ಇಸ್ರೇಲ್ ಗೆ ತೆರಳುತ್ತಿದ್ದ ‘ಪ್ಲೈ ದುಬೈ’ ವಿಮಾನ ಹೈಜಾಕ್ ಗೆ ಯತ್ನ| ಪ್ರಾಣ ಒತ್ತೆಯಿಟ್ಟು ಉಗ್ರ ದಾಳಿಯನ್ನು ತಡೆದ ಭಾರತೀಯ ಪೈಲಟ್

ಸಮಗ್ರ ನ್ಯೂಸ್: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ‘ಫ್ಲೈದುಬೈ’ (FZ1073) ವಿಮಾನದಲ್ಲಿದ್ದ ಒಮಾನಿ ಮೂಲದ ಸಹ-ಪೈಲಟ್ ನಡೆಸಿದ ಭೀಕರ ಉಗ್ರ ದಾಳಿಯ ಯತ್ನವನ್ನು ತಡೆದಿದ್ದು ಭಾರತೀಯ ಮೂಲದ ಮುಖ್ಯ ಪೈಲಟ್ (ಕ್ಯಾಪ್ಟನ್) ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ.

. Ad Widget . Ad Widget . Ad Widget

ಈ ಮೂಲಕ ಅವರು ಅಮೆರಿಕದ 9/11 ಮಾದರಿಯ ಬೃಹತ್ ದುರಂತವೊಂದನ್ನು ತಪ್ಪಿಸಿ, 180ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದ್ದಾರೆ ಎಂದು ಇಸ್ರೇಲ್‌ನ ‘ವೈನೆಟ್ ನ್ಯೂಸ್’ ಮತ್ತು ‘ಚಾನೆಲ್ 12’ ಮಾಧ್ಯಮಗಳು ವರದಿ ಮಾಡಿವೆ.

. Ad Widget .

ವರದಿಗಳ ಪ್ರಕಾರ, ವಿಮಾನವು ಆಗಸದಲ್ಲಿ ಹಾರಾಡುತ್ತಿದ್ದಾಗ ಉಗ್ರ ಮನಸ್ಥಿತಿಯ ಒಮಾನಿ ಸಹ ಪೈಲಟ್, ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ಭೀಕರವಾಗಿ ದಾಳಿ ನಡೆಸಿದ್ದಾನೆ. ಚಾಕು ಇರಿತಕ್ಕೊಳಗಾಗಿಯೂ ಧೈರ್ಯಗುಂದದ ಭಾರತೀಯ ಕ್ಯಾಪ್ಟನ್, ಸಹ ಪೈಲಟ್ ವಿಮಾನವನ್ನು ನೆಲಕ್ಕೆ ಅಪ್ಪಳಿಸದಂತೆ ಅಥವಾ ಹೈಜಾಕ್ ಮಾಡದಂತೆ ತೀವ್ರವಾಗಿ ಪ್ರತಿರೋಧ ಒಡ್ಡಿದ್ದಾರೆ. ಈ ವೇಳೆ ಕಂಟ್ರೋಲ್ ರೂಮ್‌ ನಿಂದ ಹೊರಬಂದ ಕಿರುಚಾಟ ಕೇಳಿ, ಪ್ರಯಾಣಿಕರೊಂದಿಗೆ ಪ್ರಯಾಣಿಸುತ್ತಿದ್ದ ಸಾಧಾರಣ ಉಡುಪಿನಲ್ಲಿದ್ದ ಇತರೆ ಪೈಲಟ್‌ಗಳು ಹಾಗೂ ಪ್ರಯಾಣಿಕರು ಕಾಕ್ ಪೀಟ್ ಗೆ ಧಾವಿಸಿ ದಾಳಿಕೋರನನ್ನು ಬಂಧಿಸಿದ್ದಾರೆ. ಬಳಿಕ, ಪ್ರಯಾಣಿಕರ ತಂಡದಲ್ಲಿದ್ದ ಪೈಲಟ್‌ಗಳು ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಈ ಸಂಘರ್ಷದ ವೇಳೆ ಚಾಕುವಿನಿಂದ ಹಲ್ಲೆಗೊಳಗಾದ ಅವರು ರಕ್ತಸಿಕ್ತರಾಗಿ, ಮಾತನಾಡಲು ಪರದಾಡುವ ಸ್ಥಿತಿಯಲ್ಲಿದ್ದರು. ಅದೇ ಸಮಯದಲ್ಲಿ ವಿಮಾದಲ್ಲಿ ಇದ್ದ ಪ್ರಯಾಣಿಕರು ಅವರನ್ನು ‘ವೀರ’ ಎಂದು ಶ್ಲಾಘಿಸುತ್ತಿರುವುದು ದೃಶ್ಯಗಳಲ್ಲಿ ಕಂಡುಬಂದಿತು. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಭಾರತೀಯ ಕ್ಯಾಪ್ಟನ್ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಸೌದಿ ಅರೇಬಿಯಾದ ತಬುಕ್‌ ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನದಲ್ಲಿದ್ದ ಇಸ್ರೇಲಿ ದಂತವೈದ್ಯರೊಬ್ಬರು ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರುಮಾಡಲು ನೆರವಾಗಿದ್ದಾರೆ. ದಾಳಿಕೋರ ಸಹ- ಪೈಲಟ್ ಕೂಡ ಆಸ್ಪತ್ರೆಯಲ್ಲಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ.

Leave a Comment

Your email address will not be published. Required fields are marked *