ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪದಲ್ಲಿ ಜಾಮೀನು ಅರ್ಜಿ ವಜಾ| ಮಹೇಶ್ ಶೆಟ್ಟಿ ತಿಮರೋಡಿಗೆ ಬಂಧನ ಭೀತಿ|

ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟ್​ ಶಾಕ್ ಕೊಟ್ಟಿದೆ. ಮಹೇಶ್​ ಶೆಟ್ಟಿ ತಿಮರೋಡಿ ನಿರೀಕ್ಷಣಾ ಬೇಲ್ ವಜಾ ಮಾಡಿದ್ದು, ಬಂಧನ ಭೀತಿ ಎದುರಾಗಿದೆ.

Ad Widget ... ..

ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಸಿಲುಕಿರುವ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಬೇಲ್​ ಅರ್ಜಿ ಸಲ್ಲಿಸಿದ್ದರು. ಆದರೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟ್​ ಅರ್ಜಿ ವಜಾ ಮಾಡಿದೆ.

Ad Widget

‘ದಕ್ಷಿಣ‌ ಕನ್ನಡ ಜಿಲ್ಲೆಯಿಂದ ಒಂದು ವರ್ಷದ ಅವಧಿಯ ಗಡಿಪಾರು ಆದೇಶ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಸದ್ಯ ತಲೆ ಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ’ ಎಂದು ಅಡ್ವೊಕೇಟ್‌ ಜನರಲ್‌ ಹೈಕೋರ್ಟ್‌ಗೆ ತಿಳಿಸಿದ್ದರು.

ಆರ್ಮ್ಸ್ ಆಕ್ಟ್ ನಡಿ ಎಫ್‌ಐಆರ್ ಬೆನ್ನಲ್ಲೇ ಮಹೇಶ್ ಶೆಟ್ಟಿ ತಿಮರೋಡಿಗೆ ಸಂಕಷ್ಟ ಶುರುವಾಗಿದೆ. ವಶಕ್ಕೆ ಪಡೆದ ಬಂದೂಕಿನ ಪರವಾನಿಗೆ ತೋರಿಸದೇ ಇದ್ದರೆ ತಿಮರೋಡಿ ವಿರುದ್ದ ಕ್ರಮವಾಗುವ ಸಾಧ್ಯತೆ ಇದೆ. ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಲೈಸೆನ್ಸ್ ಹೊಂದಿದ್ದಾರೆಯೇ ಇಲ್ಲವೇ ಎಂಬುದನ್ನು ಬೆಳ್ತಂಗಡಿ ಪೊಲೀಸರಿಗೆ ತಿಮರೋಡಿ ಮಾಹಿತಿ ನೀಡಬೇಕು.

ಅಕ್ರಮ ಶಸ್ತ್ರಾಸ್ತ್ರಗಳು ಮನೆಯಲ್ಲಿ ಇದ್ದಿದ್ದಕ್ಕೆ ತಿಮರೋಡಿಗೆ ಸಂಕಷ್ಟ ಎದುರಾಗಿದೆ. Arms Act ಪ್ರಕಾರ, ಯಾವುದೇ ಶಸ್ತ್ರಾಸ್ತ್ರ ಅಥವಾ ಗುಂಡುಗಳನ್ನು ಹೊಂದಲು ಸಂಬಂಧಿಸಿದ ಲೈಸೆನ್ಸ್ ಇರಬೇಕು. ಪೊಲೀಸರು ವಶಪಡಿಸಿಕೊಂಡಿರುವ ಬಂದೂಕಿಗೆ ಲೈಸೆನ್ಸ್ ಇದ್ದರೆ ತನಿಖಾ ಅಧಿಕಾರಿಯ ಮುಂದೆ ಸಲ್ಲಿಸಲು ಅವಕಾಶ ಇದೆ. ಆದರೆ ತಿಮರೋಡಿ ಲೈಸೆನ್ಸ್ ನೀಡುವ ಬದಲು ತಲೆಮರೆಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *