ಎಲ್‌ನಿನೋ ಪ್ರಭಾವ| ಬರದ ಭೀತಿಯಲ್ಲಿ ದಕ್ಷಿಣ ಕನ್ನಡ

ಸಮಗ್ರ ನ್ಯೂಸ್: ಜಾಗತಿಕ ಹವಾಮಾನ ವೈಪರೀತ್ಯದ ಸಂಕೇತವಾಗಿರುವ ಎಲ್ ನಿನೊ ಪ್ರಭಾವದಿಂದಾಗಿ ಕರಾವಳಿ ಭಾಗದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಭೀಕರ ಮಳೆ ಕೊರತೆ ದಾಖಲಾಗಿದೆ. ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಯಥೇಚ್ಛ ಮಳೆ ಮತ್ತು ಹಸಿರಿನಿಂದ ಕಂಗೊಳಿಸಬೇಕಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಈ ಬಾರಿ ಮಳೆಗಾಲದ ಅವಧಿಯಲ್ಲೇ ಭೀಕರ ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ.

. Ad Widget . Ad Widget

ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಾದ್ಯಂತ ವಾಡಿಕೆಗಿಂತ ಬರೋಬ್ಬರಿ ಶೇ.29ರಷ್ಟು ಕಡಿಮೆ ಮಳೆಯಾಗಿದ್ದು, ಇಡೀ ಕರಾವಳಿ ವಲಯ ಬರದ ಆತಂಕಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಮಳೆ ಕೊರತೆಯ ಪ್ರಮಾಣ ಶೇ.33 ತಲುಪಿದರೆ ಆ ಪ್ರದೇಶವನ್ನು ಬರಪೀಡಿತ ಎಂದು ಘೋಷಿಸಲಾಗುತ್ತದೆ. ಪ್ರಸ್ತುತ ಪರಿಸ್ಥಿತಿ ನೋಡಿದರೆ, ಮುಂಬರುವ ಹಿಂಗಾರು ಮಳೆಯೂ ಕೈಕೊಟ್ಟರೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಅಧಿಕೃತವಾಗಿ ಘೋಷಿಸುವುದು ಅನಿವಾರ್ಯವಾಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಬೆಳ್ತಂಗಡಿ, ಮಂಗಳೂರು ಹಾಗೂ ಮೂಲ್ಕಿ ತಾಲೂಕುಗಳಲ್ಲಿ ಅತ್ಯಂತ ಗರಿಷ್ಠ ಪ್ರಮಾಣದ ಮಳೆ ಕೊರತೆ ದಾಖಲಾಗಿದೆ.

. Ad Widget . . Ad Widget . Ad Widget

ಈ ಹಠಾತ್ ಹವಾಮಾನ ಬದಲಾವಣೆಯು ಕರಾವಳಿಯ ಜೀವನಾಡಿಯಾಗಿರುವ ಕೃಷಿ ವಲಯಕ್ಕೆ ಭಾರಿ ಆಘಾತ ನೀಡಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಭತ್ತದ ಬೆಳೆಗೆ ಅತ್ಯಗತ್ಯವಾಗಿ ಬೇಕಿದ್ದ ಜಿಟಿಜಿಟಿ ಮಳೆ ಸಂಪೂರ್ಣವಾಗಿ ಮಾಯವಾಗಿದೆ. ಸುಡುವ ಬಿಸಿಲಿನ ಝಳಕ್ಕೆ ಹಚ್ಚ ಹಸಿರಿನಿಂದ ಕಂಗೊಳಿಸಬೇಕಿದ್ದ ಭತ್ತದ ಪೈರುಗಳು ಒಣಗಿ ಬಣ್ಣ ಬದಲಿಸುತ್ತಿವೆ. ನೀರಿನ ಒರತೆ ತಳ ಸೇರುತ್ತಿರುವುದರಿಂದ ಈ ಬಾರಿ ಒಟ್ಟು ಭತ್ತದ ಇಳುವರಿಯಲ್ಲಿ ಶೇ.40 ರಿಂದ ಶೇ.50 ರಷ್ಟು ಭಾರಿ ಕುಸಿತ ಉಂಟಾಗುವ ಭೀತಿ ಎದುರಾಗಿದೆ. 75 ವರ್ಷಗಳ ಇತಿಹಾಸದಲ್ಲೇ ಇಂತಹ ಭೀಕರ ಪರಿಸ್ಥಿತಿಯನ್ನು ಕಂಡಿರಲಿಲ್ಲ ಎಂದು ಹಿರಿಯ ಪ್ರಗತಿಪರ ಕೃಷಿಕರು ಅಳಲು ತೋಡಿಕೊಂಡಿದ್ದಾರೆ. ಡಿಸೆಂಬರ್ ಬಳಿಕ ಕುಡಿಯುವ ನೀರು ಮತ್ತು ಕೃಷಿಗೆ ತೀವ್ರ ತತ್ವಾರ ಎದುರಾಗುವ ಮುನ್ಸೂಚನೆ ಇದ್ದು, ಜಿಲ್ಲಾಡಳಿತವು ಈಗಿನಿಂದಲೇ ತುರ್ತು ಬರ ನಿರ್ವಹಣಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

Leave a Comment

Your email address will not be published. Required fields are marked *