ಸಮಗ್ರ ನ್ಯೂಸ್: ಮೂಡಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಮಾರ್ಪಾಡಿ ಗ್ರಾಮದ ಕೋಟೆಬಾಗಿಲು ಎಂಬಲ್ಲಿ ಬುಧವಾರ ಸಂಜೆ ದ್ವಿಚಕ್ರ ವಾಹನ ಪಲ್ಟಿ ಹೊಡೆದು ಸ್ಕೂಟರ್‌ನಲ್ಲಿದ್ದ ಮಾರ್ಪಾಡಿ ಕಟ್ಟೆಮನೆ ಸುಧಾಕರ ಹೆಗ್ಡೆ ಅವರ ಪುತ್ರ ಪ್ರಶ್ವಿತ್ ಹೆಗ್ಡೆ (17) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸವಾರ ಕೋಟೆಬಾಗಿಲಿನ ದೀಕ್ಷಿತ್ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಶ್ವಿತ್ ಹೆಗ್ಡೆ ತನ್ನ ತಂದೆಯ ಹೋಟೆಲ್‌ನಲ್ಲಿ ತಿಂಡಿ ತಿಂದು ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ.
ಮತ್ತೊಂದು ಪ್ರಕರಣದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಪುತ್ತಿಗೆಯ ನೆಲ್ಲಿಗುಡ್ಡೆಯಲ್ಲಿ ಡಿಬಿಎಲ್ ಕಂಪನಿ ಕಾರ್ಮಿಕನೊಬ್ಬ ಲಾರಿಯ ಅಡಿಗೆ ಸಿಲುಕಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ರಾಜಸ್ಥಾನದ ಕೋಟ ಜಿಲ್ಲೆಯ ರುದ್ರದೇವ (30) ಮೃತಪಟ್ಟವರು. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.









