ಚಿಕ್ಕಮಗಳೂರಲ್ಲೊಂದು‌ ಅಮಾನವೀಯ ಕೃತ್ಯ| ಬಟ್ಟೆ ಬದಲಾಯಿಸುತ್ತಿದ್ದ ಬಾಲಕಿಯ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ…!

ಚಿಕ್ಕಮಗಳೂರು: ಬಟ್ಟೆ ಬದಲಾಯಿಸುತ್ತಿದ್ದ ಅಪ್ರಾಪ್ತ ಬಾಲಕಿಯ ವಿಡಿಯೋ ಚಿತ್ರೀಕರಿಸಿಕೊಂಡಿರುವ ಕಾಮುಕರು, ಆಕೆಗೆ ಬ್ಲಾಕ್ ಮೇಲ್ ಮಾಡಿ ಹೆದರಿಸಿ ನಿರಂತರ ಎರಡು ತಿಂಗಳ ಕಾಲ ಅತ್ಯಾಚಾರ ಮಾಡುತ್ತಿದ್ದ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.

Ad Widget ... ..

ಬಾಲಕಿಯ ವಿಡಿಯೋ ಮಾಡಿಕೊಂಡಿದ್ದ ಕಾಮುಕರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆ ಎಂದು ಹೆದರಿಸುತ್ತಿದ್ದರು. ಕಳೆದ ಎರಡು ತಿಂಗಳಿಂದ ಬಾಲಕಿಯನ್ನು ಹೀಗೆ ಹೆದರಿಸುತ್ತ ಪದೇ ಪದೇ ತಾವು ಕರೆದಾಗ ಆ ಬಾಲಕಿ ಬರಬೇಕು ಎಂದು ಹೇಳುತ್ತಿದ್ದರು ಎನ್ನಲಾಗಿದೆ. ಬಾಲಕಿಯ ಮೇಲೆ ಕಳೆದ ಎರಡು ತಿಂಗಳಿನಿಂದ ಪದೇ ಪದೇ ಅತ್ಯಾಚಾರವೆಸಗಿದ್ದಾರೆ. ಈ ಕೃತ್ಯಕ್ಕೆ ಗ್ರಾಮಸ್ಥನೋರ್ವ ಸಾಥ್ ನೀಡಿದ್ದಾನೆ.

Ad Widget

ಆ ಬಾಲಕಿ ರಸ್ತೆಯಲ್ಲಿ ನಡೆದು ಹೋಗುವಾಗಲೂ ಕೂಡ ಈ ಕಾಮುಕರು ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದಿರುವ ಬಾಲಕಿ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರಿಗಾಗಿ ಬಲೆ ಬೀಸಿದ್ದಾರೆ

Leave a Comment

Your email address will not be published. Required fields are marked *