ದ್ವಾದಶ ರಾಶಿಗಳ ವಾರ‌ಭವಿಷ್ಯ| ಸೆ.29ರಿಂದ ಅ. 5ರವರೆಗಿನ ಗೋಚಾರಫಲ

ಸಮಗ್ರ ನ್ಯೂಸ್: ಸೆಪ್ಟೆಂಬರ್ ತಿಂಗಳ ಈ ವಾರವು ಗ್ರಹಗಳ ಸ್ಥಾನ ಬದಲಾವಣೆಯಿಂದ 12 ರಾಶಿಗಳ ಸಾಪ್ತಾಹಿಕ ಭವಿಷ್ಯ ಹೇಗಿರಲಿದೆ? ಯಾವ ರಾಶಿಗೆ ಶುಭ? ಯಾವ ರಾಶಿಗೆ ಅದೃಷ್ಟಶಾಲಿಯಾಗಿರಲಿದೆ? ಯಾವ ರಾಶಿಗೆ ದುರಾದೃಷ್ಟ ಎದುರಾಗಲಿದೆ? ಎಲ್ಲಾ 12 ರಾಶಿಗಳ ಈ ವಾರದ ರಾಶಿ ಭವಿಷ್ಯ ಹೇಗಿರಲಿದೆ? ನೋಡೋಣ ಬನ್ನಿ…

Ad Widget ... ..

ಮೇಷ ರಾಶಿ:
ಮೇಷ ರಾಶಿಯವರಿಗೆ ಈ ವಾರವು ಬಹಳ ಅನುಕೂಲಗಳ ತರಲಿದೆ. ನಿಮ್ಮ ಮೇಲೆ ಇದ್ದಕ್ಕಿದ್ದಂತೆ ಹೆಚ್ಚಿನ ಜವಾಬ್ದಾರಿಗಳು ಬೀಳಬಹುದು. ಉದ್ಯೋಗದಲ್ಲಿರುವವರು ಈ ಸಮಯದಲ್ಲಿ ಅತ್ಯಂತ ಜಾಗರೂಕರಾಗಿರಬೇಕು. ಯಾರನ್ನಾದರೂ ಕುರುಡಾಗಿ ನಂಬಬೇಡಿ. ಕೆಲಸದಲ್ಲಿ ಪ್ರತಿಸ್ಪರ್ಧಿಗಳ ಬಗ್ಗೆ ಎಚ್ಚರದಿಂದಿರಿ ಮತ್ತು ಮೇಲಧಿಕಾರಿಗಳೊಂದಿಗೆ ಉತ್ತಮ ಸಮನ್ವಯವನ್ನು ಕಾಪಾಡಿಕೊಳ್ಳಿ. ಈ ವಾರ ವ್ಯವಹಾರದ ಏರಿಳಿತಗಳ ಬಗ್ಗೆ ಉದ್ಯಮಿಗಳು ಕಾಳಜಿ ವಹಿಸಬೇಕಿದೆ. ಯಾವುದೇ ಕೆಲಸವನ್ನು ಕೈಗೊಳ್ಳುವಾಗ ಕುಟುಂಬ ಸದಸ್ಯರು ಸಂಪೂರ್ಣ ಬೆಂಬಲವನ್ನು ನೀಡಲಿದ್ದಾರೆ. ನಿಮ್ಮ ಹಣಕಾಸು ಸಮಸ್ಯೆಗಳು ಪರಿಹಾರವಾಗಬಹುದು.

Ad Widget

ವೃಷಭ ರಾಶಿ:
ವೃಷಭ ರಾಶಿಯವರು ಈ ವಾರ ತಮ್ಮ ಆರೋಗ್ಯ ವಿಚಾರದಲ್ಲಿ ಉತ್ತಮ ಸುಧಾರಣೆ ನೋಡುವಿರಿ. ವಾರದ ಮೊದಲಾರ್ಧದಲ್ಲಿ ನೀವು ಈ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆಯಿದೆ. ಆದರೆ ದ್ವಿತೀಯಾರ್ಧದಲ್ಲಿ ನೀವು ಪರಿಹಾರವನ್ನು ಕಂಡುಕೊಳ್ಳುವಿರಿ. ಆರ್ಥಿಕವಾಗಿ ಈ ವಾರ ನಿಮಗೆ ಸ್ವಲ್ಪ ಪ್ರತಿಕೂಲ ಪರಿಣಾಮ ಇರಬಹುದು. ಅದ್ರಲ್ಲೂ ವ್ಯಾಪಾರಿಗಳು ಈ ಸಮಯದಲ್ಲಿ ದೊಡ್ಡ ಮಟ್ಟದ ಒಪ್ಪಂಗಳಲ್ಲಿ ಭಾಗಿಯಾಗುವುದು ಪ್ರಯಾಣ ಹಾಗೂ ಹಣಕಾಸು ಒತ್ತಡಕ್ಕೆ ಕಾರಣವಾಗಬಹುದು. ಮನೆಗಾಗಿ ಹೊಸ ವಸ್ತು ಖರೀದಿಯ ಸಾಧ್ಯತೆ ಇದೆ.

ಮಿಥುನ ರಾಶಿ:
ಮಿಥುನ ರಾಶಿಯವರಿಗೆ ಈ ವಾರ ಸಾಮಾನ್ಯವಾಗಿ ಉತ್ತಮವಾಗಿರುತ್ತದೆ. ಈ ವಾರ ನೀವು ದೇಶ ಮತ್ತು ವಿದೇಶದ ಪ್ರಯಾಣದಂತಹ ಲಾಭ ನೋಡಬಹುದು. ವಾರದ ಮೊದಲಾರ್ಧದಲ್ಲಿ ನೀವು ಅಂದುಕೊಂಡ ಕೆಲಸಗಳ ಮಾಡಿ ಮುಗಿಸಬಹುದು. ಉದ್ಯೋಗದಲ್ಲಿರುವವರಿಗೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಸಂಪೂರ್ಣ ಪ್ರತಿಫಲ ದೊರೆಯುತ್ತದೆ. ಉದ್ಯಮಿಗಳು ನಿರೀಕ್ಷಿತ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಆರ್ಥಿಕ ದೃಷ್ಟಿಕೋನದಿಂದ ಈ ವಾರ ನಿಮಗೆ ಉತ್ತಮವಾಗಲಿದೆ. ಆಧ್ಯಾತ್ಮಿಕ ವಿಚಾರವಾಗಿ ನೀವು ಮತ್ತಷ್ಟು ದೃಢರಾಗುತ್ತೀರಿ.

ಕರ್ಕ ರಾಶಿ:
ಈ ವಾರ ಕರ್ಕ ರಾಶಿಯವರಿಗೆ ಮಿಶ್ರ ಫಲವಾಗಿರುತ್ತದೆ. ಈ ವಾರ ಕೆಲವೊಮ್ಮೆ ಅನುಕೂಲಕರ ಮತ್ತು ಕೆಲವೊಮ್ಮೆ ಪ್ರತಿಕೂಲ ಸಂದರ್ಭಗಳನ್ನು ನೋಡುತ್ತೀರಿ. ವಾರದ ಆರಂಭವು ಆರೋಗ್ಯ ಮತ್ತು ಹಣಕಾಸಿನ ವಿಷಯದಲ್ಲಿ ಕರ್ಕ ರಾಶಿಯವರಿಗೆ ಶುಭದಾಯಕ. ಈ ಸಮಯದಲ್ಲಿ ಉದ್ಯೋಗಸ್ಥರಿಗೆ ಹೆಚ್ಚಿನ ಕೆಲಸ ಒತ್ತಡವಿರುತ್ತದೆ, ಇದು ದೈಹಿಕ ಆಯಾಸಕ್ಕೆ ಕಾರಣವಾಗಬಹುದು. ಯಾರಿಗಾದರು ಸಾಲ ನೀಡುವುದನ್ನು ತಪ್ಪಿಸಿ. ಈ ಸಮಯದಲ್ಲಿ ದೀರ್ಘಾವಧಿಯ ಹೂಡಿಕೆಗಳನ್ನು ಮಾಡುವುದು ಸೂಕ್ತವಲ್ಲ. ಕೆಲಸದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಪಡೆಯುವ ಸಾಧ್ಯತೆಗಳಿವೆ. ಈ ವಾರ ಸಾಮಾನ್ಯವಾಗಿ ಕುಟುಂಬ ಸಂತೋಷದ ದೃಷ್ಟಿಯಿಂದ ಫಲಪ್ರದವಾಗಿರುತ್ತದೆ.

ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಈ ವಾರ ಸ್ವಲ್ಪ ಅಸ್ಥಿರವಾಗಬಹುದು. ಉದ್ಯೋಗದಲ್ಲಿರುವವರು ವಾರದ ಆರಂಭದಲ್ಲಿ ಕೆಲಸದಲ್ಲಿ ತೊಂದರೆಗಳನ್ನು ಎದುರಿಸಬಹುದು. ಜವಾಬ್ದಾರಿಗಳಲ್ಲಿ ಪ್ರಮುಖ ಬದಲಾವಣೆಗಳು ಸಹ ಸಾಧ್ಯ. ಈ ಸಮಯ ಆರೋಗ್ಯದ ದೃಷ್ಟಿಯಿಂದಲೂ ಅಸ್ಥಿರವಾಗಬಹುದು. ಮಿತ್ರರಿಗೆ ನೀವು ಹಣಕಾಸಿನ ನೆರವು ನೀಡಬಹುದು. ನಿಮ್ಮ ವ್ಯವಹಾರದಲ್ಲಿ ದೊಡ್ಡ ಲಾಭವಿದೆ. ಆದ್ರೆ ಅದರ ಫಲಿತಾಂಶಕ್ಕಾಗಿ ನೀವು ಕಾಯಬೇಕಾಗುತ್ತದೆ. ಪರೀಕ್ಷೆಗಳು ಮತ್ತು ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ.

ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಈ ವಾರ ಮಿಶ್ರ ಫಲವಾಗಿರಲಿದೆ. ಸಣ್ಣ ಕೆಲಸಗಳನ್ನು ಸಹ ಪೂರ್ಣಗೊಳಿಸಲು ನೀವು ಹೆಚ್ಚುವರಿ ಶ್ರಮ ಹಾಕಬೇಕಾಗಬಹುದು. ಈ ವಾರ ಉದ್ಯೋಗದಲ್ಲಿರುವವರಿಗೆ ಕೆಲವು ತೊಂದರೆಗಳು ಎದುರಾಗಬಹುದು. ನೀವು ಕೆಲಸದಲ್ಲಿ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ವಾರದ ಉತ್ತರಾರ್ಧದಲ್ಲಿ ಹಣಕಾಸು ವ್ಯವಹಾರಗಳು ಸುಗಮವಾಗಲಿದೆ. ಮನೆಗಾಗಿ ನೀವು ದುವಾರಿ ವಸ್ತುವೊಂದನ್ನು ಖರೀದಿಸಬಹುದು. ವಾಹನ ಖರೀದಿಯ ಆಲೋಚನೆಯಿದ್ದರೆ ಲಾಭವಿದೆ. ಆಸ್ತಿ ಸಂಬಂಧಿತ ವಿಚಾರದಲ್ಲಿ ಧನಾತ್ಮಕ ಫಲಿತಾಂಶ ಪಡೆಯಬಹುದು. ದಾಂಪತ್ಯದಲ್ಲಿ ಮಿಶ್ರ ಫಲ ಅನುಭವಿಸುವಿರಿ.

ತುಲಾ ರಾಶಿ:
ತುಲಾ ರಾಶಿಯವರಿಗೆ ಈ ವಾರ ಅದೃಷ್ಟ ಒಲಿಯುತ್ತದೆ. ನೀವು ನಿರೀಕ್ಷಿಸಿದ್ದಕ್ಕಿಂತಲೂ ದೊಡ್ಡ ಲಾಭ ಪಡೆಯಬಹುದು. ಪ್ರವಾಸಗಳಲ್ಲಿ ಸುಖವಿದೆ. ವಾರದ ಆರಂಭದಲ್ಲಿ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗಮನಾರ್ಹ ಪರಿಹಾರ ಸಿಗಬಹುದು. ದೀರ್ಘಕಾಲದಿಂದ ನಿಮ್ಮನ್ನು ತೊಂದರೆಗೊಳಿಸುತ್ತಿದ್ದ ವಿಷಯಗಳು ಈ ವಾರ ಅನುಕೂಲಕರ ಫಲಿತಾಂಶಗಳನ್ನು ಕಾಣುತ್ತವೆ. ಉದ್ಯೋಗದಲ್ಲಿರುವವರಿಗೆ ಹೆಚ್ಚುವರಿ ಆದಾಯದ ಮೂಲಗಳು ಹೊರಹೊಮ್ಮುತ್ತವೆ. ಅನಗತ್ಯ ಸಾಲ ಮಾಡಲು ಮುಂದಾಗಬೇಡಿ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ.

ವೃಶ್ಚಿಕ ರಾಶಿ:
ಈ ವಾರ ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲಿತಾಂಶಗಳ ನೋಡಬಹುದು. ನಿಮ್ಮ ಮಾತು ಮತ್ತು ನಡವಳಿಕೆಯಲ್ಲಿ ಸಂಯಮವನ್ನು ಕಾಪಾಡಿಕೊಳ್ಳಿ. ಆರ್ಥಿಕವಾಗಿ ವಾರದ ಮೊದಲಾರ್ಧವು ಸ್ವಲ್ಪ ಪ್ರತಿಕೂಲವೆಂದು ಪರಿಗಣಿಸಲಾಗುತ್ತದೆ. ಹಠಾತ್ ದೊಡ್ಡ ಖರ್ಚು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಹಣ ಹೂಡಿಕೆ ಮಾಡುವುದು ಅಗತ್ಯವಿದ್ದರೆ, ನಿಮ್ಮ ಹಿತೈಷಿಗಳ ಸಲಹೆಯನ್ನು ಪಡೆಯಿರಿ. ಅಪಾಯಕಾರಿ ಹೂಡಿಕೆಗಳನ್ನು ತಪ್ಪಿಸಿ. ಉದ್ಯೋಗದಲ್ಲಿರುವ ವ್ಯಕ್ತಿಗಳು ಬಡ್ತಿ, ವೇತನ ಹೆಚ್ಚಳ, ವರ್ಗಾವಣೆ ವಿಚಾರವಾಗಿ ಉತ್ತಮ ವಾರವಿದು. ಆಪ್ತರಿಂದ ನಿಮಗೆ ಧನ ಸಹಾಯದ ನಿರೀಕ್ಷೆ ಇದೆ.

ಧನು ರಾಶಿ:
ಈ ವಾರ ಧನು ರಾಶಿಯ ಸ್ಥಳೀಯರಿಗೆ ಮಿಶ್ರ ಫಲವಿದೆ. ವಾರದ ಮೊದಲಾರ್ಧದಲ್ಲಿ ನೀವು ಮನೆಯ ಸಮಸ್ಯೆಯ ಬಗ್ಗೆ ಚಿಂತಿತರಾಗಬಹುದು. ಹಾಗೆ ನಿಮ್ಮ ಬುದ್ದಿವಂತಿಕೆಯಿಂದ ವ್ಯವಹಾರದಲ್ಲಿ ಭಾಗಿಯಾಗುವುದು ಲಾಭಕ್ಕೆ ಕಾರಣ‍ವಾಗಲಿದೆ. ಈ ವಾರ ವ್ಯವಹಾರದಲ್ಲಿ ಚಿಂತನಶೀಲ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೊಸ ವ್ಯಾಪಾರಗಳು ಲಾಭ ತರಲಿವೆ. ದಾಂಪತ್ಯ ವಿಚಾರವಾಗಿ ನೀವು ತೆಗೆದುಕೊಳ್ಳುವ ನಿರ್ಧಾರವು ಮನಸ್ತಾಪಗಳಿಗೆ ಕಾರಣವಾಗಲಿದೆ. ಹಲವರಲ್ಲಿ ಹಣಕಾಸು ವಿಚಾರದಲ್ಲಿ ಒತ್ತಡ ಇರಲಿದೆ.

ಮಕರ ರಾಶಿ:
ಮಕರ ರಾಶಿಯವರಿಗೆ ಈ ವಾರ ಉತ್ತಮವಾಗಿರಲಿದೆ. ನಿಮ್ಮ ಹಲವು ಕೆಲಸಗಳನ್ನು ಪೂರ್ಣ ಮಾಡುವಿರಿ. ಅದ್ರಲ್ಲೂ ಬ್ಯಾಂಕಿಂಗ್ ವಿಚಾರವಾಗಿ ಬಹಳ ಸಮಯದಿಂದ ಓಡಾಟ ಮಾಡುತ್ತಿದ್ದರೆ ಈ ವಾರ ಪೂರ್ಣವಾಗಲಿದೆ. ನಿಮ್ಮ ಮಕ್ಕಳು ಮತ್ತು ಕುಟುಂಬ ಸದಸ್ಯರಿಂದ ನೀವು ಬೆಂಬಲವನ್ನು ಪಡೆಯುತ್ತೀರಿ, ಆದರೆ ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ನೀವು ಸ್ವಲ್ಪ ಕಾಳಜಿ ವಹಿಸಬಹುದು ಮುಖ್ಯ. ಉದ್ಯೋಗದಲ್ಲಿರುವ ವ್ಯಕ್ತಿಗಳು ಈ ವಾರ ಕೆಲಸದಲ್ಲಿ ಅಡ್ಡಿಗಳ ನೋಡಬಹುದು. ಹೊಸದಾಗಿ ಕೆಲಸ ಹುಡುಕುತ್ತಿದ್ದ ಮಂದಿಗೆ ಈ ವಾರ ಅನುಕೂಲಕರವಾದ ಫಲಿತಾಂಶ ಸಿಗದೆ ಇರಬಹುದು.

ಕುಂಭ ರಾಶಿ:
ಈ ವಾರ ಕುಂಭ ರಾಶಿಯವರಿಗೆ ಮಿಶ್ರ ಫಲ ಇರಲಿದೆ. ವಾರದ ಮೊದಲಾರ್ಧದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಬಹುದು, ಆದರೆ ದ್ವಿತೀಯಾರ್ಧದಲ್ಲಿ ಪರಿಹಾರ ಸಿಗಲಿದೆ. ಉದ್ಯೋಗದಲ್ಲಿರುವವರಿಗೆ ಪ್ರಯಾಣದ ವಾರ. ಆರ್ಥಿಕ ವಿಚಾರದಲ್ಲಿ ಲಾಭವಿದೆ. ಸಾಲದ ಪ್ರಮಾಣ ಹೆಚ್ಚಾದರು ನಿಮ್ಮಲ್ಲಿ ಒತ್ತಡಗಳಿರುವುದಿಲ್ಲ. ದಾಂಪತ್ಯದಲ್ಲಿ ಸುಖ ಇರಲಿದೆ. ನಿಮ್ಮ ಮನೆಗಾಗಿ ದುಬಾರಿ ವಸ್ತು ಖರೀದಿಸಬಹುದು.

ಮೀನ ರಾಶಿ:
ಮೀನ ರಾಶಿಯವರಿಗೆ ಈ ವಾರದ ಮೊದಲಾರ್ಧವು ದ್ವಿತೀಯಾರ್ಧಕ್ಕಿಂತ ಉತ್ತಮವಾಗಿರುತ್ತದೆ. ವಾರದ ಆರಂಭದಲ್ಲಿ ನಿಮಗೆ ಬರಬೇಕಿದ್ದ ಹಣ ಸಂದಾಯವಾಗಲಿದೆ. ಇದು ನಿಮ್ಮ ಅಗತ್ಯ ಕೆಲಸಗಳಲ್ಲಿ ವಿನಿಯೋಗಿಸಲು ಸಹಕಾರಿಯಾಗಲಿದೆ. ನಿಮ್ಮ ಕೆಲಸದಲ್ಲಿ ತುಂಬಾ ತೊಡಗಿಸಿಕೊಂಡಿರುತ್ತೀರಿ ಮತ್ತು ನಿಮ್ಮ ಗುರಿಗಳನ್ನು ಪೂರ್ಣ ಉತ್ಸಾಹದಿಂದ ಪೂರ್ಣಗೊಳಿಸುತ್ತೀರಿ. ಉದ್ಯಮಿಗಳಿಗೆ ಈ ವಾರ ಸಾಮಾನ್ಯಕ್ಕಿಂತ ಹೆಚ್ಚು ಲಾಭದಾಯಕವಾಗಿರುತ್ತದೆ. ಕೌಟುಂಬಿಕ ದೃಷ್ಟಿಕೋನದಿಂದ ಈ ವಾರ ನಿಮಗೆ ಅನುಕೂಲಕರವಾಗಿರುತ್ತದೆ.

Leave a Comment

Your email address will not be published. Required fields are marked *