MRPL ನಲ್ಲಿ ಸ್ಪೋಟ ಪ್ರಕರಣ| ಗಾಯಾಳುಗಳ ಸಂಖ್ಯೆ 9ಕ್ಕೆ ಏರಿಕೆ

ಸಮಗ್ರ ನ್ಯೂಸ್: ಮಂಗಳೂರಿನ ಜೋಕಟ್ಟೆಯಲ್ಲಿರುವ ಮಂಗಳೂರು ರಿಫೈನರಿ ಆ್ಯಂಡ್​ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್)ನ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಟೆಸ್ಟಿಂಗ್​​ ಮಾಡುವ ಸಂದರ್ಭದಲ್ಲಿ ಭಾರೀ ಸ್ಫೋಟ ಸಂಭವಿಸಿರುವ ಘಟನೆ ನಡೆದಿದೆ. ‘ಅವಘಡದಲ್ಲಿ 9 ಕಾರ್ಮಿಕರಿಗೆ  ಗಾಯಗಳಾಗಿದ್ದು, ಪ್ರಸ್ತುತ ಬೆಂಕಿ ನಿಯಂತ್ರಣಕ್ಕೆ ಬಂದಿದೆ’ ಎಂದು ಮಂಗಳೂರು ಜಿಲ್ಲಾಧಿಕಾರಿ ದರ್ಶನ್​​ ಹೆಚ್​ವಿ ಮಾಹಿತಿ ನೀಡಿದ್ದಾರೆ.

. Ad Widget . Ad Widget . Ad Widget

ಸುರತ್ಕಲ್ ನಿವಾಸಿ ರಾಜೇಶ್​​​ಗೆ ಶೇಕಡಾ 35ರಷ್ಟು ಗಾಯಗಳಾಗಿದ್ದು, ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಪ್ರಸಾದ್​, ಇಂದ್ರಜೀತ್​, ರಾಮನ್​ಗೆ ಎಜಿ ಆಸ್ಪತ್ರೆಗೆ ಮತ್ತು ಗಾಯಾಳುಗಳಾದ ಜೆರೋಮ್​, ಜಯರಾಮ್​, ಅವಿನಾಶ್ ಹಾಗೂ ಅಕ್ಷಯ್​ ಎಂಬುವರಿಗೆ MRPL ಆಸ್ಪತ್ರೆಗೆ ದಾಖಲಿಸಲಾಗಿದೆ.

. Ad Widget .

ಇಂದು ಮಧ್ಯಾಹ್ನ 12.15 ಗಂಟೆಗೆ ಎಂಆರ್‌ಪಿಎಲ್​​ನ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಟೆಸ್ಟಿಂಗ್​​ ಮಾಡುವ ಸಂದರ್ಭದಲ್ಲಿ ಭಾರೀ ಸ್ಫೋಟ ಸಂಭವಿಸಿದೆ. 11.30 ಗಂಟೆಗೆ ಶಿಫ್ಟ್ ಬದಲಾವಣೆ ಹಿನ್ನೆಲೆ ಘಟಕದಿಂದ ಕಾರ್ಮಿಕರು ಹೊರ ಹೋಗಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಆದರೆ 9 ಕಾರ್ಮಿಕರು ಗಾಯಗೊಂಡಿದ್ದಾರೆ. ಒಂದೆ ವೇಳೆ ಕಾರ್ಮಿಕರು ಒಳಗೆ ಇದ್ದಿದ್ದರೆ ಭಾರೀ ಸಾವು ನೋವು ಸಾಧ್ಯತೆ ಇತ್ತು ಎನ್ನಲಾಗಿದೆ.

Leave a Comment

Your email address will not be published. Required fields are marked *