ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಐಕ್ಯುಎಸಿ ಆಶ್ರಯದಲ್ಲಿ ಕಾಲೇಜಿನ ಭಾಷಾಸಂಘವು ದ್ವಾರಕಾ ಪ್ರತಿಷ್ಠಾನ (ರಿ.)ಪುತ್ತೂರು ಇದರ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ಮಾತುಗಾರಿಕೆ ಮತ್ತುವಿಷಯದ ಪ್ರಸ್ತುತ ಪಡಿಸುವಿಕೆಯ ಕೌಶಲ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು.
ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ, ಶ್ರೀರಾಮಕುಂಜೇಶ್ವರ ಪದವಿ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಶ್ರೀ ಗಣರಾಜ ಕುಂಬಳೆ ಕಾರ್ಯಗಾರವನ್ನು ಉದ್ಘಾಟಿಸಿ,ವ್ಯವಹಾರಿಕ ಕ್ಷೇತ್ರಗಳಲ್ಲಿ ಮಾತುಗಾರಿಕೆ ಮತ್ತು ಪ್ರಸ್ತುತ ಪಡಿಸುವ ಕೌಶಲವನ್ನು ಬೆಳೆಸಿಕೊಂಡು ಜೀವನದಲ್ಲಿ ಯಶಸ್ಸನ್ನು ಹೊಂದಬೇಕೆಂದು ತಿಳಿಸಿ, ವಿದ್ಯಾರ್ಥಿಗಳಿಗೆ ದ್ವಾರಕಾ ಪ್ರತಿಷ್ಠಾನ ಪುತ್ತೂರು ಇದರ ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ.ಪಿ.ಟಿ.ಅಧ್ಯಕ್ಷತೆ ವಹಿಸಿದ್ದರು. ದ್ವಾರಕಾ ಕಾರ್ಪೋರೇಶನ್ ಪ್ರೈವೇಟ್ ಲಿಮಿಟೆಡ್ ನ ಟ್ರೈನರ್ ಮತ್ತು ಪ್ಲೇಸ್ ಮೆಂಟ್ ಆಫೀಸರ್ ಶ್ರೀಮತಿ ಅಮೃತಾ ಶ್ಯಾನುಭಾಗ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.ಐಕ್ಯುಎಸಿ
ಸಂಯೋಜಕರಾದ ಶ್ರೀಮತಿ ಶ್ರೀಲತಾ ಕಮಿಲ ಶುಭಹಾರೈಸಿದರು.
ಭಾಷಾಸಂಘದ ಸಂಯೋಜಕ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಶ್ರೀ ಉದಯಕುಮಾರ್ ಪ್ರಸ್ತಾವನೆಗೈದು ಸ್ವಾಗತಿಸಿ,ಕು.ದೇವಿಕಾ, ದ್ವಿತೀಯ ಬಿಕಾಂ ವಂದಿಸಿದರು.ಕು.ಶ್ರುತಿ, ಪ್ರಥಮ ಬಿಎ ಪ್ರಾರ್ಥಿಸಿದರು.ಕು.ಲಿಖಿತಾ,ದ್ವಿತೀಯ ಬಿಕಾಂ ಕಾರ್ಯಕ್ರಮ ನಿರೂಪಿಸಿದರು.ಸಂಸ್ಕೃತ ವಿಭಾಗ ಮುಖ್ಯಸ್ಥ ಶ್ರೀ ರಾಮ್ ಪ್ರಸಾದ್,ಇಂಗ್ಲೀಷ್ ವಿಭಾಗ ಮುಖ್ಯಸ್ಥ ಶ್ರೀ ಶ್ರಜನ್ ಮುಂಡೋಡಿ,ಹಿಂದಿ ವಿಭಾಗ ಮುಖ್ಯಸ್ಥೆ ಕು.ಭಕ್ತಿಶ್ರೀ,ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ವನಿತಾ,ಕನ್ನಡ ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ಸುಮಿತ್ರಾ ಕುಮಾರಿ.ಎ ಉಪಸ್ಥಿತರಿದ್ದರು.ಒಟ್ಟು 60 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.








