ಸಮಗ್ರ ನ್ಯೂಸ್: ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆಯಲ್ಲಿ ಬೈಕ್ ತಡೆದು, ಚೂರಿ ತೋರಿಸಿ, ಬೆದರಿಸಿ 2 ಮೊಬೈಲ್ ಮತ್ತು ನಗದು ದರೋಡೆ ಮಾಡಿರುವ ಘಟನೆ ಶುಕ್ರವಾರ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಡಬ ತಾಲ್ಲೂಕು ಕೋನಾಜೆ ಗ್ರಾಮದ ಸಿ.ಆರ್.ಸಿ. ಕಾಲೊನಿ ನಿವಾಸಿ ಮಿಥಿಲೇಶ್ ದೂರು ನೀಡಿದ್ದು, ‘ನಾನು ಮತ್ತು ನನ್ನ ಅತ್ತೆ ಮಗಾಧೇವಿ ಬೆಳ್ತಂಗಡಿ ಕಡೆಯಿಂಂದ ಬೈಕ್ನಲ್ಲಿ ಬರುತ್ತಿದ್ದಾಗ ಆರೋಪಿಗಳಾದ ತನ್ವೀಶ್ ಮತ್ತು ಇನ್ನಿಬ್ಬರು ಕಾರಿನಿಂದ ಇಳಿದು ನನ್ನ ಹಣ ಎಲ್ಲಿ, ಯಾಕೆ ಹಣ ಕೊಟ್ಟಿಲ್ಲ ಎಂದು ಚೂರಿ ತೋರಿಸಿ ಬೆದರಿಸಿ ನನ್ನ ಪ್ಯಾಂಟ್ ಜೇಬಿನಲ್ಲಿದ್ದ ₹3 ಸಾವಿರ ಮೌಲ್ಯದ ಮೊಬೈಲ್ ಮತ್ತು ₹5,200, ಅತ್ತೆಯ ಕೈಯಲ್ಲಿದ್ದ ₹2 ಸಾವಿರ ಮೌಲ್ಯದ ಮೊಬೈಲನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿ ಆಗಿದ್ದಾರೆ’ ಎಂದು ದೂರಿನಲ್ಲಿ ಅಪಾದಿಸಿದ್ದಾರೆ.









