿಲ್ 1ರಿಂದಲೇ ಕೆಇಆರ್ ಸಿ ಹೊಸ

ರಾಜ್ಯದ ಜನತೆಗೆ ಶಾಕ್ ಮೇಲೆ‌ ಶಾಕ್| ವಿದ್ಯುತ್ ದರ ಏರಿಸಿ ರಾಜ್ಯ ಸರ್ಕಾರ ಆದೇಶ| ಎ.1ರಿಂದಲೇ ಪರಿಷ್ಕೃತ ದರ ಜಾರಿ Read More »

ಅಕ್ರಮ ಚಿನ್ನ ಸಾಗಾಟ ಪ್ರಕರಣ| ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಜಾ

ಸಮಗ್ರ ನ್ಯೂಸ್: ನಟಿ ರನ್ಯಾ ರಾವ್ ಅವರು ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ. ಈ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ನಟಿ ರನ್ಯಾ ರಾವ್ ಗೆ ಬಿಗ್ ಶಾಕ್ ನೀಡಲಾಗಿದೆ. ಈ ಸಂಬಂಧ ಬೆಂಗಳೂರಿನ 64ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಟಿ ರನ್ಯಾ ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ಈ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಅವರು ವಿಚಾರಣೆಯ ವೇಳೆ ಸರಿಯಾಗಿ ಸಹಕರಿಸಿಲ್ಲ. ತನಿಖೆ ಬಾಕಿ ಇದೆ. ಯಾವುದೇ

ಅಕ್ರಮ ಚಿನ್ನ ಸಾಗಾಟ ಪ್ರಕರಣ| ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಜಾ Read More »

ಅಡಿಕೆ ಸುಲಿಯುವ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ಸಮಗ್ರ ನ್ಯೂಸ್: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ ಪತ್ನಿ ಶೋಭಾ ಹೆಗಡೆ ಆಕಸ್ಮಿಕ ಅವಘಡದಲ್ಲಿ ನಿಧನರಾಗಿದ್ದಾರೆ. ಅಡಕೆ ಚಾಲಿ ಸುಲಿಯುವ ಯಂತ್ರಕ್ಕೆ ಸಿಲುಕಿ ಶೋಭಾ ಮೃತಪಟ್ಟಿದ್ದಾರೆ. ಶೋಭಾ ಮನೆಯಲ್ಲಿ ಅಡಕೆ ಸುಲಿಯುವ ಕಾರ್ಯ ನಡೆಯುತ್ತಿತ್ತು. ಶೋಭಾ ಹೆಗಡೆ ಕೆಲಸಗಾರರನ್ನು ನೋಡಿಕೊಳ್ಳಲು ಹೋಗಿದ್ದರು. ಈ ವೇಳೆ ಚಾಲಿ ಸುಲಿಯುವ ಯಂತ್ರಕ್ಕೆ ಆಕಸ್ಮಿಕವಾಗಿ ಶೋಭಾ ಸೀರೆಯ ಸೆರಗು ಸಿಲುಕಿ ಅವರು ಪ್ರಾಣಬಿಟ್ಟಿದ್ದಾರೆ. ಕೆಲಸಗಾರರು ಅಲ್ಲಿಯೇ ಇದ್ದರೂ ಕ್ಷಣಾರ್ಧದಲ್ಲಿ ಘಟನೆ ಸಂಭವಿಸಿದೆ. ಯಂತ್ರ ಶೋಭಾರನ್ನು ಎತ್ತಿ ಬಿಸಾಡಿದ್ದು, ರಕ್ತಸ್ರಾವವಾಗಿ

ಅಡಿಕೆ ಸುಲಿಯುವ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು Read More »

ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆ ಬಿಸಿ| ನಂದಿನಿ ಹಾಲಿನ ದರದಲ್ಲಿ ₹4 ಏರಿಕೆಗೆ ಸಚಿವ ಸಂಪುಟ ಅನುಮೋದನೆ|

ಸಮಗ್ರ ನ್ಯೂಸ್: ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಬಿಗ್ ಶಾಕ್ ನೀಡಿದ್ದು, ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ಮತ್ತೆ 4 ರೂಪಾಯಿ ಏರಿಕೆ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ. ಪರಿಷ್ಕೃತ ನೂತನ ದರ ಎ.1ರಿಂದ ಜಾರಿಗೆ ಬರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರ 4 ರೂ ಏರಿಕೆಗೆ ಅನುಮೋದನೆ ದೊರಕಿದೆ. ಈಗಾಗಲೇ ರಾಜ್ಯ ಸರ್ಕಾರ ಕೆಎಸ್‌ಆರ್ಟಿಸಿ ಮತ್ತು ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣದ ಟಿಕೆಟ್

ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆ ಬಿಸಿ| ನಂದಿನಿ ಹಾಲಿನ ದರದಲ್ಲಿ ₹4 ಏರಿಕೆಗೆ ಸಚಿವ ಸಂಪುಟ ಅನುಮೋದನೆ| Read More »