ಆನ್ ಲೈನ್ ನಲ್ಲಿ ಚೂಡಿದಾರ್ ಬುಕ್ ಮಾಡಿ 87 ಸಾವಿರ ಕಳೆದುಕೊಂಡ ಮಹಿಳೆ

ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬಂದ ಜಾಹಿರಾತು ನಂಬಿ ಆನ್ಲೈನ್ ಆಯಪ್ ಮೂಲಕ ಚೂಡಿದಾರ್ ಬುತ್ ಮಾಡಿದ ಮಹಿಳೆ ಸೈಬರ್ ವಂಚಕರಿಂದ 87 ಸಾವಿರ ಕಳೆದುಕೊಂಡ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Ad Widget . Ad Widget . Ad Widget . Ad Widget . Ad Widget .

ಪೊಲೀಸ್ ದೂರಿನ ಪ್ರಕಾರ 35 ವರ್ಷ ವಯಸ್ಸಿನ ಮಹಿಳೆ ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತನ್ನು ನೋಡಿ Aramya App ಮೂಲಕ ದಿನಾಂಕ 03-01-2026 ರಂದು ಸಾಲ್ವಾರ್‌ ಚೂಡಿದಾರ್‌ ಬಟ್ಟೆಯನ್ನು ಬುಕ್ ಮಾಡಿ ಪಾವತಿ ಮಾಡಿರುತ್ತಾರೆ.

Ad Widget . Ad Widget .

ನಂತರ ದಿನಾಂಕ 05-01-2026 ಮತ್ತು 06-01-2026 ರಂದು ವಿವಿಧ ಮೊಬೈಲ್ ಸಂಖ್ಯೆಗಳ ಮೂಲಕ ಕರೆ/ವಾಟ್ಸ್‌ಆಪ್ ಮಾಡಿ, ಪಾವತಿ stuck ಆಗಿದೆ ಎಂದು ಹೇಳಿ ಸ್ಕ್ಯಾನರ್‌, Refund Code ಮತ್ತು ಬ್ಯಾಂಕ್ ಖಾತೆ ಮೂಲಕ ಮರುಮರು ಹಣ ಪಾವತಿಸಿಸಿಕೊಂಡಿರುತ್ತಾರೆ.

ಈ ರೀತಿಯಾಗಿ ಪಿರ್ಯಾಧಿಯು ಒಟ್ಟು ರೂ.87,524/- ಹಣವನ್ನು ಸೈಬರ್ ವಂಚನೆ ಮೂಲಕ ಕಳೆದುಕೊಂಡಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ ನಂ: 06/2026 ಕಲಂ: 318(4), 318(2), 319(2) BNS 2023 ಮತ್ತು 66(ಸಿ) 66 (ಡಿ) ಐಟಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ

Leave a Comment

Your email address will not be published. Required fields are marked *