ವಾಷಿಂಗ್ಟನ್: ಯುವತಿ ಆರ್ಡರ್ ಮಾಡಿದ ಬರ್ಗರ್‍ನಲ್ಲಿ ಮನುಷ್ಯನ ಬೆರಳು ಸಿಕ್ಕು ಬೆಚ್ಚಿಬೀಳಿಸಿದ ಘಟನೆ ಬೊಲಿವಿಯಾದಲ್ಲಿ ನಡೆದಿದೆ.
ಮಹಿಳೆಯೊಬ್ಬರು ರೆಸ್ಟೋರೆಂಟ್‍ನಿಂದ ಆರ್ಡರ್ ಮಾಡಿ ತರಿಸಿಕೊಂಡ ಬರ್ಗರ್‍ನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿದೆ. ಆ ಚಿತ್ರಗಳನ್ನು ಸೆರೆ ಹಿಡಿದ ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾಳೆ. ಜತೆಗೆ ಗ್ರಾಹಕರ ಸಂರಕ್ಷಣೆ ಸಚಿವಾಲಯದ ಉಪ ಸಚಿವರು ಪ್ರತಿಕ್ರಿಯಿಸುವಂತೆ ಒತ್ತಾಯಿಸಿದ್ದಾರೆ.
ಗ್ರಾಹಕರ ಸಂರಕ್ಷಣೆ ಸಚಿವಾಲಯದ ಉಪ ಸಚಿವ ಜಾರ್ಜ್ ಸಿಲ್ವಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿ, ಕೆಲಸದಲ್ಲಿ ವ್ಯಕ್ತಿ ಅಚಾನಕ್‍ಗಿ ಯಂತ್ರದಿಂದ ಬೆರಳನ್ನು ಕತ್ತರಿಸಿಕೊಂಡಿದ್ದಾನೆ. ಈ ವಿಷಯ ಇದೀಗ ತಿಳಿದು ಬಂದಿದೆ ಎಂದು ಉತ್ತರಿಸಿದ್ದಾರೆ.
ಕಳೆದ ಶುಕ್ರವಾರ ಕೆಲಸಗಾರ ಬೆರಳನ್ನು ಕತ್ತರಿಸಿಕೊಂಡಿದ್ದಾನೆ. ಆತನ ಎರಡು ಬೆರಳು ತುಂಡಾಗಿವೆ. ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಮಾಂಸವನ್ನು ರುಬ್ಬುವ ಯಂತ್ರವನ್ನು ನಿರ್ವಹಿಸುತ್ತಿದ್ದ ಕೆಲಸಗಾರ ತನ್ನ ಎರಡು ಬೆರಳುಗಳನ್ನು ಕಳೆದುಕೊಂಡಿದ್ದಾನೆ. ಕೆಲಸಗಾರನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆತ ಇನ್ನೂ ಗುಣಮುಖನಾಗಿಲ್ಲ ಎಂಬುದು ತಿಳಿದು ಬಂದಿದೆ.
ಮಾಂಸ ರುಬ್ಬುವ ಕಾರ್ಖಾನೆ ಸುಮಾರು 20 ರೆಸ್ಟೋರೆಂಟ್‍ಗಳಿಗೆ ಬರ್ಗರ್‍ಅನ್ನು ಪೂರೈಸುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ. ದುರಾದೃಷ್ಟವಶಾತ್ ಮನುಷ್ಯನ ಬೆರಳು ಮಹಿಳೆ ಆರ್ಡರ್ ಮಾಡಿದ ಬರ್ಗರ್‍ನಲ್ಲಿ ಸಿಕ್ಕಿದೆ. ಈ ಕುರಿತಂತೆ ತನಿಖೆ ನಡೆಯುತ್ತಿದೆ. ಈ ಕೃತ್ಯದ ಹಿಂದಿರುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಾರ್ಜ್ ಸಿಲ್ವಾ ಸ್ಪಷ್ಟಪಡಿಸಿದ್ದಾರೆ.