ಕೊಕ್ಕಡ: ಬಾರ್ ನಲ್ಲಿ ಹೊಡೆದಾಟ; ಪ್ರಕರಣ ದಾಖಲು

ಸಮಗ್ರ ನ್ಯೂಸ್: ಕೊಕ್ಕಡ ಗ್ರಾಮದ ಬಾರ್ ಒಂದರಲ್ಲಿ ಮದ್ಯ ಸೇವಿಸುವ ಸಮಯ ಹಣಕಾಸಿನ ವಿಚಾರದಲ್ಲಿ ನಾಲ್ಕು ಜನ ಆರೋಪಿಗಳು ಹಲ್ಲೆ ಮಾಡಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget ... ..

ಕೊಕ್ಕಡ ಗ್ರಾಮದ ಹೊಸಮನೆ ನಿವಾಸಿ ಅಕ್ಷಯ್ ಮಾರ್ಚ್‌ 29ರಂದು ರಾತ್ರಿ ಬಾರ್‌ನಲ್ಲಿ ಇದ್ದಾಗ ಯತೀಶ್ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಣ ಕೊಡುವಂತೆ ಹೊರಗೆ ಎಳೆದುಕೊಂಡು ಗೋಗಿದ್ದ. ಬಾರ್‌ನ ಹಿಂಬದಿಯಲ್ಲಿ ಯತೀಶ್, ಧನುಷ್ ಭಂಡಾರಿ, ಶರತ್ ಭಂಡಾರಿ ಮತ್ತು ಪ್ರವೀಣ್ ಸೇರಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿ ನೀಡಿದ್ದಾರೆ.

Ad Widget

ಹಲ್ಲೆಗೊಳಗಾದ ಅಕ್ಷಯ್ ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಆರೋಪಿಗಳಾದ ಯತೀಶ್, ಧನುಷ್ ಭಂಡಾರಿ, ಶರತ್ ಭಂಡಾರಿ ಮತ್ತು ಪ್ರವೀಣ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *