ಹಾರ್ಮೋಜ್ ಜಲಸಂಧಿ ಸಂಚಾರಕ್ಕೆ ಮುಕ್ತ| ಭಾರತಕ್ಕೆ ಬಂದ LNG ತುಂಬಿದ ಹಡಗು

ಸಮಗ್ರ ನ್ಯೂಸ್: ಅಮೆರಿಕ ಸೇನಾ ದಿಗ್ಬಂಧನ ತೆರವಾದ ನಂತರ ಹಾರ್ಮೋಜ್ ಜಲಸಂಧಿಯಿಂದ ಭಾರತಕ್ಕೆ ಇಂಧನ ಹೊತ್ತ ಹಡಗುಗಳು ಬರಲಾರಂಭಿಸಿವೆ. ಅಮೆರಿಕ-ಇರಾನ್ ನಡುವಿನ ತಾತ್ಕಾಲಿಕ ಒಪ್ಪಂದದ ಮೇಲಿರುವ ಈ ವ್ಯವಸ್ಥೆಯು ಮುಂದಿನ 60 ದಿನಗಳವರೆಗೆ ಜಗತ್ತಿಗೆ ಕುತೂಹಲ ಮೂಡಿಸಿದೆ. ಅಮೆರಿಕ ಸೇನಾ ದಿಗ್ಬಂಧನ ತೆರವುಗೊಳಿಸಿದ ನಂತರ ಹಾರ್ಮೋಜ್ ಜಲಸಂಧಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ.

Ad Widget ... .. Ad Widget .

ಭಾರತಕ್ಕೆ ಹೊರಟಿದ್ದ ಮೊದಲ ಹಡಗು ಇಂದು ಗುಜರಾತ್‌ನ ದಹೇಜ್ ಬಂದರನ್ನು ತಲುಪಲಿದೆ. ಈ ಹಡಗು ಬರೋಬ್ಬರಿ 62,370 ಮೆಟ್ರಿಕ್ ಟನ್ ಎಲ್‌ಎನ್‌ಜಿ (ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್) ಹೊತ್ತು ತರುತ್ತಿದೆ.

Ad Widget

ಯುದ್ಧದ ಕಾರಣದಿಂದಾಗಿ ಈ ಹಡಗು ಕಳೆದ ಮೂರು ತಿಂಗಳಿಂದಲೂ ಹೆಚ್ಚು ಕಾಲ ಅಲ್ಲೇ ಸಿಲುಕಿಕೊಂಡಿತ್ತು. ಇಂಧನ ಮತ್ತು ರಸಗೊಬ್ಬರಗಳನ್ನು ಹೊತ್ತಿರುವ ಇನ್ನೂ 34 ಭಾರತೀಯ ಹಡಗುಗಳು ಶೀಘ್ರದಲ್ಲೇ ಭಾರತಕ್ಕೆ ಬರಲಿವೆ. ಕೇಂದ್ರ ಸರ್ಕಾರವು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ.

‘ದಿಶಾ’ ಹೆಸರಿನ ಹಡಗು ಯಶಸ್ವಿಯಾಗಿ ಜಲಸಂಧಿಯನ್ನು ದಾಟಿದ ಹಿನ್ನೆಲೆಯಲ್ಲಿ, ಇಂಧನ ಮತ್ತು ರಸಗೊಬ್ಬರಗಳನ್ನು ಹೊತ್ತಿರುವ ಉಳಿದ 34 ಭಾರತೀಯ ಹಡಗುಗಳು ಕೂಡ ಭಾರತದತ್ತ ಪ್ರಯಾಣ ಬೆಳೆಸಲು ಸಿದ್ಧವಾಗಿವೆ.

ಇತ್ತೀಚೆಗೆ ಓಮನ್ ಕರಾವಳಿ ಬಳಿ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ಹಡಗುಗಳ ಸುರಕ್ಷತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಈ ಹಡಗುಗಳು ಹಾರ್ಮೋಜ್ ಜಲಸಂಧಿ ದಾಟಿ ಭಾರತಕ್ಕೆ ಬಂದ ನಂತರ, ದೇಶದಲ್ಲಿ ಕೆಲವು ದಿನಗಳಿಂದ ಉಂಟಾಗಿದ್ದ ಇಂಧನ ಬಿಕ್ಕಟ್ಟು ನಿವಾರಣೆಯಾಗಲಿದೆ ಎಂದು ಸರ್ಕಾರ ಭಾವಿಸಿದೆ.

ಒಪ್ಪಂದದ ಪ್ರಕಾರ, ಮುಂದಿನ 30 ದಿನಗಳಲ್ಲಿ ಇರಾನ್‌ನ ಸಂಪೂರ್ಣ ನೌಕಾ ದಿಗ್ಬಂಧನವನ್ನು ತೆಗೆದುಹಾಕಲು ಅಮೆರಿಕ ಒಪ್ಪಿಕೊಂಡಿದೆ. ಯುದ್ಧಕ್ಕೂ ಮೊದಲು ಹಡಗುಗಳು ಯಾವುದೇ ಅಡೆತಡೆ ಇಲ್ಲದೆ ಸಂಚರಿಸುತ್ತಿದ್ದ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲಾಗುತ್ತದೆ. ಅಂತಿಮ ಒಪ್ಪಂದಕ್ಕೆ ಸಹಿ ಹಾಕಿದ 30 ದಿನಗಳೊಳಗೆ, ಅಮೆರಿಕವು ಇರಾನ್ ಸುತ್ತಮುತ್ತಲಿನ ಆಯಕಟ್ಟಿನ ಪ್ರದೇಶಗಳಿಂದ ತನ್ನ ಬೃಹತ್ ಸೇನೆಯನ್ನು ಶಾಶ್ವತವಾಗಿ ಹಿಂಪಡೆಯಲಿದೆ ಎಂಬುದು ಈ ಒಪ್ಪಂದದ ಅತಿದೊಡ್ಡ ಟ್ವಿಸ್ಟ್.

Leave a Comment

Your email address will not be published. Required fields are marked *