ಸಮಗ್ರ ನ್ಯೂಸ್: ಲೈಂಗಿಕ ಹಗರಣದಲ್ಲಿ ಜೈಲುಪಾಲಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲು ಸೇರಿ ಎರಡು ವರ್ಷವಾದರೂ ಬುದ್ಧಿ ಕಲಿತಿಲ್ಲ. ಇದೀಗ ಜೈಲಿನಲ್ಲಿಯೂ ಸಹ ಅಶ್ಲೀಲ ಚಿತ್ರಗಳನ್ನು ಪ್ರಜ್ವಲ್ ರೇವಣ್ಣ ನೋಡುತ್ತಿದ್ದ ಎಂದು ತಿಳಿದು ಬಂದಿದೆ.
ಅಂದಹಾಗೆ, ಎರಡು ದಿನಗಳ ಹಿಂದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ನಡೆಸಿದ ದಾಳಿ ನಡೆಸಿತ್ತು. ಈ ವೇಳೆ ಅತ್ಯಾಚಾರ ಪ್ರಕರಣದ ಸಜಾ ಕೈದಿ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಕೊಠಡಿಯಲ್ಲಿ (ಸೆಲ್) ಮೊಬೈಲ್ ಹಾಗೂ ಪೆನ್‌ಡ್ರೈವ್‌ಗಳು ಪತ್ತೆಯಾಗಿತ್ತು. ಇದೀಗ ಜೈಲಿನಲ್ಲೂ ಪ್ರಜ್ವಲ್ ರೇವಣ್ಣ ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದರು ಎಂದು ತಿಳಿದು ಬಂದಿದೆ.
ಸಿಸಿಬಿ ದಾಳಿ ವೇಳೆ ಜಪ್ತಿಯಾದ ಪೆನ್‌ಡ್ರೈವ್‌ನಲ್ಲಿ 70ಕ್ಕೂ ಹೆಚ್ಚಿನ ಅಶ್ಲೀಲ ವಿಡಿಯೋಗಳು ಮತ್ತು ಪ್ರಜ್ವಲ್ ರೇವಣ್ಣ ಕೋಣೆಯಲ್ಲಿದ್ದ ಹಾಸಿಗೆ ಕೆಳಗೆ, ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ನಟಿಯರು ಹಾಗೂ ರೂಪದರ್ಶಿಗಳ ಅರೆನಗ್ನ ಫೋಟೋಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಮೊಬೈಲ್ ಮತ್ತು ಪೆನ್‌ಡ್ರೈವ್ ಪತ್ತೆಯಾದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಹಾಗೂ ಸಹ ಕೈದಿ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜೊತೆಗೆ ವಿಶೇಷ ಭದ್ರತಾ ವಿಭಾಗದಿಂದ ಸಾಮಾನ್ಯ ಕೈದಿಗಳ ಬ್ಯಾರಕ್‌ಗೆ ಪ್ರಜ್ವಲ್ ರೇವಣ್ಣನನ್ನು ಕಾರಾಗೃಹ ಅಧಿಕಾರಿಗಳು ಎತ್ತಂಗಡಿ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣನ ಸೆಲ್‌ನಲ್ಲಿ ಪತ್ತೆಯಾದ ಮೊಬೈಲ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಸಾಮಾಜಿಕ ಜಾಲತಾಣಗಳ ಆಯಪ್‌ಗಳು ಡೌನ್ ಲೋಡ್ ಆಗಿರುವುದು ಪತ್ತೆಯಾಗಿದೆ. ಜೈಲಿನಲ್ಲಿದ್ದ ಟಿವಿಗೆ ಪೆನ್‌ಡ್ರೈವ್ ಕನೆಕ್ಟ್ ಮಾಡಿ ಚಲನಚಿತ್ರ ನೋಡಿದ್ದಾಗಿ ಸಿಸಿಬಿ ವಿಚಾರಣೆ ವೇಳೆ ಪ್ರಜ್ವಲ್ ಹಾಗೂ ಪ್ರತಾಪ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.












