ಸುಳ್ಯ, ಕಡಬ ತಾಲೂಕಿನ ಹಲವೆಡೆ ಭಾರೀ ಮಳೆ| ಮಲೆನಾಡಿನಲ್ಲೂ ಅಬ್ಬರಿಸಿದ ವರುಣ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ, ಕಡಬ ಸೇರಿದಂತೆ ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಸಂಜೆ ವೇಳೆಗೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಅಕಾಲಿಕವಾಗಿ ಸುರಿದ ಭಾರೀ ಮಳೆಯಿಂದ ಒಣ‌ಹಾಕಿದ್ದ ಅಡಿಕೆ, ಕಾಫಿ ಬೆಳೆ ಬಹುತೇಕ ಕಡೆ ನೀರಿನಲ್ಲಿ ಕೊಚ್ಚಿ ಹೋಗಿದೆ.

Ad Widget . Ad Widget . Ad Widget . Ad Widget . Ad Widget .

ಕಾಫಿನಾಡು ಚಿಕ್ಕಮಗಳೂರಲ್ಲಿ ಈ‌ ವರ್ಷದ ಮೊದಲ ‌ಮಳೆಯ ಸಿಂಚನವಾಗಿದೆ. ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ , ಕಳಸ, ಶೃಂಗೇರಿ, NR ಪುರ ಭಾಗದಲ್ಲಿ ವರುಣ ಅಬ್ಬರಿಸಿದ್ದು, ದಿಢೀರ್ ಸುರಿದ ಮಳೆಯಿಂದ ಜನರು ಕಂಗಾಲಾದ ಪ್ರಸಂಗ ನಡೆದಿದೆ.

Ad Widget . Ad Widget .

ಕಳೆದ ಒಂದು ವಾರದಿಂದ ಕೊರೆಯುವ ಚಳಿ, ಶೀತ ಗಾಳಿಗೆ ಜಿಲ್ಲೆಯ ಜನರು ಹೈರಾಣಾಗಿರುವ ನಡುವೆ ಧಾರಾಕಾರವಾಗಿ ಸುರಿದ ಮಳೆ ಕಾಫಿ ಬೆಳೆಗಾರರನ್ನ ಆತಂಕಕ್ಕೆ ದೂಡಿದೆ. ಜಿಲ್ಲೆಯಾದ್ಯಂತ ಕಾಫಿ ಫಸಲಿನ ಕೊಯ್ಲು ನಡೆಯುತ್ತಿದ್ದು, ಒಣ‌ ಹಾಕಿದ ಕಾಫಿ ಮಳೆಯಿಂದ ಸಂಪೂರ್ಣ ನೆನೆದು ಹಾಳಾಗಿದೆ. ಕೆಲವೆಡೆ ಬೆಳೆ ನೀರಲ್ಲಿ ಕೊಚ್ಚಿ ಹೋಗಿದೆ.

ವಾಯುಭಾರ ಕುಸಿತದ ಪರಿಣಾಮ ಮಂಗಳವಾರ (ಜ.13) ಬೆಳಗಾವಿಯಲ್ಲಿ ಧಾರಾಕಾರ ಮಳೆಯಾಗಿದೆ. ಹೊಸ ವರ್ಷದ ಮೊದಲ ಅಕಾಲಿಕ ಮಳೆಗೆ ಬೆಳಗಾವಿಯ ಜನರು ಪರದಾಟ ಮಾಡಬೇಕಾಯಿತು. ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಮತ್ತು ಮಿಂಚು ಸಹಿತ ಮಳೆ ಸುರಿದಿದೆ. ಅಕಾಲಿಕ ಮಳೆಗೆ ಚನ್ನಮ್ಮ ವೃತ್ತ ಮತ್ತು ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿದೆ.

ದ.ಕ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ ಹಾಗೂ ಸುಳ್ಯ ತಾಲೂಕಿನಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗಿದೆ. ಒಣ ಹಾಕಿದ್ದ ಅಡಿಕೆ ಮಳೆಗೆ ಒದ್ದೆಯಾಗಿದ್ದು, ಕೃಷಿಕರು ಬವಣೆ ಪಡುವಂತಾಯಿತು. ಸುಮಾರು ಎರಡು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು.

Leave a Comment

Your email address will not be published. Required fields are marked *