ಸಮಗ್ರ ನ್ಯೂಸ್: ಭಾರತದ ಮೇಲೆ ಎಲ್-ನಿನೋ(El Nino) ತೀವ್ರ ಪರಿಣಾಮ ಬೀರಲಿದ್ದು, ಮುಂಬರುವ ಮಾರ್ಚ್ ವೇಳೆಗೆ ದೇಶದಲ್ಲಿ ಸುಮಾರು 55,000 ಅಧಿಕ ಸಾವುಗಳು ಸಂಭವಿಸಬಹುದು ಎಂದು ಹೊಸದಾಗಿ ಬಿಡುಗಡೆಯಾಗಿರುವ ಹವಾಮಾನ ಟ್ರ್ಯಾಕರ್ ಆತಂಕಕಾರಿ(IMD) ಮುನ್ಸೂಚನೆ ನೀಡಿದೆ.
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯದ ಬೆನ್ನಲ್ಲೇ ಪ್ರಶಾಂತ ಮಹಾಸಾಗರದಲ್ಲಿ ತಲೆದೋರಿರುವ ಈ ವಿದ್ಯಮಾನವು ಭಾರತದ ದೆಾಡ್ಡ ಪ್ರಮಾಣದ ಜನಸಂಖ್ಯೆಯನ್ನು ತೀವ್ರ ಅಪಾಯಕ್ಕೆ ನೂಕಲಿದೆ ಎಂದು ವರದಿಗಳು ತಿಳಿಸಿವೆ.
ಅಕ್ಟೋಬರ್ನಿಂದ ಆರಂಭಗೊಂಡು ಮಾರ್ಚ್ ಅವಧಿಯವರೆಗೆ ಎಲ್-ನಿನೋ ಉಂಟುಮಾಡುವ ವಿಪರೀತ ಸೆಕೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರೀ ಸಾವುನೋವುಗಳು ಸಂಭವಿಸುವ ನಿರೀಕ್ಷೆಯಿದೆ. ನೈಜೀರಿಯಾ ದೇಶವು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಅಲ್ಲಿ ಸುಮಾರು 56,000 ಸಾವುಗಳು ಸಂಭವಿಸಬಹುದೆಂದು ಅಂದಾಜಿಸಲಾಗಿದೆ. ಇದರ ಬೆನ್ನಲ್ಲೇ ಭಾರತವು ಎರಡನೇ ಸ್ಥಾನದಲ್ಲಿದ್ದು, ದೇಶದಲ್ಲಿ ಅಂದಾಜು 55,000ಕ್ಕೂ ಅಧಿಕ ಹೆಚ್ಚುವರಿ ಸಾವುಗಳು ಸಂಭವಿಸುವ ಮುನ್ಸೂಚನೆಯನ್ನು ಟ್ರ್ಯಾಕರ್ ನೀಡಿದೆ. ಭಾರತದ ನಂತರದ ಸ್ಥಾನಗಳಲ್ಲಿ ಇಂಡೋನೇಷ್ಯಾ ಮತ್ತು ಬ್ರೆಜಿಲ್ ದೇಶಗಳಿವೆ.
ಮುಂದಿನ ತಿಂಗಳುಗಳಲ್ಲಿ ಉಂಟಾಗಲಿರುವ ಈ ತೀವ್ರ ಪರಿಸ್ಥಿತಿಯು ಭಾರತಕ್ಕೆ ಅತ್ಯಂತ ಕಳವಳಕಾರಿಯಾಗಿದೆ. ನಿರ್ದಿಷ್ಟವಾಗಿ ಬೇಸಿಗೆ ಕಾಲ ಆರಂಭವಾಗುವ ಮುನ್ನ ಮಾರ್ಚ್ ತಿಂಗಳಲ್ಲಿ ತಾಪಮಾನವು ಗಣನೀಯವಾಗಿ ಹೆಚ್ಚಾಗಲಿದ್ದು, ಆ ಸಂದರ್ಭದಲ್ಲಿ ಉಂಟಾಗುವ ತೀವ್ರ ಸೆಕೆಯು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ತೀವ್ರವಾದ ಬಿಸಿಲು, ದೀರ್ಘಕಾಲದ ಸೆಕೆಯ ಅಲೆಗಳು ಹಾಗೂ ಹವಾಮಾನ ವೈಪರೀತ್ಯದಿಂದ ಜನರ ಆರೇವ್ರುಗೆ ದೊಡ್ಡ ಪ್ರಮಾಣದ ಹೊಡೆತ ಬೀಳಲಿದೆ.









