ವಿಡಿಯೋದಲ್ಲಿರುವುದು ನಾನಲ್ಲ, ಅದೊಂದು ಫೇಕ್ ವಿಡಿಯೋ- ಸೆಕ್ಸ್ ವಿಡಿಯೋ ರಿಲೀಸ್ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಡಿವಿಎಸ್

Ad Widget ... ..

ಬೆಂಗಳೂರು: ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರು ವಿಡಿಯೋ ಕಾಲ್ ನಲ್ಲಿ ಅಶ್ಲೀಲವಾಗಿ ಮಾತನಾಡಿರುವುದು, ಲೈಂಗಿಕತೆಯಲ್ಲಿ ತೊಡಗಿರುವುದು ವಿಡಿಯೋ ಬಿಡುಗಡೆಯಾಗಿದೆ.

Ad Widget

ಕೇಂದ್ರದ ಮಾಜಿ ಸಚಿವ, ಮುಖ್ಯಮಂತ್ರಿ ಆಗಿದ್ದ ಸದಾನಂದ ಗೌಡರ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಕಾರಣವಾಗಿದೆ. ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ.

ಯುವತಿಯೊಬ್ಬಳ ಜೊತೆ ವಿಡಿಯೋ ಕಾಲ್​ನಲ್ಲಿ ಸದಾನಂದ ಗೌಡ ಅಸಭ್ಯವಾಗಿ ಮಾತನಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇನ್ನೊಂದು ಕಡೆ ಇದೊಂದು ಪೇಕ್ ವಿಡಿಯೋ ಎಂದು ಕೆಲವರು ಸಮರ್ಥಿಸಿರುವುದನ್ನು ಕೂಡ ಕಾಣಬಹುದು. ಇತ್ತೀಚೆಗೆ ವಿಡಿಯೋ ಬಿಡುಗಡೆಗೆ ನಿರ್ಬಂಧ ಕೋರಿ ಸದಾನಂದ ಗೌಡ ಕೋರ್ಟ್ ಮೆಟ್ಟಲೇರಿದ್ದನ್ನು ಗಮನಿಸಬಹುದಾಗಿದೆ.

ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಪ್ ಪಂತ್ ಗೆ ದೂರು ನೀಡಿದ ಸದಾನಂದಗೌಡರು ‘ನನ್ನ ವಿರುದ್ಧ ಫ್ಯಾಬ್ರಿಕೇಟಡ್, ಫೇಕ್, ಮಿಶ್ರಿತ ವಿಡಿಯೋ ಒಂದನ್ನು ಮಾಡಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ, ನನ್ನ ಇಮೇಜ್ ಹಾಳು ಮಾಡಲೆಂದು ಈ ವಿಡಿಯೋ ಹರಿಬಿಡಲಾಗಿದೆ’ ಎಂದು ಆರೋಪಿಸಿದ್ದಾರೆ.

‘ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ, ಇಂಪರ್ಸೊನೇಷನ್ ಮೂಲಕ ಈ ವಿಡಿಯೋ ಸಿದ್ದಪಡಿಸಲಾಗಿದೆ. ಈ ವಿಡಿಯೋ ಒಬ್ಬರಿಂದ ಒಬ್ಬರಿಗೆ ಹೋಗುವ ಮುನ್ನ ಕ್ರಮ ಕೈಗೊಳ್ಳಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *