ಅಮೇರಿಕಾ – ಇರಾನ್ ನಡುವಿನ ಮಹಾಸಮರ ಅಂತ್ಯ| ಹಾರ್ಮೋಜ್ ತೆರವು, ನಿಟ್ಟುಸಿರು ಬಿಟ್ಟ ಜಗತ್ತು

ಸಮಗ್ರ ನ್ಯೂಸ್: ಜಾಗತಿಕ ಆರ್ಥಿಕತೆ ಮತ್ತು ತೈಲ ಮಾರುಕಟ್ಟೆಯನ್ನು ತಲ್ಲಣಗೊಳಿಸಿದ್ದ ಅಮೆರಿಕ ಹಾಗೂ ಇರಾನ್ ನಡುವಿನ ಮಹಾ ಸಮರಕ್ಕೆ ಕೊನೆಗೂ ಶಾಶ್ವತ ಬ್ರೇಕ್ ಬೀಳುವ ಕಾಲ ಸನ್ನಿಹಿತವಾಗಿದೆ. ಕಳೆದ 100ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿದ್ದ ಭೀಕರ ಯುದ್ಧ ಮತ್ತು ರಾಜತಾಂತ್ರಿಕ ಹಗ್ಗಜಗ್ಗಾಟಕ್ಕೆ ತೆರೆಬಿದ್ದಿದ್ದು, ಉಭಯ ದೇಶಗಳ ನಡುವಿನ ಶಾಂತಿ ಒಪ್ಪಂದ ಅಂತಿಮಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಮಹತ್ವದ ಬೆಳವಣಿಗೆಯಿಂದಾಗಿ ಇಡೀ ಜಗತ್ತಿಗೆ ತೈಲ ಬಿಕ್ಕಟ್ಟಿನ ಆತಂಕದಿಂದ ದೊಡ್ಡ ಮುಕ್ತಿ ಸಿಕ್ಕಂತಾಗಿದೆ.

Ad Widget ... .. Ad Widget .

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರೂತ್ ಸೋಷಿಯಲ್’ ಖಾತೆಯಲ್ಲಿ ಈ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜೊತೆಗಿನ ಒಪ್ಪಂದವು ಈಗ ಪೂರ್ಣಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು! ನಾನು ಇಂದಿನಿಂದ ಹಾರ್ಮುಜ್ ಜಲಸಂಧಿಯನ್ನು ಟೋಲ್-ಮುಕ್ತವಾಗಿ ಮುಕ್ತಗೊಳಿಸಲು ಸಂಪೂರ್ಣ ಅಧಿಕಾರ ನೀಡುತ್ತಿದ್ದೇನೆ. ಹಾಗೆಯೇ, ಅಮೆರಿಕ ನೌಕಾಪಡೆಯ ದಿಗ್ಬಂಧನವನ್ನು ತಕ್ಷಣವೇ ತೆಗೆದುಹಾಕಲು ಆದೇಶಿಸುತ್ತಿದ್ದೇನೆ. ವಿಶ್ವದ ಹಡಗುಗಳೇ, ನಿಮ್ಮ ಇಂಜಿನ್‌ಗಳನ್ನು ಸ್ಟಾರ್ಟ್ ಮಾಡಿ. ತೈಲವು ಮುಕ್ತವಾಗಿ ಹರಿಯಲಿ!’ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.

Ad Widget

ಫೆಬ್ರವರಿ 28ರಂದು ಆರಂಭವಾಗಿದ್ದ ಈ ಯುದ್ಧದಿಂದಾಗಿ ಹೊರ್ಮುಝ್ ಜಲಸಂಧಿ ಬಂದ್ ಆಗಿತ್ತು. ಆದರೆ ಈಗ ಇರಾನ್ ಕೂಡ ಈ ಒಪ್ಪಂದವನ್ನು ಖಚಿತಪಡಿಸಿದ್ದು, ಇವತ್ತು ರಾತ್ರಿಯಿಂದಲೇ ಹೊರ್ಮುಝ್ ಮುಕ್ತಗೊಳ್ಳಲಿದೆ ಎಂದು ತಿಳಿಸಿದೆ.

ಇರಾನ್ ಮಾಧ್ಯಮಗಳ ಪ್ರಕಾರ, ‘ದೇವರ ಕೃಪೆಯಿಂದಾಗಿ ದುಷ್ಟ ಅಮೆರಿಕನ್ ಮತ್ತು ಜಿಯೋನಿಸ್ಟ್ ಶತ್ರುಗಳಿಗೆ ಶರಣಾಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂಬುದನ್ನು ನಮ್ಮ ಹೋರಾಟಗಾರರು ಸಾಬೀತುಪಡಿಸಿದ್ದಾರೆ. ಆದರೆ, ಈ ಒಪ್ಪಂದದ ಅರ್ಥ ನಮ್ಮ ಶತ್ರುವನ್ನು ಪೂರ್ತಿಯಾಗಿ ನಂಬುವುದು ಎಂದಲ್ಲ. ಇದನ್ನು ಅಪನಂಬಿಕೆಯೊಂದಿಗೇ ಅಂತಿಮಗೊಳಿಸಲಾಗಿದೆ. ಅಮೆರಿಕದ ಬದ್ಧತೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತೇವೆ’ ಎಂದು ಇರಾನ್ ಹೇಳಿದೆ. ಮುಂದಿನ 60 ದಿನಗಳ ಕದನ ವಿರಾಮದ ಅವಧಿಯಲ್ಲಿ ಅಂತಿಮ ಒಪ್ಪಂದದ ಮಾತುಕತೆಗಳು ಮುಂದುವರಿಯಲಿವೆ.

Leave a Comment

Your email address will not be published. Required fields are marked *