24 ಗಂಟೆಗಳ ನಿರಂತರ ಕೂಚುಪುಡಿ ನೃತ್ಯ| ಗೋಲ್ಡನ್ ಬುಕ್ ನಲ್ಲಿ ದಾಖಲೆ ಬರೆದ ಸುಳ್ಯದ ಅಭಿಷೇಕ್

ಸುಳ್ಯ: ಇಲ್ಲಿನ ನೆಹರೂ ಸ್ಮಾರಕ ಮಹಾವಿದ್ಯಾಲಯದ ಎರಡನೇ ವರ್ಷದ ಬಿಎಸ್‌ಸಿ ವಿದ್ಯಾರ್ಥಿ ಮಂಡೆಕೋಲಿನ ಅಭಿಷೇಕ್ ಕಣೆಮರಡ್ಕ ನಿರಂತರ 24 ಗಂಟೆಗಳ ಕಾಲ ಕೂಚುಪುಡಿ ನೃತ್ಯ ಪ್ರದರ್ಶನ ನೀಡುವ ಮೂಲಕ ಗೋಲ್ಡನ್ ಬುಕ್ ದಾಖಲೆ ಬರೆದಿದ್ದಾರೆ. ನೆಹರೂ‌‌ ಸ್ಮಾರಕ ಕಾಲೇಜಿನ ಸಭಾಂಗಣದಲ್ಲಿ ಏ.11ರಂದು ಸಂಜೆ 6.30ರಿಂದ ಆರಂಭಗೊಂಡು ಏ.12ರ ಸಂಜೆ 6.30ರ ತನಕ ನಿರಂತರ 24 ಗಂಟೆ ಕುಚ್ಚುಪುಡಿ ನೃತ್ಯ ಮಾಡಿದರು.

Ad Widget ... ..

ಗೋಲ್ಡನ್ ಬುಕ್ ಆಪ್ ವಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದು ದಾಖಲೆ ನಿರ್ಮಿಸಬೇಕೆಂಬ ಹಂಬಲದಿಂದ ಅಭಿಷೇಕ್ ಕುಚುಪುಡಿ ಪ್ರದರ್ಶನ ನೀಡಿದರು. ಗೋಲ್ಡನ್ ಬುಕ್ ಆಪ್ ವಲ್ಡ್ ರೆಕಾರ್ಡ್‌ನ ಅಧಿಕಾರಿಗಳು ಆಗಮಿಸಿ ಅಭಿಷೇಕ್‌ನ ಪ್ರದರ್ಶನ ವೀಕ್ಷಣೆ ಮಾಡಿ ದಾಖಲಿಸಿದರು.

Ad Widget

ಮಂಡೆಕೋಲಿನ ರವಿ ಕಣೆಮರಡ್ಕ ಹಾಗೂ ಸುಜಾತ ದಂಪತಿಗಳ ಪುತ್ರ ಅಭಿಷೇಕ್ ಚಿಕ್ಕ ಪ್ರಾಯದಿಂದಲೇ ನೃತ್ಯ, ಭರತನಾಟ್ಯ, ಕೂಚುಪುಡಿ ಅಭ್ಯಸಿಸಿರುತ್ತಾರೆ. 16 ವರ್ಷಗಳಿಂದ ಭರತನಾಟ್ಯ ಕಲಿಯುತ್ತಿರುವ ಅಭಿಷೇಕ್ ಜೂನಿಯರ್, ಸೀನಿಯರ್ ಉತ್ತೀರ್ಣರಾಗಿದ್ದಾರೆ. ವಿದ್ವತ್ ಪರೀಕ್ಷೆಯ ತಯಾರಿಯಲ್ಲಿದ್ದಾರೆ.

Leave a Comment

Your email address will not be published. Required fields are marked *