ಬೆಳ್ತಂಗಡಿ: ಬಸ್ ನಲ್ಲಿ ನಿರ್ವಾಹಕಿ ಮತ್ತು ಪ್ರಯಾಣಿಕನ ನಡುವೆ ಗಲಾಟೆ

ಸಮಗ್ರ ನ್ಯೂಸ್: ಕೆಎಸ್‌ಆರ್ ಟಿಸಿ ಬಸ್ ನ ಲೇಡಿ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಟಿಕೆಟ್ ಹಣದ ವಿಚಾರಕ್ಕೆ ಗಲಾಟೆ ನಡೆದಿದ್ದು. ಈ ವೇಳೆ ಪ್ರಯಾಣಿಕನ ಮೇಲೆ ಬಸ್ ನಲ್ಲೇ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿಯಲ್ಲಿ ಅಕ್ಟೋಬರ್ 10ರಂದು ನಡೆದಿದೆ.

Ad Widget ... ..

ಮೂಡಿಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಗೆ ಉಜಿರೆಯಲ್ಲಿ ಹತ್ತಿದ ಪ್ರಯಾಣಿಕ ಟಿಕೆಟ್ ಹಣ ಕೊಟ್ಟಿದ್ದೇನೆ ಅಂತ ವಾದಿಸುತ್ತಿದ್ದರೆ, ಲೇಡಿ ಕಂಡಕ್ಟರ್ ಹಣ ಕೊಟ್ಟಿಲ್ಲ ಅಂತ ವಾದಿಸುತ್ತಿದ್ದರು.‌ ಬಸ್ ನಲ್ಲಿದ್ದ ಪ್ರಯಾಣಿಕರು ಆತ ಹಣ ಕೊಟ್ಟಿದ್ದಾನೆ ಅಂತ ಸ್ಥಳದಲ್ಲಿ ತಿಳಿಸಿದರು.

Ad Widget

ಬಸ್ ನಲ್ಲಿದ್ದ ಪ್ರಯಾಣಿಕರು ಕಂಗಾಲಾದರು. ಈ ವೇಳೆ ಬೆಳ್ತಂಗಡಿ ಪೊಲೀಸರು ಮದ್ಯ ಪ್ರವೇಶಿಸಿ, ಕಂಡಕ್ಟರ್ ಮತ್ತು ಪ್ರಯಾಣಿಕನನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಬೆಳ್ತಂಗಡಿ ಟಿಸಿ ಬದಲಿ ವ್ಯವಸ್ಥೆ ಮಾಡಿದರು. ಬೆಳ್ತಂಗಡಿಯಲ್ಲೇ ನಿಂತ ಬಸ್ ಗೆ ಬದಲಿ ವ್ಯವಸ್ಥೆ ಮಾಡಿ ಕಳುಹಿಸಲಾಗಿದೆ.

Leave a Comment

Your email address will not be published. Required fields are marked *