Ad Widget .

ವಿಶ್ವವಿಖ್ಯಾತ ದಸರಾ‌ ಉತ್ಸವಕ್ಕೆ ದಿನಗಣನೆ| ಈ ಬಾರಿ ಮಾಜಿ ಸಿಎಂ ಎಸ್ ಎಂ ಕೃಷ್ಣರಿಂದ ನಾಡಹಬ್ಬಕ್ಕೆ ಚಾಲನೆ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮೈಸೂರು: ನಾಡ ಹಬ್ಬ ದಸರಾ ಉದ್ಘಾಟಕರ ಹೆಸರು ಘೋಷಣೆಯಾಗಿದ್ದು ಈ ಬಾರಿಯ ದಸರಾ ಹಬ್ಬವನ್ನು ಮಾಜಿ ಸಿಎಂ ಎಸ್‍.ಎಂ ಕೃಷ್ಣ ಉದ್ಘಾಟಿಸಲಿದ್ದಾರೆ.

Ad Widget . Ad Widget . Ad Widget .

ಮಂಗಳವಾರ (ಸೆ.28) ಸಂಜೆ ದಸರಾ ಹಬ್ಬದ ಸಿದ್ಧತೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಅಕ್ಟೋಬರ್ 7ರಿಂದ ಆರಂಭವಾಗಲಿರುವ ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಹಿರಿಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರವರಿಗೆ ಆಹ್ವಾನ ನೀಡಲು ರಾಜ್ಯಸರ್ಕಾರ ನಿರ್ಧರಿಸಿದೆ.

ಅಕ್ಟೋಬರ್ 7 ರಿಂದ ಪ್ರಾರಂಭವಾಗಲಿರುವ ದಸರಾ ಹಬ್ಬಕ್ಕೆ ಸಾಂಸ್ಕೃತಿಕ ಮೈಸೂರು ಸರ್ವರೀತಿಯಲ್ಲಿ ಸಜ್ಜುಗೊಳ್ಳುತ್ತಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಬೆಳಕಿನಲ್ಲಿ ಕಂಗೊಳಿಸಲು ಅರಮನೆ ವಿದ್ಯುತ್‌ ಬಲ್ಬ್‌ಗಳು ರೆಡಿಯಾಗುತ್ತಿವೆ.

ಅರಮನೆ ದೀಪಾಲಂಕಾರ ದಸರಾದ ಪ್ರಮುಖ ಆಕರ್ಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಅರಮನೆಯ ವಿದ್ಯುತ್‌ ದೀಪಗಳ ದುರಸ್ತಿ ಕಾರ್ಯ ಆರಂಭವಾಗಿದೆ. ಕ್ರೇನ್ ಸಹಾಯದಿಂದ ವಿದ್ಯುತ್ ದೀಪಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು, ಹೊಸ ದೀಪಗಳ ಅಳವಡಿಕೆಯಾಗುತ್ತಿದೆ.

ಅ.1ಕ್ಕೆ ಸಿಂಹಾಸನ ಜೋಡಣೆ

ಅಕ್ಟೋಬರ್ 1 ಶುಕ್ರವಾರ ಅಭಿಜಿತ್ ಲಗ್ನದಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದ್ದು, ಅದಕ್ಕೂ ಮುನ್ನ ಹೋಮ ಹವನ ನಡೆಯಲಿದೆ. ಇನ್ನು ಖಾಸಗಿ ದರ್ಬಾರ್ ಹಾಲ್ ನಲ್ಲಿ ಈ ಜೋಡಣೆ ಕಾರ್ಯ ನಡೆಯಲಿದ್ದು, ಪ್ರವಾಸಿಗರಿಗೆ, ಸಾರ್ವಜನಿಕರಿಗೆ ಅಂದು ಅರಮನೆ ಪ್ರವೇಶ ನಿರ್ಬಂಧ ಹೇರಲಾಗಿದೆ.

Leave a Comment

Your email address will not be published. Required fields are marked *