ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ

ಸಮಗ್ರ ನ್ಯೂಸ್: ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕ ಸೇರಿದಂತೆ ದೇಶದ ಪ್ರಮುಖ 6 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕಿ ಹಾಗೂ ಪಕ್ಷದ ಅತ್ಯುನ್ನತ ಸಂಸದೀಯ ಮಂಡಳಿಯ ಸದಸ್ಯೆಯಾಗಿರುವ ಡಾ.ಸುಧಾ ಯಾದವ್ ಅವರನ್ನು ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.

. Ad Widget . Ad Widget . Ad Widget

ಕೇರಳದ ರಾಜ್ಯಪಾಲರಾಗಿರುವ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ತಮಿಳುನಾಡು ರಾಜ್ಯದ ಪೂರ್ಣಾವಧಿ ಹೊಣೆಯನ್ನು ವಹಿಸಲಾಗಿದೆ.

. Ad Widget .

ಅಂತೆಯೇ, ಸಿಕ್ಕಿಂ ರಾಜ್ಯಪಾಲರಾಗಿದ್ದ ಓಂ ಪ್ರಕಾಶ್ ಮಾಥುರ್​ರನ್ನು ಇದೀಗ ಕೇರಳದ ಗವರ್ನರ್​ ಆಗಿ ವರ್ಗಾಯಿಸಲಾಗಿದೆ. ಇನ್ನುಳಿದಂತೆ, ಒಡಿಶಾ ರಾಜ್ಯಪಾಲರಾಗಿ ಬ್ರಿಜ್ ಮೋಹನ್ ರಾಮ್, ಕರ್ನಾಟಕದ ರಾಜ್ಯಪಾಲರಾಗಿ ಬಿಜೆಪಿ ಮಾಜಿ ಸಂಸದೆ, ಡಾ. ಸುಧಾ ಯಾದವ್, ಉತ್ತರಾಖಂಡಕ್ಕೆ ಧಾಲ್ ಸಿಂಗ್ ಬಿಸೆನ್ ಹಾಗೂ ಸಿಕ್ಕಿಂ ರಾಜ್ಯಪಾಲರಾಗಿ ದುಷ್ಯಂತ್ ಗೌತಮ್ ಅವರನ್ನು ನೇಮಕ ಮಾಡಲಾಗಿದೆ.

Leave a Comment

Your email address will not be published. Required fields are marked *