ಪುತ್ತೂರು: ದೇವಸ್ಥಾನದ ಅಭಿವೃದ್ಧಿಗೆ ಕಠಿಣ ಹೆಜ್ಜೆ ಇರಿಸಿದ ಶಾಸಕ‌ ಅಶೋಕ್ ಕುಮಾರ್ ರೈ

ಸಮಗ್ರ ನ್ಯೂಸ್: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಾಗೂ ರಥಬೀದಿ ವಿಸ್ತರಣೆಗಾಗಿ ಉಳ್ಳಾಲ್ತಿ ಕಟ್ಟೆಯ ಬಳಿಯಿರುವ ಖಾಸಗಿ ಜಾಗವನ್ನು ಯಾವುದೇ ಬೆಲೆ ತೆತ್ತಾದರೂ ವಶಪಡಿಸಿಕೊಳ್ಳಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

Ad Widget ... ..

ಈ ಕುರಿತು ಮಾತನಾಡಿದ ಅವರು, “ದೇವಸ್ಥಾನಕ್ಕೆ ಆ ಜಾಗದ ಅವಶ್ಯಕತೆಯಿದೆ. ಸಂಬಂಧಪಟ್ಟವರ ಜೊತೆ ಈಗಾಗಲೇ ಮಾತುಕತೆ ನಡೆಸಲಾಗುವುದು. ಅವರು 2 ಎಕರೆ ಜಾಗವನ್ನು ದೇವಸ್ಥಾನಕ್ಕೆ ನೀಡಬೇಕು. ಅದಕ್ಕೆ ಬೇಕಾದ ಹಣವನ್ನು ದೇವಸ್ಥಾನದ ಮೂಲಕವೇ ನೀಡಲಾಗುವುದು.

Ad Widget

ಒಂದು ವೇಳೆ ಅವರು ಸಹಕರಿಸದಿದ್ದರೆ, ರಸ್ತೆ ವಿಸ್ತರಣೆಗೆ ಜಾಗ ವಶಪಡಿಸಿಕೊಳ್ಳುವ ಮಾದರಿಯಲ್ಲೇ ಕಾನೂನುಬದ್ಧವಾಗಿ ಸರ್ಕಾರದ ಮೂಲಕ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು,” ಎಂದು ಎಚ್ಚರಿಸಿದರು.ಪುತ್ತೂರಿನ ಅಭಿವೃದ್ಧಿಗಾಗಿ ನಾನು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿರುವಂತೆ, ಅಭಿವೃದ್ಧಿ ಪಥದಲ್ಲಿ ಸಾಗುವಾಗ ಕಠಿಣ ಹೆಜ್ಜೆಗಳು ಅನಿವಾರ್ಯ. ಜಾಗದ ಮಾಲೀಕರಿಗೆ ಮಾರುಕಟ್ಟೆ ದರದ ಮೂರು ಪಟ್ಟು ಹಣ ನೀಡಿ ಜಾಗ ಪಡೆಯಲು ಅವಕಾಶವಿದೆ. ಅಗತ್ಯ ಬಿದ್ದರೆ ನ್ಯಾಯಾಲಯಕ್ಕೆ ಹಣ ಕಟ್ಟಿ ಜಾಗವನ್ನು ವಶಕ್ಕೆ ಪಡೆಯುತ್ತೇವೆ,” ಎಂದರು.

ಮಹಾಲಿಂಗೇಶ್ವರ ದೇವರ ತೀರ್ಥಸ್ನಾನ ನಡೆಯುವ ವೀರಮಂಗಲ ಕ್ಷೇತ್ರವನ್ನು ಉತ್ತರ ಭಾರತದ ಪ್ರಯಾಗ್ ರಾಜ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಯಿದೆ. ನದಿಯ ಎರಡೂ ಬದಿಯ ಜಾಗವನ್ನು ವಶಕ್ಕೆ ಪಡೆದು ಸುಂದರಗೊಳಿಸಲಾಗುವುದು ಎಂದು ಶಾಸಕರು ಇದೇ ಸಂದರ್ಭದಲ್ಲಿ ವಿವರಿಸಿದರು.

Leave a Comment

Your email address will not be published. Required fields are marked *