ಇಂದಿನಿಂದ ಹಾಸನಾಂಬ ದೇವಿ ದರ್ಶನ ಆರಂಭ

ಸಮಗ್ರ ನ್ಯೂಸ್: ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹಾಸನದ ಐತಿಹಾಸಿಕ ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರೋತ್ಸವಕ್ಕೆ ಇಂದು (ಗುರುವಾರ) ಚಾಲನೆ ಸಿಗಲಿದೆ. ವರ್ಷಕ್ಕೊಮ್ಮೆ ಮಾತ್ರ ಗರ್ಭಗುಡಿಯ ಬಾಗಿಲು ತೆರೆಯುವ ಈ ಅಪರೂಪದ ವೈಭವದ ಉತ್ಸವವು ಅಕ್ಟೋಬರ್ 29 ರಿಂದ ನವೆಂಬರ್ 8ರವರೆಗೆ ಒಟ್ಟು 11 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.

. Ad Widget . Ad Widget . Ad Widget

ಗುರುವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಾಲಯದ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗುತ್ತದೆ. ಗರ್ಭಗುಡಿಯ ಬಾಗಿಲು ತೆರೆಯುವ ಮುನ್ನ ದೇವಾಲಯದ ಎದುರು ಬಾಳೆಕಂದು ಕಡಿಯುವ ಸಾಂಪ್ರದಾಯಿಕ ಆಚರಣೆಯನ್ನು ರಾಜವಂಶಸ್ಥರಾದ ನಂಜರಾಜ ಅರಸು ಅವರು ನೆರವೇರಿಸಲಿದ್ದಾರೆ.

. Ad Widget .

ಸಂಪ್ರದಾಯದಂತೆ ಮೊದಲನೆಯ ದಿನ ಮತ್ತು ಕೊನೆಯ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ. ಉಳಿದ ದಿನಗಳಲ್ಲಿ ಭಕ್ತರಿಗೆ ಉಚಿತ ದರ್ಶನದ ವ್ಯವಸ್ಥೆ ಇರಲಿದ್ದು, ಶೀಘ್ರ ಹಾಗೂ ಸುಗಮ ದರ್ಶನ ಬಯಸುವವರಿಗಾಗಿ ವಿಶೇಷ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಭಕ್ತರು ₹1000 ಹಾಗೂ ₹300 ರೂ.ಗಳ ವಿಶೇಷ ದರ್ಶನ ಟಿಕೆಟ್‌ಗಳು, ಲಾಡು ಪ್ರಸಾದ, ಇ-ಹುಂಡಿ ಕಾಣಿಕೆ ಮತ್ತು ದೇಣಿಗೆಗಳನ್ನು ಅಧಿಕೃತ ಜಾಲತಾಣವಾದ https://srihassanaambatemple.com/ ಮೂಲಕ ಆನ್‌ಲೈನ್‌ನಲ್ಲೇ ಕಾಯ್ದಿರಿಸಬಹುದಾಗಿದೆ.

Leave a Comment

Your email address will not be published. Required fields are marked *