ಸಮಗ್ರ ನ್ಯೂಸ್: ಮೈಸೂರು ದಸರಾ ಮಹೋತ್ಸವದ ಸಂಭ್ರಮವನ್ನು ಸಾರ್ವಜನಿಕರು ಹಾಗೂ ಯುವ ಜನತೆ ವಿಭಿನ್ನವಾಗಿ ಹಂಚಿಕೊಳ್ಳಲು ಅನುಕೂಲವಾಗುವಂತೆ ರೀಲ್ಸ್ ಪ್ರಿಯರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶೇಷ ಬಹುಮಾನದ ಆಫರ್ ಘೋಷಿಸಿದ್ದಾರೆ.
ಮೈಸೂರಿನಲ್ಲಿ ಕಂಬಳ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಸರಾ ದೀಪಾಲಂಕಾರ, ಜಂಬೂಸವಾರಿ ಅಥವಾ ಆಹಾರ ಮೇಳ ಸೇರಿದಂತೆ ಹಬ್ಬದ ಯಾವುದೇ ವಿಶೇಷ ಕ್ಷಣಗಳ ಕುರಿತು ಯುವಕ-ಯುವತಿಯರು ರೀಲ್ ಮಾಡಿ ಕಳುಹಿಸಬಹುದಾಗಿದೆ ಎಂದು ತಿಳಿಸಿದರು.
ಬಂದಂತಹ ರೀಲ್ಸ್‌ಗಳಲ್ಲಿ ಅತ್ಯುತ್ತಮವಾದ ನೂರು (ಬೆಸ್ಟ್ 100) ರೀಲ್ಸ್‌ಗಳನ್ನು ಆಯ್ಕೆ ಮಾಡಿ ಆಕರ್ಷಕ ಪ್ರಶಸ್ತಿ ಹಾಗೂ ಬಹುಮಾನ ನೀಡುವುದಾಗಿ ಸಿಎಂ ಪ್ರಕಟಿಸಿದ್ದಾರೆ. ದಸರಾ ಉತ್ಸಾಹವನ್ನು ಡಿಜಿಟಲ್ ಮಾಧ್ಯಮದ ಮೂಲಕ ಜಗತ್ತಿಗೆ ಸಾರಲು ಮತ್ತು ಯುವ ಪ್ರತಿಭೆಗಳನ್ನು ಉತ್ತೇಜಿಸಲು ಈ ವಿನೂತನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.








