ಸಮಗ್ರ ನ್ಯೂಸ್ : ಬೆಂಗಳೂರಿನಿಂದ ಬಿಹಾರಕ್ಕೆ ತೆರಳುತ್ತಿದ್ದ ರೈಲಿನ ಬೋಗಿ ಬೆರ್ಪಟ್ಟ ಘಟನೆ
ತಡವಾಗಿ ಬೆಳಕಿಗೆ ಬಂದಿದೆ.
ಮೇ 23 ರಂದು ತಡರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣದಿಂದ (Bengaluru SMVT Station) ಬಿಹಾರಕ್ಕೆ ತೆರಳುತ್ತಿದ್ದ ದಾನಪೂರ್ ವಿಶೇಷ ರೈಲು ಚಲಿಸುತ್ತಿದ್ದಾಗಲೇ ಜಾಯಿಂಟ್ ವೀಲ್ ಕಟ್ಟಾಗಿತ್ತು. ಮೇ 24 ರಂದು ಆಂಧ್ರ ಪ್ರದೇಶದ ವಿಜಯವಾಡ ನಿಲ್ದಾಣ ದಾಟಿ 30 ಕಿಮೀ ದೂರದಲ್ಲಿ 100 ಕಿಮೀ ವೇಗದಲ್ಲಿ ಚಲಿಸುತ್ತಿದ್ದಾಗ ಜಾಯಿಂಟ್ ವೀಲ್ ಕಟ್ಟಾಗಿ ಪ್ರಯಾಣಿಕರಿದ್ದ ಬೋಗಿ ಹಾಗೂ ಇಂಜಿನ್ ಇದ್ದ ಬೋಗಿ ಬೇರ್ಪಟ್ಟಿತ್ತು.
ಅದೃಷ್ಟವಶಾತ್ ರೈಲು ನಿಯಂತ್ರಣ ಕಳೆದುಕೊಳ್ಳದ ಕಾರಣ ಹಾಗೂ ಲೋಕೋಪೈಲಟ್ನ ಸಮಯ ಪ್ರಜ್ಞೆ ಮುಂದಾಗುವ ಅನಾಹುತ ತಪ್ಪಿಸಿತ್ತು. ಘಟನೆ ಬಳಿಕ 4 ಘಂಟೆಗಳ ಕಾಲ ರೈಲು ಸಂಚಾರ ವಿಳಂಬಗೊಂಡಿತ್ತು.







