ಸುಳ್ಯ: ತೂಗುಸೇತುವೆಗಳ ಸರದಾರ, ಪದ್ಮಶ್ರೀ ಗಿರೀಶ್ ಭಾರದ್ವಾಜ್ ಇನ್ನಿಲ್ಲ

ಸಮಗ್ರ ನ್ಯೂಸ್: ತೂಗುಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜರು ಇಂದು(ಜು.7) ಮುಂಜಾನೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ‌ನಿಧನರಾದರು. ಅವರಿಗೆ ಸುಮಾರು 76 ವರ್ಷ ವಯಸ್ಸಾಗಿತ್ತು.

Ad Widget ... .. Ad Widget .

ಗಿರೀಶ್ ಭಾರದ್ವಾಜರು ಕೆಲ ದಿನಗಳ ಹಿಂದೆ ಉತ್ತರಕಾಂಡದಲ್ಲಿ ದೇವಸ್ಥಾನದಲ್ಲಿ ಗಳಿಗೆ ಹೋಗಿ ಬಂದಿದ್ದರು. ಹೃದಯ ಸಂಬಂಧಿ ಸಮಸ್ಯೆಯಿಂದ ಅವರು ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇಂದು ಮುಂಜಾನೆ ತೀವ್ರ ಅಸ್ವಸ್ಥಗೊಂಡ ಅವರು ಕೊನೆಯುಸಿರೆಳೆದರು.

Ad Widget

ಭಾರತದಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ೧೨೫ ಕ್ಕಿಂತ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿದ ಸಮಾಜಸೇವಕ. ಇದಕ್ಕಾಗಿ ಅವರಿಗೆ ಸೇತು ಬಂಧು ಮತ್ತು ಬ್ರಿಡ್ಜ್‌ಮ್ಯಾನ್ ಆಫ್ ಇಂಡಿಯಾ ಎಂದು ಹೆಸರು ಬಂದಿದೆ. ಅವರಿಗೆ ೨೦೧೭ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು.

ಅವರು ತಮ್ಮ ಮೊದಲ ಸೇತುವೆಯನ್ನು ೧೯೮೯ ರಲ್ಲಿ ದಕ್ಷಿಣ ಕನ್ನಡದ ಅರಂಬೂರಿನಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ನಿರ್ಮಿಸಿದರು. ಅವರು ಕೇರಳದಲ್ಲಿ ಸುಮಾರು ಮೂವತ್ತು ಸೇತುವೆಗಳನ್ನು ನಿರ್ಮಿಸಿದ್ದಾರೆ. ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ತಲಾ ಎರಡು ಸೇತುವೆಗಳನ್ನು ನಿರ್ಮಿಸಿದ್ದಾರೆ. ಅವರ ಉಳಿದ ಕೆಲಸಗಳು ಕರ್ನಾಟಕದ ವಿವಿಧ ಭಾಗಗಳಲ್ಲಿವೆ.

Leave a Comment

Your email address will not be published. Required fields are marked *