ಪುತ್ತೂರು: ತಲ್ವಾರ್ ಝಳಪಿಸಿ ಭಯ ಸೃಷ್ಟಿಸಿದ ವ್ಯಕ್ತಿ; ಪ್ರಕರಣ ದಾಖಲು

ಸಮಗ್ರ ನ್ಯೂಸ್: ಪುತ್ತೂರು ಸಮೀಪದ ಮುಕ್ವೆ ಜಂಕ್ಷನ್‌ನಲ್ಲಿ ರಾತ್ರಿ ತಲವಾರು ಝಳಪಿಸಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಮಹಮ್ಮದ್ ಸಿರಾಜುದ್ದೀನ್ ಎಂಬುವರು ನೀಡಿರುವ ದೂರಿನಂತೆ ಆರೋಪಿ ಮುಕ್ವೆಯ ಅಬ್ದುಲ್ ರಹಿಮಾನ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

. Ad Widget . Ad Widget . Ad Widget .

ಈತ ಮಾರ್ಚ್ 6ರಂದು ರಾತ್ರಿ ಮುಕ್ವೆ ಮಸೀದಿಯ ಬಳಿ ಬಂದು ಗಲಾಟೆ ಮಾಡುತ್ತಿದ್ದ. ಈ ವೇಳೆ ಮಸೀದಿ ಕಮಿಟಿಯ ಸದಸ್ಯರು ಅಲ್ಲಿಂದ ಆತನನ್ನು ಕಳುಹಿಸಿದ್ದರು. 10 ನಿಮಿಷದ ಬಳಿಕ ಮತ್ತೆ ಬಂದ ಅಬ್ದುಲ್ ರಹಿಮಾನ್ ಕೈಯಲ್ಲಿ ತಲವಾರು ಹಿಡಿದು ಬೀಸುತ್ತಾ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ. ಬಳಿಕ ಜನ ಸೇರುವುದನ್ನು ನೋಡಿ ಅಬ್ದುಲ್ ರಹಿಮಾನ್ ಅಲ್ಲಿಂದ ರಿಕ್ಷಾವೊಂದರಲ್ಲಿ ತೆರಳಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಮಹಮ್ಮದ್ ಸಿರಾಜುದ್ದೀನ್ ಎಂಬವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *