ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ನವೆಂಬರ್‌ ತಿಂಗಳ ಈ ವಾರವು ಗ್ರಹಗಳ ಸ್ಥಾನ ಬದಲಾವಣೆಯಿಂದ 12 ರಾಶಿಗಳ ಸಾಪ್ತಾಹಿಕ ಭವಿಷ್ಯ ಹೇಗಿರಲಿದೆ? ಯಾವ ರಾಶಿಗೆ ಶುಭ? ಯಾವ ರಾಶಿಗೆ ಅದೃಷ್ಟಶಾಲಿಯಾಗಿರಲಿದೆ? ಯಾವ ರಾಶಿಗೆ ದುರಾದೃಷ್ಟ ? ಎಲ್ಲಾ 12 ರಾಶಿಗಳ ಈ ವಾರದ ರಾಶಿ ಭವಿಷ್ಯ ಹೇಗಿರಲಿದೆ? ನೋಡೋಣ ಬನ್ನಿ…

Ad Widget ... ..

ಮೇಷ ರಾಶಿ:
ಮೇಷ ರಾಶಿಯವರಿಗೆ ಈ ವಾರ ಬಹಳ ಅನುಕೂಲಕರ ದಿನಗಳ ತರಲಿದೆ. ನಿಮ್ಮ ಹಲವು ಕೆಲಸಗಳನ್ನು ಈ ವಾರ ಪೂರ್ಣ ಮಾಡುವಿರಿ. ಹಾಗೆ ಹೊಸ ಕೆಲಸಗಳನ್ನು ಆರಂಭಿಸುವಿರಿ. ಈ ವಾರದ ಆರಂಭದಲ್ಲಿ ನಿಮಗೆ ದೊಡ್ಡ ಮಟ್ಟದ ಸವಾಲುಗಳಿವೆ. ಆದರೆ ಅದನ್ನು ನೀವು ಸರಿಯಾದ ರೀತಿಯಲ್ಲಿ ನಿಭಾಯಿಸಲಿದ್ದೀರಿ. ವಾರದ ಉತ್ತರಾರ್ಧವು ನಿಮಗೆ ಮಿಶ್ರವಾಗಲಿದೆ. ನಿಮ್ಮ ಆದಾಯದಷ್ಟೇ ಖರ್ಚುಗಳು ಕೂಡ ಇರಲಿದೆ. ನಿಮ್ಮ ಇಡೀ ವಾರದ ಪ್ರಯಾಣಗಳು ಶುಭವಾಗಲಿದೆ. ನಿಮ್ಮ ಆರೋಗ್ಯ ಮತ್ತು ಸಂಬಂಧಗಳೆರಡಕ್ಕೂ ವಿಶೇಷ ಗಮನ ನೀಡಬೇಕಾಗುತ್ತದೆ. ಮೇಷ ರಾಶಿಯ ವ್ಯಕ್ತಿಗಳು ವಾರದ ಆರಂಭದಿಂದಲೂ ಯೋಜಿತ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಕೆಲಸದಲ್ಲಿ ಹಿರಿಯ ಮತ್ತು ಕಿರಿಯರಿಂದ ನಿಮಗೆ ಬೆಂಬಲ ಸಿಗುತ್ತದೆ. ವಾರದ ಮಧ್ಯಭಾಗವು ವ್ಯವಹಾರದಲ್ಲಿರುವವರಿಗೆ ಸ್ವಲ್ಪ ಪ್ರತಿಕೂಲವಾಗಿರುತ್ತದೆ. ಈ ಸಮಯದಲ್ಲಿ, ವ್ಯವಹಾರ ಒಪ್ಪಂದಗಳು ನಿಮಗೆ ಒತ್ತಡಗಳಲ್ಲಿ ಸಿಲುಕಿಸಬಹುದು.

Ad Widget

ವೃಷಭ ರಾಶಿ:
ಈ ವಾರ ವೃಷಭ ರಾಶಿಯವರಿಗೆ ಅತ್ಯಂತ ಆಹ್ಲಾದಕರವಾಗಿರುತ್ತದೆ. ಈ ವಾರ ನಿಮ್ಮ ವೃತ್ತಿ ಮತ್ತು ವ್ಯವಹಾರಕ್ಕೆ ಅನುಕೂಲಕರವಾಗಿರುತ್ತದೆ. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ಸಮಯ. ನಿಮ್ಮ ಕೆಲಸವನ್ನು ನಿಗದಿತ ಸಮಯದೊಳಗೆ ಪೂರ್ಣ ಮಾಡುವಿರಿ. ವಾರದ ಮಧ್ಯಂತರದಲ್ಲಿ ನಿಮಗೆ ಶುಭಕರ ಸುದ್ದಿಯಿದೆ. ಅದ್ರಲ್ಲೂ ನಿಮ್ಮ ಖರ್ಚುಗಳ ವಿಚಾರದಲ್ಲಿ ಈ ವಾರ ಉತ್ತಮ ಫಲ ತರಲಿದೆ. ನೀವು ಉದ್ಯೋಗ ಬದಲಾಯಿಸಲು ಮುಂದಾಗಿದ್ದರೆ ಈ ಸಮಯದಲ್ಲಿ ಉತ್ತಮ ಅವಕಾಶ ಪಡೆಯುತ್ತೀರಿ. ನಿಮಗಾಗಿ ಕುಟುಂಬಸ್ಥರಿಂದ ಶುಭ ಸುದ್ದಿ ಬರಲಿದೆ. ರಿಯಲ್ ಎಸ್ಟೇಲ್ ವ್ಯವಹಾರ ಮಾಡುವ ಮಂದಿಗೆ ಈ ಸಮಯ ಬಹಳ ಅನುಕೂಲಕರ ತರಲಿದೆ.

ಮಿಥುನ ರಾಶಿ:
ಈ ವಾರ ಮಿಥುನ ರಾಶಿಯವರಿಗೆ ಸಾಮಾನ್ಯವಾಗಿ ಫಲಪ್ರದವಾಗಿರುತ್ತದೆ. ವಾರದ ಆರಂಭದಲ್ಲಿ ಕೆಲಸದಲ್ಲಿ ಕೆಲವು ಹಠಾತ್ ಬದಲಾವಣೆಗಳು ಸಂಭವಿಸಬಹುದು, ಇದು ನಿಮ್ಮ ಕೆಲಸದಲ್ಲಿ ಕೆಲವು ತೊಂದರೆಗಳನ್ನು ಉಂಟುಮಾಡಬಹುದು. ನೀವು ಉದ್ಯೋಗ ಬದಲಾವಣೆಯನ್ನು ಪರಿಗಣಿಸುತ್ತಿದ್ದರೆ, ಈ ವಾರ ನಿಮಗೆ ಉತ್ತಮ ಕೊಡುಗೆ ಸಿಗಬಹುದು. ಸ್ಥಾನ ಮತ್ತು ಸಂಬಳ ಎರಡರಲ್ಲೂ ಹೆಚ್ಚಳವಾಗುವ ಸಾಧ್ಯತೆಗಳಿವೆ. ಹೊಸ ಆದಾಯದ ಮೂಲಗಳು ಹೊರಹೊಮ್ಮುತ್ತವೆ ಮತ್ತು ಸಂಗ್ರಹವಾದ ಸಂಪತ್ತು ಹೆಚ್ಚಾಗುತ್ತದೆ. ಉದ್ಯಮಿಗಳು ಈ ವಾರ ಸಂಪೂರ್ಣವಾಗಿ ಅನುಕೂಲಕರ ವ್ಯವಹಾರವನ್ನು ಅನುಭವಿಸುತ್ತಾರೆ. ಅವರು ಗಮನಾರ್ಹ ಲಾಭವನ್ನು ಗಳಿಸುತ್ತಾರೆ.

ಕರ್ಕ ರಾಶಿ:
ಕರ್ಕಾಟಕ ರಾಶಿಯವರಿಗೆ ಈ ವಾರ ಸಾಮಾನ್ಯವಾಗಿ ಫಲಪ್ರದವಾಗಿರುತ್ತದೆ. ಈ ವಾರ ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ನೀವು ಲಾಭವನ್ನು ನೋಡುತ್ತೀರಿ. ಹೆಚ್ಚುವರಿ ಆದಾಯದ ಹೊಸ ಮೂಲಗಳು ಹೊರಹೊಮ್ಮುತ್ತವೆ, ಆದರೆ ನಿಮ್ಮ ಹಣವನ್ನು ವಿವಿಧ ವಿಷಯಗಳಿಗೂ ಖರ್ಚು ಮಾಡಲಾಗುತ್ತದೆ. ಈ ವಾರ ನೀವು ಐಷಾರಾಮಿ ವಸ್ತುಗಳಿಗೆ ದೊಡ್ಡ ಮೊತ್ತವನ್ನು ಖರ್ಚು ಮಾಡಬಹುದು. ನೀವು ಪ್ರಾರಂಭಿಸುತ್ತಿರುವ ಯೋಜನೆಗಳು ಅಪೇಕ್ಷಿತ ಯಶಸ್ಸನ್ನು ಸಾಧಿಸುತ್ತವೆ. ವಾರದ ಉತ್ತರಾರ್ಧದಲ್ಲಿ ಅನುಕೂಲಕರ ಸಮಯಗಳು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತವೆ. ಪ್ರಮುಖ ವ್ಯಾಪಾರ ಒಪ್ಪಂದವು ಭವಿಷ್ಯದ ಪ್ರಯೋಜನಗಳನ್ನು ತರುತ್ತದೆ.

ಸಿಂಹ ರಾಶಿ:
ಈ ವಾರ ಸಿಂಹ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಮುಖ್ಯವಾಗಿ ನೀವು ಈ ಅನುಕೂಲಕರ ಸಮಯದಲ್ಲಿ ಭವಿಷ್ಯದಲ್ಲಿ ಲಾಭ ತರುವಂತಹ ಕೆಲಸಗಳ ಮಾಡಬಹುದು. ಆಸ್ತಿ ವಿಚಾರ ಕುರಿತಾದ ದೊಡ್ಡ ಸಮಸ್ಯೆಯೊಂದನ್ನು ಬಗೆಹರಿಸಿಕೊಳ್ಳುವ ಅವಲಾಶಗಳು ಬರಲಿವೆ. ನೀವು ಹಠಾತ್ ಪ್ರವಾಸಕ್ಕೆ ಹೋಗಬೇಕಾಗಬಹುದು. ಪ್ರಯಾಣವು ನಿಮ್ಮನ್ನು ಪ್ರಭಾವಿ ಜನರೊಂದಿಗೆ ಸಂಪರ್ಕಕ್ಕೆ ತರುತ್ತದೆ. ಪ್ರೀತಿ, ದಾಂಪತ್ಯ ವಿಚಾರಗಳಲ್ಲಿ ಈ ವಾರ ಬಹಳ ಶುಭವಾಗಿರಲಿದೆ. ಈ ಸಮಯದಲ್ಲಿ ಹೂಡಿಕೆಗಳನ್ನು ಎಚ್ಚರಿಕೆಯಿಂದ ಮಾಡುವುದು ಉತ್ತಮ. ಸ್ನೇಹಿತರಿಂದ ನಿಮಗೆ ದೊಡ್ಡ ಹಣಕಾಸಿನ ಸಹಾಯ ಸಿಗಲಿದೆ.

ಕನ್ಯಾ ರಾಶಿ:
ಈ ವಾರ ಕನ್ಯಾ ರಾಶಿಯವರಿಗೆ ಶುಭ ಮತ್ತು ಅದೃಷ್ಟವನ್ನು ತರುತ್ತದೆ. ವಾರದ ಆರಂಭದಲ್ಲಿ ಕೆಲಸಕ್ಕೆ ಸಂಬಂಧಿಸಿದ ಪ್ರವಾಸಗಳು ಆಹ್ಲಾದಕರ ಮತ್ತು ಯಶಸ್ವಿಯಾಗುತ್ತವೆ. ಉದ್ಯೋಗದಲ್ಲಿರುವವರಿಗೆ ಇದು ಒಳ್ಳೆಯ ಸಮಯ. ನಿಮ್ಮ ಜೀವನದಲ್ಲಿ ಹೊಸತನದ ಆಗಮನದಿಂದ ನೀವು ಸಂತೋಷವಾಗಿರುತ್ತೀರಿ. ಹಲವಾರು ದಿನಗಳಿಂದ ಭೂಮಿ, ಕಟ್ಟಡ ಅಥವಾ ವಾಹನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಈ ವಾರ ಈ ಕನಸು ನನಸಾಗಬಹುದು. ಉದ್ಯಮಿಗಳು ಸಹ ಉತ್ತಮ ಸ್ಥಾನದಲ್ಲಿದ್ದಾರೆ, ಗಮನಾರ್ಹ ಲಾಭಗಳು ದಿಗಂತದಲ್ಲಿವೆ. ನಿಮ್ಮ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಗೃಹಿಣಿಯರಲ್ಲಿ ಅನಾರೋಗ್ಯ ಕಾಡುವ ಸಂಭವವಿದೆ.

ತುಲಾ ರಾಶಿ:
ತುಲಾ ರಾಶಿಯವರಿಗೆ ಈ ವಾರ ಮಿಶ್ರ ಫಲಿತಾಂಶವಾಗಲಿದೆ. ವಾರದ ಆರಂಭದಿಂದ, ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ನೀವು ಏರಿಳಿತಗಳನ್ನು ಅನುಭವಿಸುವಿರಿ. ಕೆಲಸದಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸಬಹುದು, ಇದರಲ್ಲಿ ಕಠಿಣ ಪರಿಶ್ರಮ ಮತ್ತು ಶ್ರಮದ ಅಗತ್ಯವಿರುವ ಹಠಾತ್ ಮಹತ್ವದ ಜವಾಬ್ದಾರಿಯೂ ನಿಮಗೆ ಬರಬಹುದು. ವಾರದ ಆರಂಭದಿಂದಲೇ ತಮ್ಮ ಹಣಕಾಸನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ದುಂದುಗಾರಿಕೆ ಕೆಲವು ಸಮಸ್ಯೆಗಳಿಗೆ ಕಾರಣವಾಗಬಹುದು. ವಾರದ ಉತ್ತರಾರ್ಧವು ಉದ್ಯಮಿಗಳಿಗೆ ಅನುಕೂಲಕರವಾಗಿರುತ್ತದೆ. ಅನಗತ್ಯ ಖರ್ಚುಗಳಿಂದ ದೂರ ಇರುವುದು ಉತ್ತಮ.

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರು ಈ ವಾರ ತಕ್ಷಣದ ಲಾಭಕ್ಕಾಗಿ ನಿರೀಕ್ಷಿತ ನಷ್ಟಗಳನ್ನು ತಪ್ಪಿಸಬೇಕು. ಯಾರಿಂದಲೂ ಪ್ರಭಾವಿತರಾಗಿ ಹಣ ವ್ಯಯಿಸಲು ಮುಂದಾಗಬೇಡಿ. ವಾರದ ಆರಂಭದಲ್ಲಿ ಒಂದು ದೊಡ್ಡ ಖರ್ಚು ಇದ್ದಕ್ಕಿದ್ದಂತೆ ಉದ್ಭವಿಸಬಹುದು. ವಾರ ಉತ್ತರಾರ್ಧದಲ್ಲಿ ನಿಮ್ಮ ಪ್ರತಿಸ್ಪರ್ಧಿಗಳಿಂದ ನೀವು ಕಠಿಣ ಸ್ಪರ್ಧೆಯನ್ನು ಎದುರಿಸಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಯಾವುದೇ ರೀತಿಯ ಅಜಾಗರೂಕತೆಯನ್ನು ತಪ್ಪಿಸಬೇಕು. ನಿಮ್ಮ ಪ್ರಯಾಣಗಳಲ್ಲಿ ಶುಭವಾಗುತ್ತದೆ. ಗೃಹಿಣಿಯರಲ್ಲಿನ ಹಣಕಾಸು ಒತ್ತಡವೊಂದು ನಿವಾರಣೆಯಾಗಲಿದೆ. ಪ್ರೇಮ ಸಂಬಂಧಗಳಲ್ಲಿ ಎಚ್ಚರಿಕೆಯಿಂದ ಮುಂದುವರಿಯಿರಿ ಮತ್ತು ನಿಮ್ಮ ಸಂಗಾತಿಯ ವೈಯಕ್ತಿಕ ಜೀವನದಲ್ಲಿ ಅತಿಯಾದ ಹಸ್ತಕ್ಷೇಪವನ್ನು ತಪ್ಪಿಸಿ.

ಧನು ರಾಶಿ:
ಈ ವಾರ ಧನು ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಹಲವು ಕೆಲಸಗಳು ಶ್ರಮದಾಯಕವಾಗಿ ಮುಗಿಸುವಿರಿ. ನಿಮ್ಮ ಲಾಭದಾಯಕ ವೃತ್ತಿಯೊಂದು ಸಮಸ್ಯೆಗಳ ತರಬಹುದು. ಈ ವಾರ ಪ್ರಯಾಣಗಳಲ್ಲಿ ನೀವು ಕಳೆಯಬಹುದು. ಕೆಲಸದಲ್ಲಿರುವ ಜನರೊಂದಿಗೆ ಉತ್ತಮ ಸಮನ್ವಯವನ್ನು ಕಾಪಾಡಿಕೊಳ್ಳುವುದು ಸೂಕ್ತವಾಗಿದೆ. ವ್ಯವಹಾರದಲ್ಲಿ ಲಾಭಕ್ಕಾಗಿ ಉತ್ತಮ ಅವಕಾಶಗಳನ್ನು ತರುತ್ತದೆ. ವಾರದ ಉತ್ತರಾರ್ಧದಲ್ಲಿ ಅನಿರೀಕ್ಷಿತ ಲಾಭಗಳು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವ ಕೆಲಸದಲ್ಲಿ ತೊಡಗುವಿರಿ. ಆರೋಗ್ಯ ಸುಧಾರಿಸಲಿದೆ.

ಮಕರ ರಾಶಿ:
ಮಕರ ರಾಶಿಯವರಿಗೆ ಈ ವಾರವು ನಿಮಗೆ ಅನುಕೂಲಕರ ದಿನಗಳ ತರಲಿದೆ. ನಿಮ್ಮ ಹಲವು ಕೆಲಸಗಳು ಅಂದುಕೊಂಡ ಸಮಯದೊಳಗೆ ಮುಗಿಯಲಿದೆ. ನಿಮ್ಮ ಹಲವು ಪ್ರಯಾಣಗಳಲ್ಲಿ ಶುಭಕರ ಸುದ್ದಿ ಬರಲಿದೆ. ಸಾಲದ ಸಮಸ್ಯೆಯೊಂದು ಬಗೆಹರಿಯಲಿದೆ. ನಿಮ್ಮ ಆಸ್ತಿ ಸಂಬಂಧಿತ ವಿಚಾರದಲ್ಲಿ ಮೇಲುಗೈ ಸಾಧಿಸುವ ಸಮಯವಿದು. ಗೃಹಿಣಿಯರಲ್ಲಿ ಈ ವಾರ ಅನಾರೋಗ್ಯಕ್ಕೆ ದಾರಿಯಾಗುವ ಹಲವು ಘಟನೆಗಳಿಗೆ ಸಾಕ್ಷಿಯಾಗಬಹುದು. ನಿಮ್ಮ ಕೌಟುಂಬಿಕ ಸಮಸ್ಯೆಗಳು ದೂರಾಗಲಿದೆ.

ಕುಂಭ ರಾಶಿ:
ಈ ವಾರ ಕುಂಭ ರಾಶಿಯವರಿಗೆ ಅಪೇಕ್ಷಿತ ಫಲಿತಾಂಶಗಳನ್ನು ತರುತ್ತದೆ. ವಾರದ ಆರಂಭದಲ್ಲಿ ಹಣಕಾಸು ಸಂಬಂಧಿತ ಒತ್ತಡಗಳಿದ್ದರು ಅದರಿಂದ ಹೊರಬರುತ್ತೀರಿ. ಬಹುನಿರೀಕ್ಷಿತ ಶುಭ ಸುದ್ದಿಯ ಆಗಮನದಿಂದ ಸಂತೋಷಪಡುತ್ತೀರಿ. ಗೃಹಿಣಿಯರ ದೀರ್ಘಕಾಲದ ಅನಾರೋಗ್ಯ ಸಮಸ್ಯೆಯೊಂದು ಸುಧಾರಣೆಯಾಗಲಿದೆ. ನಿಮ್ಮ ಹಿತೈಷಿಗಳ ಬೆಂಬಲದೊಂದಿಗೆ, ನೀವು ಅತ್ಯಂತ ಕಷ್ಟಕರವಾದ ಕೆಲಸಗಳನ್ನು ಸಹ ಸಾಧಿಸುವಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ದೂರದೃಷ್ಟಿಯು ನೆರವಾಗಲಿದೆ.

ಮೀನ ರಾಶಿ:
ಮೀನ ರಾಶಿಯವರಿಗೆ ಈ ವಾರ ಶುಭ ಮತ್ತು ಅದೃಷ್ಟ ತರಲಿದೆ. ಉದ್ಯೋಗಸ್ಥರು ಈ ವಾರ ಅದೃಷ್ಟವನ್ನು ಅನುಭವಿಸಬಹುದು, ನಿಮ್ಮ ಬಡ್ತಿ, ವೇತನ ಹೆಚ್ಚಳ, ವರ್ಗಾವಣೆ ವಿಚಾರವಾಗಿ ನಿಮಗೆ ಶುಭಸುದ್ದಿ ಬರಲಿದೆ. ನಿಮ್ಮ ಪ್ರೀತಿ, ದಾಂಪತ್ಯ ವಿಚಾರವಾಗಿ ನಿಮ್ಮಲ್ಲಿ ಸಂತೋಷದ ದಿನಗಳಿವೆ. ನಿಮ್ಮ ಹಲವು ಕೆಲಗಳನ್ನು ಯಾವುದೇ ಅಡ್ಡಿ ಆತಂಕವಿಲ್ಲದೆ ಪೂರ್ಣ ಮಾಡುವಿರಿ. ನೀವು ಬಯಸಿದಂತೆ ನಿಮ್ಮ ಉದ್ಯೋಗದಲ್ಲಿ ಯಶಸ್ಸು ನೋಡಬಹುದು. ಆರ್ಥಿಕ ಲಾಭಕ್ಕಾಗಿ ನೀವು ಮಾಡಿರುವಂತಹ ವಿಚಾರವು ಯಶಸ್ಸು ತರಲಿದೆ. ಹೊಸ ಅದಾಯ ಮೂಲ ಶುಭವಾಗಲಿದೆ. ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗುತ್ತೀರಿ.

Leave a Comment

Your email address will not be published. Required fields are marked *