ಸಮಗ್ರ ನ್ಯೂಸ್: ಜಗತ್ತಿನ ಮಹಾನ್ ಉದ್ಯಮಿ, ಟೆಕ್ ದಂತಕಥೆ ಎಲೋನ್ ಮಸ್ಕ್ ಈಗ ಜಗತ್ತಿನ ಇತಿಹಾಸದಲ್ಲೇ ಮೊದಲ ಟ್ರಿಲಿಯನೇರ್ (ಲಕ್ಷ ಕೋಟಿ ಡಾಲರ್ ಒಡೆಯ) ಎಂಬ ಐತಿಹಾಸಿಕ ಮತ್ತು ಅದ್ಭುತ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಮಸ್ಕ್ ಒಡೆತನದ ಬಾಹ್ಯಾಕಾಶ ಸಂಸ್ಥೆಯಾದ ಸ್ಪೇಸ್‌ಎಕ್ಸ್ ಜಾಗತಿಕ ಷೇರು ಮಾರುಕಟ್ಟೆಗೆ ಲಗ್ಗೆ ಇಟ್ಟ ಬೆನ್ನಲ್ಲೇ, ಅವರ ಆಸ್ತಿ ಮೌಲ್ಯವು ಜಗತ್ತಿನ ಯಾವುದೇ ವ್ಯಕ್ತಿ ಇದುವರೆಗೆ ತಲುಪದ ಅತಿ ದೊಡ್ಡ ಮೈಲಿಗಲ್ಲನ್ನು ದಾಟಿದೆ.
ವಾಲ್ ಸ್ಟ್ರೀಟ್‌ನ ನಾಸ್ದಾಕ್ (Nasdaq) ಮಾರುಕಟ್ಟೆಯಲ್ಲಿ SPCX ಹೆಸರಿನಲ್ಲಿ ಸ್ಪೇಸ್‌ಎಕ್ಸ್ ವಹಿವಾಟು ಆರಂಭಿಸುತ್ತಿದ್ದಂತೆ ಷೇರುಗಳು ಶೇ. 11 ಕ್ಕೂ ಹೆಚ್ಚು ಜಿಗಿತ ಕಂಡು 150 ಡಾಲರ್ ತಲುಪಿದ್ದು, ಮಸ್ಕ್ ಸಂಪತ್ತನ್ನು ಗಗನಕ್ಕೇರಿಸಿದೆ. ವಿಶ್ವದ ಅತಿ ದೊಡ್ಡ IPO ಇದು ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಸಾರ್ವಕಾಲಿಕ ಬೃಹತ್ ಐಪಿಒ (IPO) ಪ್ರಕ್ರಿಯೆಯನ್ನು ಸ್ಪೇಸ್‌ಎಕ್ಸ್ ಪೂರ್ಣಗೊಳಿಸಿದೆ
ಐಪಿಒನಲ್ಲಿ ಪ್ರತಿ ಷೇರಿಗೆ $135 ರಂತೆ ಒಟ್ಟು 55.56 ಕೋಟಿ ಷೇರುಗಳನ್ನು ಮಾರಾಟ ಮಾಡಿ ಬರೋಬ್ಬರಿ $75 ಬಿಲಿಯನ್ (ಸುಮಾರು ₹6.2 ಲಕ್ಷ ಕೋಟಿ) ಬಂಡವಾಳವನ್ನು ಮಾರುಕಟ್ಟೆಯಿಂದ ಬಾಚಿಕೊಂಡಿದೆ.
ಕಂಪನಿಗೆ ಕೇವಲ 75 ಬಿಲಿಯನ್ ಡಾಲರ್ ಅಗತ್ಯವಿತ್ತು. ಆದರೆ ಹೂಡಿಕೆದಾರರು ಬರೋಬ್ಬರಿ $250 ಬಿಲಿಯನ್ (₹20 ಲಕ್ಷ ಕೋಟಿಗೂ ಅಧಿಕ) ಹಣ ಹೂಡಲು ಬಿಡ್ ಸಲ್ಲಿಸಿ ಮುಗಿಬಿದ್ದಿದ್ದರು
ಇದರೊಂದಿಗೆ 2019 ರಲ್ಲಿ ಸೌದಿಯ ತೈಲ ಸಂಸ್ಥೆ ಸೌದಿ ಅರಾಮ್ಕೋ ($29.4 ಬಿಲಿಯನ್) ನಿರ್ಮಿಸಿದ್ದ ಜಗತ್ತಿನ ಅತಿ ದೊಡ್ಡ ಐಪಿಒ ದಾಖಲೆಯನ್ನು ಸ್ಪೇಸ್‌ಎಕ್ಸ್ ಎರಡೂವರೆ ಪಟ್ಟು ಹೆಚ್ಚು ಹಣ ಸಂಗ್ರಹಿಸುವ ಮೂಲಕ ಧೂಳಿಪಟ ಮಾಡಿದೆ. ಐಪಿಒ ನಂತರ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯ 2 ಟ್ರಿಲಿಯನ್ ಡಾಲರ್ ದಾಟಿದ್ದು, ಅಮೆರಿಕದ 6ನೇ ಅತಿ ದೊಡ್ಡ ಸಾರ್ವಜನಿಕ ಕಂಪನಿಯಾಗಿದೆ.








