ಭರ್ಜರಿ ಕುಸಿತ ಕಂಡ ಬಂಗಾರದ ದರ| ಆಭರಣ ಪ್ರಿಯರಿಗೆ ದಿಲ್ ಖುಷ್

ಸಮಗ್ರ ನ್ಯೂಸ್: ಸತತವಾಗಿ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಜೂನ್‌ 16 ರಿಂದ ಆರಂಭವಾದ ಚಿನ್ನದ ಬೆಲೆಯ ಕುಸಿತ ಇಂದು ಮತ್ತೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಒಂದೇ ದಿನಕ್ಕೆ 10 ಗ್ರಾಂ ಬೆಲೆಯಲ್ಲಿ ಬರೋಬ್ಬರಿ 3650 ರೂ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ 10 ಸಾವಿರ ರೂ ಕಡಿತಗೊಂಡಿದೆ. ಈಕ್ವಿಟಿ ಮಾರುಕಟ್ಟೆ ಹೆಚ್ಚು ಲಾಭದಾಯಕ ಎಂದೆನಿಸಿದ್ದರಿಂದ ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಕುಸಿದಿದ್ದು, ಬೆಲೆ ಇಳಿಕೆಗೆ ಕಾರಣವಾಗಿದೆ.

Ad Widget ... .. Ad Widget .

ಜೂನ್ 19 2026 ಶುಕ್ರವಾರದಂದು , 24 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 365 ರೂ ಇಳಿಕೆ ಆಗಿದ್ದು, 14,586 ರೂ ದಾಖಲಾಗಿದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ 3650 ರೂ ಇಳಿಕೆಯಾಗಿದ್ದು 1,45,860 ರೂಪಾಯಿ ದಾಖಲಾಗಿದೆ.

Ad Widget

22 ಕ್ಯಾರೆಟ್ ಚಿನ್ನದ ಬೆಲೆಯೂ ಇಳಿಕೆಯಾಗಿದೆ. 1 ಗ್ರಾಂ ಬೆಲೆ 335 ರೂ ಇಳಿಕೆಯಾಗಿ 13370 ರೂ ಆಗಿದ್ದು 10 ಗ್ರಾಂ ಬೆಲೆ 3350 ರೂ ಇಳಿಕೆಯಾಗಿ, ಈಗ ಬೆಲೆ 1,33,700 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆ ಇಂದು 10 ಸಾವಿರ ಇಳಿಕೆಯಾಗಿದೆ.. ಗ್ರಾಂ ಬೆಲೆ 250 ರೂ ಆಗಿದ್ದು,, 2,50,000 ರೂ ದಾಖಲಾಗಿದೆ.

ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.15ಕ್ಕೆ ಏರಿಸಿದ್ದರ ಪರಿಣಾಮ ಬಂಗಾರದ ಆಮದು ಸುಮಾರು ಶೇ. 70ರಷ್ಟು ಇಳಿಕೆಯಾಗಿದೆ. ಮೇ 13ರಿಂದ ಜಾರಿಗೆ ಬರುವಂತೆ ಕೇಂದ್ರ ಸರಕಾರ ಬಂಗಾರ ಹಾಗೂ ಬೆಳ್ಳಿ ಮೇಲಿನ ಆಮದು ಸುಂಕವನ್ನು ಶೇ.6ರಿಂದ ಶೇ.15ಕ್ಕೆ ಹೆಚ್ಚಿಸಿತ್ತು. ಇದರ ಪರಿಣಾಮ ಚಿನ್ನ ಆಮದು ಈಗ 25-30 ಟನ್‌ಗಳಿಗೆ ಇಳಕೆಯಾಗಿದೆ ಎಂದು ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

Leave a Comment

Your email address will not be published. Required fields are marked *