ಸಮಗ್ರ ನ್ಯೂಸ್: ಜೂನ್ 29 ರಿಂದ ಜುಲೈ 5ರ ವರೆಗಿನ ವಾರದಲ್ಲಿ ಗ್ರಹಗತಿಗಳ ಬದಲಾವಣೆಯೊಂದಿಗೆ ಎಲ್ಲಾ 12 ರಾಶಿಗಳ ಜೀವನದಲ್ಲಿ ಮಹತ್ವದ ಏರಿಳಿತಗಳನ್ನು ತರಲಿದೆ. ಈ ವಾರ ಯಾರಿಗೆ ಅದೃಷ್ಟ ಒಲಿಯಲಿದೆ? ಯಾರು ಜಾಗರೂಕರಾಗಿರಬೇಕು? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ:
ವಾರದ ಆರಂಭವು ಸಂತೋಷ ಮತ್ತು ಸಕಾರಾತ್ಮಕತೆಯಿಂದ ಕೂಡಿರಲಿದೆ. ಒಡಹುಟ್ಟಿದವರು ಮತ್ತು ಸ್ನೇಹಿತರೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಸುಧಾರಣೆ ಕಂಡುಬರಲಿದ್ದು, ಹಿರಿಯ ಅಧಿಕಾರಿಗಳ ಬೆಂಬಲ ಸಿಗಲಿದೆ. ಈ ವಾರದಲ್ಲಿ ಇತರರ ಅಭಿಪ್ರಾಯಗಳ ಮೇಲೆ ಹೆಚ್ಚು ಅವಲಂಬಿತರಾಗಬೇಡಿ, ಸ್ವಂತ ನಿರ್ಧಾರ ತೆಗೆದುಕೊಳ್ಳಿ. ವಾಹನ ಚಾಲನೆ ಮತ್ತು ಸಾಹಸದ ಪ್ರವೃತ್ತಿಗಳಲ್ಲಿ ಎಚ್ಚರಿಕೆ ಅಗತ್ಯ.
ವೃಷಭ ರಾಶಿ:
ಈ ವಾರವು ಚೇತರಿಕೆ ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸಲು ಸೂಕ್ತವಾಗಿದೆ. ವಾರದ ಆರಂಭದಲ್ಲಿ ಹಳೆಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ನಿಮ್ಮ ಪೋಷಕರ ಆರೋಗ್ಯ ಸುಧಾರಿಸಲಿದೆ. ಸ್ಥಗಿತಗೊಂಡಿದ್ದ ಯೋಜನೆಗಳು ಮತ್ತೆ ವೇಗ ಪಡೆದುಕೊಳ್ಳಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ನಷ್ಟಗಳು ಲಾಭವಾಗಿ ಬದಲಾಗುವ ಸಾಧ್ಯತೆ ಇದೆ. ಆಧ್ಯಾತ್ಮಿಕ ಅಥವಾ ಧಾರ್ಮಿಕ ಪ್ರವಾಸ ಕೈಗೊಳ್ಳುವ ಯೋಗವಿದೆ.
ಮಿಥುನ ರಾಶಿ:
ವಾರದ ಆರಂಭವು ಕುಟುಂಬದೊಂದಿಗೆ ಸಂತೋಷದಿಂದ ಕಳೆಯಲು ಉತ್ತಮವಾಗಿದೆ. ಆದರೆ ವಾರದ ಮಧ್ಯಭಾಗದಲ್ಲಿ ಸಣ್ಣಪುಟ್ಟ ಹಿನ್ನಡೆ ಹಾಗೂ ಮಾನಸಿಕ ಒತ್ತಡ ಎದುರಾಗಬಹುದು. ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಿ. ಯಾವುದೇ ಆತುರದ ಹೂಡಿಕೆ ಅಥವಾ ರಿಸ್ಕ್ ತೆಗೆದುಕೊಳ್ಳಲು ಹೋಗಬೇಡಿ. ಸಂಗಾತಿ ಅಥವಾ ಕುಟುಂಬದವರಿಂದ ಆರ್ಥಿಕ ಸಹಾಯ ಸಿಗಬಹುದು. ವಾರಾಂತ್ಯದ ವೇಳೆಗೆ ಪರಿಸ್ಥಿತಿ ತಿಳಿಯಾಗಲಿದ್ದು, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮರಳಲಿದೆ.
ಕಟಕ ರಾಶಿ:
ಈ ರಾಶಿಯವರಿಗೆ ಪ್ರೇಮ ಜೀವನ ಮತ್ತು ವೃತ್ತಿಜೀವನದಲ್ಲಿ ಮಿಶ್ರಫಲವಿರಲಿದೆ. ವಾರದ ಆರಂಭದಲ್ಲಿ ಮಕ್ಕಳಿಂದ ಶುಭ ವಾರ್ತೆ ಹಾಗೂ ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಉದ್ಯೋಗಿಗಳಿಗೆ ಹೊಸ ಆಫರ್‌ಗಳು ಬರುವ ಸಾಧ್ಯತೆ ಇದೆ. ಅವಿವಾಹಿತರಿಗೆ ಕುಟುಂಬದ ಕಡೆಯಿಂದ ವಿವಾಹದ ಪ್ರಸ್ತಾಪಗಳು ಬರಬಹುದು. ಶುಕ್ರವಾರದ ದಿನ ಕೆಲಸದಲ್ಲಿ ಹೆಚ್ಚು ಶ್ರಮ ವಹಿಸಿ ಸೋಮಾರಿತನದಿಂದ ಇರುವುದು ಕಡಿಮೆ ಮಾಡಿ.
ಸಿಂಹ ರಾಶಿ:
ಈ ವಾರ ಆತ್ಮವಿಶ್ವಾಸ ಹೆಚ್ಚಾಗಿಸುವ ವಾರ್ತೆಯನ್ನು ಕೇಳುತ್ತೀರಿ. ನಿಮ್ಮ ಮುಖದಲ್ಲಿ ಎಂದೂ ಕಾಣದ ಹಗುರತೆ, ಸಂತೋಷ ಈ ವಾರ ಇರಲಿದೆ. ಉದ್ಯೋಗಸ್ಥರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಿದ್ದು, ಮೇಲಧಿಕಾರಿಗಳ ಗಮನ ಸೆಳೆಯಲಿದ್ದಾರೆ. ವ್ಯಾಪಾರಿಗಳು ಉದ್ಯಮ ವಿಸ್ತರಣೆಗೆ ಹೊಸ ಯೋಜನೆ ರೂಪಿಸಬಹುದು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಸಿಗುವ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರುತ್ತದೆ.
ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಈ ವಾರ ಕೌಟುಂಬಿಕ ನೆಮ್ಮದಿ ಮತ್ತು ಆರ್ಥಿಕ ಲಾಭಗಳು ಕಾಯುತ್ತಿವೆ. ಆಸ್ತಿ ಖರೀದಿ, ಮನೆ ದುರಸ್ತಿ ಅಥವಾ ಸ್ಥಳಾಂತರದ ಆಲೋಚನೆ ಇದ್ದರೆ ಈ ವಾರ ಪೂರಕವಾಗಿದೆ. ನಿರೀಕ್ಷಿಸದ ಮೂಲಗಳಿಂದ ಹಣ ಹರಿದುಬರಬಹುದು. ವಾರದ ಮಧ್ಯದಲ್ಲಿ ಕೌಟುಂಬಿಕ ಅಗತ್ಯಗಳಿಗಾಗಿ ಖರ್ಚುಗಳು ಹೆಚ್ಚಾಗಲಿವೆ. ಸಂಗಾತಿಯಿಂದ ಸಂಪೂರ್ಣ ಕೌಟುಂಬಿಕ ಸಹಕಾರ ಸಿಗಲಿದೆ.
ತುಲಾ ರಾಶಿ:
ಕುಟುಂಬದೊಂದಿಗೆ ಕಳೆಯುವ ಸಮಯವು ಮನಸ್ಸಿಗೆ ಶಾಂತಿ ಮತ್ತು ಆನಂದವನ್ನು ನೀಡುತ್ತದೆ. ಕೌಟುಂಬಿಕ ಸಾಮರಸ್ಯ ಚೆನ್ನಾಗಿರಲಿದ್ದು, ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಕ್ಷಣಗಳನ್ನು ಕಳೆಯಲಿದ್ದೀರಿ. ವೃತ್ತಿ ರಂಗದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಕುಟುಂಬದ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಹೊಸ ಪಾಲುದಾರಿಕೆ ಅಥವಾ ಉದ್ಯಮಗಳನ್ನು ಆರಂಭಿಸಲು ವಾರ ಯೋಗ್ಯವಾಗಿದೆ.
ವೃಶ್ಚಿಕ ರಾಶಿ:
ಕೆಲಸದ ಸ್ಥಳದಲ್ಲಿ ನಿಮ್ಮ ಪ್ರದರ್ಶನ ಉತ್ತಮವಾಗಿರಲಿದ್ದು, ಪ್ರೋತ್ಸಾಹಕ ಧನ ಅಥವಾ ಬಹುಮಾನಗಳು ಸಿಗಬಹುದು. ಕುಟುಂಬದ ಸದಸ್ಯರ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಬಗೆಹರಿಯಲಿವೆ. ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಅವಕಾಶಗಳು ದೊರೆಯಲಿವೆ. ಆದರೆ, ವಾರದ ಕೆಲವು ದಿನಗಳಲ್ಲಿ ಮಾನಸಿಕ ಉದ್ವೇಗ ಹಾಗೂ ದೈಹಿಕ ಆಯಾಸ ಕಾಡಬಹುದು, ವಿಶ್ರಾಂತಿಗೆ ಆದ್ಯತೆ ನೀಡಿ.
ಧನು ರಾಶಿ:
ಯಾವುದೇ ಆತುರದ ಮತ್ತು ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ. ವಾರದ ಆರಂಭದಲ್ಲಿ ಸಮಾಜದಲ್ಲಿ ಗೌರವ ಹಾಗೂ ಮನ್ನಣೆ ಸಿಗಲಿದೆ. ನಿಮ್ಮ ಮಾತುಗಳು ಇತರರನ್ನು ಸುಲಭವಾಗಿ ಆಕರ್ಷಿಸಲಿವೆ. ವಾರದ ದ್ವಿತೀಯಾರ್ಧದಲ್ಲಿ ಶ್ರಮಕ್ಕೆ ತಕ್ಕ ಫಲ ಸಿಗಲಿದೆ, ಯಾವುದೇ ಶಾರ್ಟ್‌ಕಟ್ ಬಳಸಬೇಡಿ. ಒಡಹುಟ್ಟಿದವರ ಬೆಂಬಲ ನಿಮಗಿರುತ್ತದೆ.
ಮಕರ ರಾಶಿ:
ವಾರದ ಕೆಲವು ದಿನಗಳಲ್ಲಿ ಅತೃಪ್ತಿ ಮತ್ತು ಅಸಮಾಧಾನ ಮೂಡಬಹುದು. ತಾಳ್ಮೆಯ ಕೊರತೆಯಿಂದಾಗಿ ಕೆಲಸದಲ್ಲಿ ಸಣ್ಣಪುಟ್ಟ ತಪ್ಪುಗಳು ಸಂಭವಿಸುವ ಸಾಧ್ಯತೆ ಇದೆ. ಮಾನಸಿಕ ಶಾಂತಿಗಾಗಿ ಯೋಗ, ಧ್ಯಾನ ಮಾಡುವುದು ಅಥವಾ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದು ಒಳ್ಳೆಯದು. ವಾರದ ಅಂತ್ಯದ ವೇಳೆಗೆ ಆತ್ಮವಿಶ್ವಾಸ ಮರಳಲಿದ್ದು, ಹೊಸ ಸವಾಲುಗಳನ್ನು ಸ್ವೀಕರಿಸಲು ಸಿದ್ಧರಾಗುತ್ತೀರಿ.
ಕುಂಭ ರಾಶಿ:
ಚಂದ್ರನ ಶುಭ ದೃಷ್ಟಿಯಿಂದಾಗಿ ವಾರವು ಧನಾತ್ಮಕವಾಗಿರುತ್ತದೆ. ಕಠಿಣ ಪರಿಸ್ಥಿತಿಗಳಲ್ಲೂ ತಾಳ್ಮೆಯಿಂದ ಕೆಲಸ ನಿರ್ವಹಿಸಿ ಯಶಸ್ಸು ಪಡೆಯುತ್ತೀರಿ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿದ್ದು, ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಕೆಲಸದ ಸ್ಥಳದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
ಮೀನ ರಾಶಿ:
ಮೀನ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಮನ್ನಣೆ ಮತ್ತು ಸುಧಾರಿತ ಅವಕಾಶಗಳು ಸಿಗಲಿವೆ. ಪೂರ್ವಜರ ಆಸ್ತಿ ಅಥವಾ ಪರಂಪರಾಗತ ಲಾಭಗಳು ನಿಮ್ಮದಾಗುವ ಯೋಗವಿದೆ. ನಿಮ್ಮ ಸಂವಹನ ಕೌಶಲ್ಯದಮೂಲಕ ಉದ್ಯೋಗದಲ್ಲಿ ಹೊಸ ಪ್ರಗತಿ ಸಾಧಿಸಲಿದ್ದೀರಿ. ಕಡಿಮೆ ಶ್ರಮದಲ್ಲೇ ದೈನಂದಿನ ಕೆಲಸಗಳು ಪೂರ್ಣಗೊಳ್ಳಲಿವೆ.







