ಅ.17: ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋಧ್ಭವ

ಸಮಗ್ರ ನ್ಯೂಸ್: ಕಾವೇರಿ ನಾಡಿನ ಮಹೋನ್ನತ ಧಾರ್ಮಿಕ ಉತ್ಸವ ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಪವಿತ್ರ ಕಾವೇರಿ ಉಗಮ ಕ್ಷೇತ್ರವಾದ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಅಕ್ಟೋಬರ್ 17ರ ಗುರುವಾರ ರಾತ್ರಿ 7:50 ಕ್ಕೆ ಸಲ್ಲುವ ಮಹೂರ್ತದಲ್ಲಿ ತೀರ್ಥೋದ್ಭವ ಜರುಗಲಿದ್ದು, ತೀರ್ಥ ರೂಪಿಣಿಯಾಗಿ ಕಾವೇರಿ ಮಾತೆ ಭಕ್ತರಿಗೆ ದರ್ಶನ ನೀಡಲಿದ್ದಾಳೆ.

. Ad Widget . Ad Widget . Ad Widget

ಈ ಬಾರಿ ತೀರ್ಥೋದ್ಭವವು ತಡರಾತ್ರಿ ನೆರವೇರಲಿರುವ ಹಿನ್ನೆಲೆಯಲ್ಲಿ ಭಾಗಮಂಡಲದಿಂದ ತಲಕಾವೇರಿವರೆಗಿನ ಸುಮಾರು 10 ಕಿಲೋಮೀಟರ್ ರಸ್ತೆಯುದ್ದಕ್ಕೂ ವಿಶೇಷ ದೀಪಾಲಂಕಾರ ಮಾಡಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ಕಾಲ್ನಡಿಗೆಯಲ್ಲಿ ಹಾಗೂ ವಾಹನಗಳಲ್ಲಿ ಬರುವ ಸಾವಿರಾರು ಭಕ್ತಾದಿಗಳಿಗೆ ಅನುಕೂಲವಾಗುವಂತೆ ಹೈಮಾಸ್ಟ್ ಹಾಗೂ ಸಾಲು ದೀಪಗಳನ್ನು ಅಳವಡಿಸಿ ಇಡೀ ಮಾರ್ಗವನ್ನು ಬೆಳಕಿನ ಮಯಗೊಳಿಸಲಾಗಿದೆ.

. Ad Widget .

ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಶಿಸ್ತುಬದ್ಧ ದರ್ಶನಕ್ಕೆ ಅನುವು ಮಾಡಿಕೊಡಲು ಬ್ರಹ್ಮಕುಂಡಿಕೆಯ ಸುತ್ತಲೂ 6 ಅಡಿ ಎತ್ತರದ ಬ್ಯಾರಿಕೇಡ್ ಹಾಗೂ 4 ಬಾಕ್ಸ್ ಮಾದರಿಯ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಭಕ್ತರ ಸಂಚಾರಕ್ಕಾಗಿ ಏಕಮಾರ್ಗ (One-Way) ವ್ಯವಸ್ಥೆ ಜಾರಿಯಲ್ಲಿದ್ದು, ವಿಐಪಿ ಪ್ರವೇಶಕ್ಕೆ ಪ್ರತ್ಯೇಕ ಹಾದಿ ಕಲ್ಪಿಸಲಾಗಿದೆ. ಪಾರ್ಕಿಂಗ್ ಸ್ಥಳ, ಅನ್ನದಾನ ಕೇಂದ್ರ ಹಾಗೂ ಪ್ರಮುಖ ಜಂಕ್ಷನ್‌ಗಳು ಸೇರಿದಂತೆ ಒಟ್ಟು 49 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಡಿವೈಎಸ್ಪಿ ಮೇದಪ್ಪ ನೇತೃತ್ವದಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ತಲಕಾವೇರಿ ತಲುಪಲು ಸಾಧ್ಯವಾಗದ ಭಕ್ತರಿಗಾಗಿ ಭಾಗಮಂಡಲದಲ್ಲೇ ನೇರ ಪ್ರಸಾರ ವೀಕ್ಷಿಸಲು 1 ಬೃಹತ್ ಎಲ್‌ಇಡಿ ವಾಲ್ ಹಾಗೂ ತಲಕಾವೇರಿಯಲ್ಲಿ 4 ಎಲ್‌ಇಡಿ ಸ್ಕ್ರೀನ್‌ಗಳನ್ನು ನಿರ್ಮಿಸಲಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗೆ ಜಲನಿರೋಧಕ ಛಾವಣಿ ಹಾಕಲಾಗಿದೆ.

Leave a Comment

Your email address will not be published. Required fields are marked *