ಡ್ರಿಂಕ್ ಆ್ಯಂಡ್ ಡ್ರೈವ್| ಮಾಜಿ ಕ್ರಿಕೆಟರ್ ಡೇವಿಡ್ ವಾರ್ನರ್ ಅರೆಸ್ಟ್

ಸಮಗ್ರ ನ್ಯೂಸ್: ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮತ್ತು ಕ್ರಿಕೆಟ್ ದಿಗ್ಗಜ ಡೇವಿಡ್ ವಾರ್ನರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದ ಮೇಲೆ ಸಿಡ್ನಿ ಪೊಲೀಸರು ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

. Ad Widget . Ad Widget . Ad Widget .

ವರದಿಗಳ ಪ್ರಕಾರ, ಏಪ್ರಿಲ್ 5, 2026ರ ಭಾನುವಾರ ಸಂಜೆ ಸುಮಾರು 5:30ಕ್ಕೆ ಸಿಡ್ನಿಯ ಮರೂಬ್ರಾ (Maroubra) ಎಂಬಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ವಾರ್ನರ್ ಚಲಾಯಿಸುತ್ತಿದ್ದ ವ್ಯಾನ್, ತಪಾಸಣಾ ಕೇಂದ್ರಕ್ಕಿಂತ ಸ್ವಲ್ಪ ದೂರದಲ್ಲೇ ನಿಂತಿದೆ. ಇದನ್ನು ಗಮನಿಸಿದ ಸಂಚಾರ ಪೊಲೀಸರು ವಾಹನದ ಬಳಿ ಹೋಗಿ ವಾರ್ನರ್ ಅವರಿಗೆ ಶ್ವಾಸ ವಿಶ್ಲೇಷಕ (Breath Test) ಪರೀಕ್ಷೆ ನಡೆಸಿದಾಗ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಸದ್ಯ ಪಾಕಿಸ್ತಾನ ಸೂಪರ್ ಲೀಗ್ (PSL) 2026ರಲ್ಲಿ ಕರಾಚಿ ಕಿಂಗ್ಸ್ ತಂಡದ ನಾಯಕನಾಗಿ ಆಡುತ್ತಿರುವ ವಾರ್ನರ್, ಪಂದ್ಯಗಳ ನಡುವೆ ಬಿಡುವು ಸಿಕ್ಕಿದ್ದರಿಂದ ಆಸ್ಟ್ರೇಲಿಯಾಕ್ಕೆ ಮರಳಿದ್ದರು. ಈ ಘಟನೆಯ ನಂತರ ಅವರು ಮತ್ತೆ ಪಾಕಿಸ್ತಾನಕ್ಕೆ ಮರಳಿದ್ದಾರೆ ಎಂದು ತಿಳಿದುಬಂದಿದೆ.

ಆದಾಗ್ಯೂ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮೇ 7, 2026 ರಂದು ಸಿಡ್ನಿಯ ಡೌನಿಂಗ್ ಸೆಂಟರ್ ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.

Leave a Comment

Your email address will not be published. Required fields are marked *