ಪಶ್ಚಿಮ ವಲಯ ಐಜಿಪಿಯಾಗಿ ಎನ್. ಶಶಿಕುಮಾರ್ ಅಧಿಕಾರ ಸ್ವೀಕಾರ| N Shashikumar takes charge as IGP of Western Range

ಸಮಗ್ರ ನ್ಯೂಸ್: ಪಶ್ಚಿಮ ವಲಯ ಐಜಿಪಿಯಾಗಿ ಎನ್.ಶಶಿಕುಮಾರ್ ನೇಮಕ ಪಶ್ಚಿಮ ವಲಯ ಐಜಿಪಿಯಾಗಿ ಐಪಿಎಸ್ ಅಧಿಕಾರಿ ಸೂಪರ್ ಕಾಪ್ ಆಗಿರುವ ಎನ್.ಶಶಿಕುಮಾರ್ ಅವರನ್ನು ನ.18 ರಂದು ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

. Ad Widget . Ad Widget . Ad Widget

ಪಶ್ಚಿಮ ವಲಯದ ಪ್ರಭಾರ ಐಜಿಪಿಯಾಗಿದ್ದ ಮಂಗಳೂರು ಪೊಲೀಸ್ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಪಶ್ಚಿಮ ವಲಯದ ವ್ಯಾಪ್ತಿಯ ವಿವಿಧ ಕಡೆ ಕರ್ತವ್ಯ ನಿರ್ವಹಿಸಿರುವುದು, ಇಲ್ಲಿನ ಅವಶ್ಯಕತೆಗಳು ಮತ್ತು ಸಮಸ್ಯೆ ಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ. ಜನರಿಗೆ ಉತ್ತಮ ಸೇವೆ ಒದಗಿಸಲು ಒಂದು ತಂಡವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಇದು ನೆರವಾಗಲಿದೆ’ ಎಂದು ತಿಳಿಸಿದರು.

. Ad Widget .

ಸೂಕ್ಷ್ಮ ವಿಚಾರಗಳ ಕುರಿತು ಹಾಗೂ ಸಂಭಾವ್ಯ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಸಂಕ್ಷಿಪ್ತ ಸಭೆ ನಡೆಸುವುದಾಗಿ ಅವರು ಹೇಳಿದರು. ಬುಧವಾರ ಚಿಕ್ಕಮಗಳೂರಿನಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆಯ ನಂತರ ಉಂಟಾದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯ ಕುರಿತು ಪ್ರತಿಕ್ರಿಯಿಸಿದ ಶಶಿಕುಮಾರ್, ‘ತಮ್ಮ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಉತ್ತಮ ಅರಣ್ಯ ಪ್ರದೇಶವಿರುವುದರಿಂದ ಮಾನವ-ವನ್ಯಜೀವಿ ಸಂಘರ್ಷಗಳು ಹೆಚ್ಚಾಗಿ ಕಂಡುಬರುತ್ತವೆ. ಮಾನವ-ವನ್ಯಜೀವಿ ಸಂಘರ್ಷ ಸಂಬಂಧಿ ಸಮಸ್ಯೆ ಗಳನ್ನು ಬಗೆಹರಿಸಲು ಪೊಲೀಸರು ಜಿಲ್ಲಾಡಳಿತಗಳೊಂದಿಗೆ ಕೈಜೋಡಿಸಿ ಕೆಲಸ ಮಾಡಲಿದ್ದಾರೆ’ ಎಂದರು.

Samagra News: N Shashikumar assumed charge as the Inspector General of Police (IGP) of the Western Range on Thursday (November 19).

Upon arriving at the IGP office in Pandeshwar, Mangaluru, he was welcomed with a guard of honour by police officers and staff.

He formally took over the charge from Mangaluru City Police Commissioner Sudheer Kumar Reddy, who had been serving as the in-charge IGP. Subsequently, Shashikumar held a meeting with the Superintendents of Police (SPs) and Additional Superintendents of Police (ASPs) of Dakshina Kannada, Udupi, Chikkamagaluru, and Uttara Kannada districts under the range, reviewing the law and order situation in the region.

Speaking on the occasion, he stated that along with maintaining peace and order, efforts would be made to build a people-friendly policing system. He warned that strict legal action would be taken against illegal activities and those attempting to disturb public peace.

Leave a Comment

Your email address will not be published. Required fields are marked *