ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಕೃಷ್ಣಪಕ್ಷದ ದ್ವಾದಶಿಯಿಂದ ದಕ್ಷಿಣಾಯನ ಆಷಾಢಮಾಸದ ಶುಕ್ಲಪಕ್ಷದ ಪಂಚಮಿಯವರೆಗೆ ಅಂದರೆ 31.08.25 ರಿಂದ 06.09.25 ರ ವರೆಗೆ ಈ ವಾರದ ಚಂದ್ರನ ಸಂಚಾರ ಭರಣಿ ನಕ್ಷತ್ರದಿಂದ ಮಖಾ ನಕ್ಷತ್ರದವರೆಗೆ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಸಂಪೂರ್ಣವಾಗಿ ತಿಳಿಯೋಣ.

Ad Widget ... ..

ಮೇಷ ರಾಶಿ:
ಮೇಷ ರಾಶಿಯವರಿಗೆ ಈ ವಾರವು ಬಹಳ ಅನುಕೂಲಕರವಾಗಿರಲಿದೆ. ನಿಮ್ಮೆಲ್ಲಾ ಕೆಲಸಗಳಲ್ಲಿ ಶುಭಕರ ಪ್ರಯತ್ನಗಳು, ಫಲಿತಾಂಶಗಳ ನೀವು ನೋಡಬಹುದು. ಮೇಷ ರಾಶಿಯವರು ಈ ವಾರ ತಮ್ಮ ಶಕ್ತಿ, ಸಮಯ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳ ತೆಗೆದುಕೊಳ್ಳಬೇಕಾಗುತ್ತದೆ. ವಾರದ ಮಧ್ಯದಲ್ಲಿ ಒತ್ತಡ ಅಥವಾ ಆರೋಗ್ಯ ಸಂಬಂಧಿಸಿದ ವಿಚಾರದಲ್ಲಿ ವ್ಯತಿರಿಕ್ತ ಪರಿಣಾಮ ನೋಡಬಹುದು. ಪರೀಕ್ಷೆಗಳ ತಯಾರಿಯಲ್ಲಿರುವವರು ಈ ಸಮಯದಲ್ಲಿ ಉತ್ತಮವಾಗಿರಲಿದೆ. ಪ್ರೇಮ ವ್ಯವಹಾರಗಳಲ್ಲಿ ಧನಾತ್ಮಕ ವಿಚಾರಗಳ ನೋಡಬಹುದು. ವೃತ್ತಿ ಸಂಬಂಧಿತ ವಿಚಾರ ಕೂಡ ಉತ್ತಮ ಫಲಿತಾಂಶಗಳ ನೀಡಲಿದೆ.

Ad Widget

ವೃಷಭ ರಾಶಿ:
ವೃಷಭ ರಾಶಿಯವರು ತಮ್ಮ ಕೆಲಸವನ್ನು ಯೋಜಿತ ರೀತಿಯಲ್ಲಿ ಮಾಡಿದರೆ ಈ ವಾರ ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಶ್ರಮದಾಯಕ ಕೆಲಸಗಳಲ್ಲಿ ಉತ್ತಮ ಲಾಭ ನೋಡುವಿರಿ. ನಿಮ್ಮ ಕೆಲಸಕ್ಕೆ ಸಂಬಂಧಿಸಿದ್ದಂತೆ ದುಬಾರಿ ವಸ್ತುವೊಂದನ್ನು ನೀವು ಖರೀದಿಸಬಹುದು. ಈ ವಾರ ತಮ್ಮ ಸಂಬಂಧಗಳನ್ನು ಸುಧಾರಿಸಬೇಕಾಗುತ್ತದೆ. ಯಾರೊಂದಿಗಾದರೂ ಮನಸ್ತಾಪಗಳಿದ್ದರೆ ಕುಳಿತು ಮಾತಿನ ಮೂಲಕ ಪರಿಹರಿಸಿಕೊಳ್ಳಿ. ಅನಗತ್ಯ ವಿಚಾರವಾಗಿ ಖರ್ಚುಗಳ ಮಾಡುವುದನ್ನು ತಪ್ಪಿಸುವುದು ಒಳಿತು. ನಿಮ್ಮ ಕೆಲಸದಿಂದ ಹಣ ಬರಬಹುದು.

ಮಿಥುನ ರಾಶಿ:
ಮಿಥುನ ರಾಶಿಯವರ ಮನಸ್ಸು ಈ ವಾರ ಯಾವುದೋ ವಿಷಯದ ಬಗ್ಗೆ ತೊಂದರೆಗೊಳಗಾಗುತ್ತದೆ. ಇಡೀ ವಾರ ನೀವು ಯಾವುದಾದರೊಂದು ವಿಚಾರ ಕುರಿತಾಗಿ ಆಲೋಚಿಸುತ್ತೀರಿ. ಅನೇಕರಿಗೆ ಈ ವಾರ ಬಹಳ ಮಿಶ್ರ ಫಲ ನೋಡಬಹುದು. ನಿಮ್ಮ ಆದಾಯದಷ್ಟೇ ಖರ್ಚುಗಳು ಕೂಡ ಬರುವುದು. ಇದರಿಂದ ನಿಮ್ಮಲ್ಲಿ ಹಣಕಾಸು ಕುರಿತಾದ ಯೋಜನೆಗಳು ಏರುಪೇರಾಗಬಹುದು. ವ್ಯವಹಾರಕ್ಕೆ ಸಂಬಂಧಿಸಿದ ಜನರಲ್ಲಿ ಈ ಸಮಯವು ನೀವು ಅಂದುಕೊಂಡಂತಹ ಲಾಭ ತರದೆ ಇರಬಹುದು. ಪ್ರಯಾಣಗಳ ಮಾಡಬೇಕಾಗುತ್ತದೆ. ಹೀಗಾಗಿ ಪ್ರಯಾಣದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಕರ್ಕ ರಾಶಿ:
ಕರ್ಕ ರಾಶಿಯವರಿಗೆ ವಾರದ ಆರಂಭವು ಸುಖಕರವಾಗಿರಲಿದೆ. ನಿಮ್ಮ ಆರ್ಥಕ ಅಗತ್ಯತೆಗಳನ್ನು ನೀವು ಈಡೇರಿಸಿಕೊಳ್ಳಲಿದ್ದೀರಿ. ಆರೋಗ್ಯದ ಕುರಿತಾದ ಎಚ್ಚರಿಕೆ ಇರಲಿ. ನಿಮ್ಮ ವಾಹನ ಸಂಬಂಧಿತ ಖರ್ಚುಗಳು ಹೆಚ್ಚಾಗಬಹುದು. ಮನೆಯಲ್ಲಿ ಹಣಕಾಸು ಸಂಬಂಧಿತ ವಿಚಾರವಾಗಿ ನಿಮ್ಮ ಮೆಲೆ ಒತ್ತಡ ಬರಬಹುದು. ನೀವು ಪಿತ್ರಾರ್ಜಿತ ಕೆಲಸಗಳ ಮಾಡುತ್ತಿದ್ದರೆ ಅದರಿಂದ ಹೆಚ್ಚು ಲಾಭವಿದೆ. ವ್ಯಾಪಾರಿಗಳಿಗೂ ಕೂಡ ಉತ್ತಮ ಲಾಭಕರ ದಿನಗಳಿವೆ. ವಾಹನ ಲಾಭವಿದೆ. ಗೃಹಿಣಿಯರಲ್ಲಿ ಈ ಸಮಯ ಉತ್ತಮ ದಿನಗಳ ತರಲಿದೆ.

ಸಿಂಹ ರಾಶಿ:
ಈ ವಾರ ಸಿಂಹ ರಾಶಿಯವರಿಗೆ ಮಿಶ್ರ ಫಲದ ಸಮಯ. ನಿಮ್ಮ ಹಲವು ಕೆಲಸಗಳಲ್ಲಿ ಅಡೆತಡೆ ಇದ್ದರೂ ನೀವು ಬಯಸಿದಂತಹ ಯಶಸ್ಸು ಸಿಗಲಿದೆ. ಕುಟುಂಬದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿದೆ. ಶುಭ ಕಾರ್ಯ ಸಂಬಂಧವಾಗಿ ನಿಮಗೆ ಉತ್ತಮ ದಿನಗಳ ನೋಡುವಿರಿ. ಬಹಳ ದಿನಗಳಿಂದ ನೀವು ಬಯಸಿದಂತಹ ವಸ್ತು ನಿಮ್ಮ ಕೈ ಸೇರಬಹುದು. ಸರ್ಕಾರಿ ನೌಕರರಿಗೆ ಇದು ಉತ್ತಮ ವಾರವಾಗಿರಲಿದೆ. ನಿಮ್ಮ ಹಣಕಾಸು ಪರಿಸ್ಥಿತಿಗಳು ಹಿಂದೆಂದಿಗಿಂತಲೂ ಹೆಚ್ಚು ಸುಧಾರಿಸಲಿದೆ. ಮಕ್ಕಳಿಂದ ಉತ್ತಮ ಸುದ್ದಿ ಕೇಳುವ ವಾರವಿದು.

ಕನ್ಯಾ ರಾಶಿ:
ಈ ವಾರ ಕನ್ಯಾ ರಾಶಿಯವರಿಗೆ ಪ್ರಗತಿಯ ವಾರವಾಗಿದೆ. ಈ ವಾರ ನೀವು ಜೀವನದ ಪ್ರತಿಯೊಂದು ಹಂತದಲ್ಲೂ ಸಂತೋಷ ಮತ್ತು ಅದೃಷ್ಟವನ್ನು ಕಾಣುವಿರಿ. ನೀವು ಹಣಕಾಸಿನ ಸಮಸ್ಯೆಯಿಂದ ಅರ್ಧಕ್ಕೆ ಬಿಟ್ಟಿದ್ದ ಕೆಲಸವನ್ನು ಪೂರ್ಣ ಮಾಡುವಿರಿ. ನಿರುದ್ಯೋಗಿಗಳಿಗೆ ಈ ವಾರ ಬಹಳ ಉತ್ತಮ ಉದ್ಯೋಗವಕಾಶಗಳ ಪಡೆಯುವ ವಾರ. ವ್ಯಾಪಾರಿ ವಲಯದಲ್ಲಿ ಯಥಾಸ್ಥಿತಿ ಇರಲಿದೆ. ವಾರದ ಕೊನೆಯಲ್ಲಿ ನೀವು ಅಗತ್ಯ ಕೆಲಸಕ್ಕಾಗಿ ಸಾಲ ಮಾಡಬೇಕಾಗಿ ಬರಬಹುದು. ಇತರರಿಗೂ ಹಣಕಾಸಿನ ಸಹಾಯ ಮಾಡಲು ನೀವು ಮುಂದಾಗಬಹುದು.

ತುಲಾ ರಾಶಿ:
ತುಲಾ ರಾಶಿಯವರು ಈ ವಾರ ಜೀವನದಲ್ಲಿ ಕೆಲವು ಏರಿಳಿತಗಳ ನೋಡಬಹುದು. ನಿಮ್ಮ ಉದ್ಯೋಗ ಸಂಬಂಧಿ ಸಮಸ್ಯೆಗಳು ಹೆಚ್ಚಾಗಬಹುದು. ಸಾಲ ಮರುಪಾವತಿಯ ಒತ್ತಡಕ್ಕೆ ನೀವು ಒಳಗಾಗಬಹುದು. ಹಲವು ಸಮಯದ ನಿಮ್ಮ ಅರ್ಧಕ್ಕೆ ನಿಂತ ಕೆಲಸಗಳನ್ನು ಪೂರ್ಣ ಮಾಡಬಹುದು. ಇಡೀ ವಾರ ಶ್ರಮದಾಯಕ ಕೆಲಸಗಳಲ್ಲಿ ನೀವು ಭಾಗಿಯಾಗುತ್ತೀರಿ. ಹೂಡಿಕೆಗಳಲ್ಲಿ, ಉಳಿತಾಯದಲ್ಲಿ ಏರಿಯಾಗಲಿದೆ. ಆಪ್ತರೊಬ್ಬರ ಸಲಹೆಯಂತೆ ನಿಮ್ಮ ಕೆಲಸದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಅವಿವಾತರಲ್ಲಿ ವೆಚ್ಚದಾಯಕ ವಾರ ಆಗಿರಲಿದೆ.

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿ ಜನರಿಗೆ ಈ ವಾರ ಸರಾಸರಿಯಾದ ದಿನಗಳಿವೆ. ವಾರದ ಆರಂಭದಲ್ಲಿ ನಿಮ್ಮಲ್ಲಿ ಗೊಂದಲಗಳಿರಬಹುದು. ಹಿತ ಶತ್ರುಗಳ ಕುರಿತಾಗಿ ಎಚ್ಚರಿಕೆಯಿಂದ ಇರುವುದು ಉತ್ತಮ. ಕಾಲೋಚಿತ ಸಮಸ್ಯೆಗಳಿಂದ ನಿಮ್ಮ ಕೆಲಸ ಕಾರ್ಯಗಳಲ್ಲ ಅಡ್ಡಿಗಳ ನೋಡಬಹುದು. ಪ್ರೇಮ ಸಂಬಂಧ, ದಾಂಪತ್ಯ ವಿಚಾರವಾಗಿ ನಿಮಗೆ ದೊಡ್ಡ ಮಟ್ಟದ ಸವಾಲುಗಳಿಲ್ಲ. ಅಗತ್ಯ ಕೆಲಸಕ್ಕಾಗಿ ನೀವು ಸಾಲ ಮಾಡಬಹುದು. ವ್ಯಾಪಾರಿಗಳು ನಷ್ಟ ಅನುಭವಿಸುವ ಸಾಧ್ಯತೆ ಇದೆ. ಕೆಲಸದಲ್ಲಿ ಒತ್ತಡ ಹೆಚ್ಛಾಗಲಿದೆ.

ಧನು ರಾಶಿ:
ಧನು ರಾಶಿಯವರಿಗೆ ಈ ವಾರವು ಅತ್ಯಂತ ಪ್ರಬಲ ಫಲಿತಾಂಶ ತರಲು ಕಾರಣವಾಗಲಿದೆ. ನಿಮ್ಮ ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯಬಹುದು. ವಾಹನ ಲಾಭದ ವಾರವಿದು. ಮನೆ ನಿರ್ಮಾಣ, ಆಸ್ತಿ ಖರೀದಿ, ಪ್ರವಾಸದಂತಹ ಕೆಲಸದಲ್ಲಿ ಶುಭಯೋಗವಿದೆ. ದಿಢೀರ್ ಧನಲಾಭ ನೋಡಬಹುದು. ಯಾರಿಗೂ ನಿಮ್ಮ ಶಕ್ತಿ ಮೀರಿ ಸಾಲ ನೀಡಲು ಹೋಗಬೇಡಿ. ಅನೇಕರಿಗೆ ವ್ಯವಹಾರದಲ್ಲಿ ಹಿನ್ನಡೆ ಉಂಟಾಗಬಹುದು ಆದ್ರೆ ಇದರಿಂದ ವಿಚಲಿತರಾಗಬೇಡಿ. ಮಕ್ಕಳ ಕುರಿತಾದ ಚಿಂತೆಯೊಂದನ್ನು ದೂರ ಮಾಡುವ ಮಾರ್ಗ ಸಿಗಲಿದೆ.

ಮಕರ ರಾಶಿ:
ಮಕರ ರಾಶಿಯ ಜನರಿಗೆ ಈ ಸಮಯದಲ್ಲಿ ಲಾಭಗಳಿವೆ. ದೂರ ಪ್ರಯಾಣಗಳಲ್ಲಿ ನಿಮಗೆ ಲಾಭದಾಯಕ ವಿಚಾರಗಳಿವೆ. ನಿಮ್ಮ ಸಮಸ್ಯೆಗಳ ಕುರಿತು ಆಪ್ತರೊಬ್ಬರ ಬಳಿ ಹಂಚಿಕೊಳ್ಳುವುದು ಪರಿಹಾರಕ್ಕೆ ಕಾರಣವಾಗಲಿದೆ. ವಾರದ ಮಧ್ಯದಲ್ಲಿ ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರದ ಪ್ರಯಾಣದ ಸಾಧ್ಯತೆ ಇರಬಹುದು. ಭೂಮಿ, ಕಟ್ಟಡ ಅಥವಾ ವಾಹನ ಇತ್ಯಾದಿಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ಈ ವಾರದಲ್ಲಿ ಮುನ್ನುಡಿ ಬರೆಯಬಹುದು. ನಿಮ್ಮ ಪ್ರೇಮ ಜೀವನವು ಚೆನ್ನಾಗಿರಲಿದೆ. ಆಧ್ಯಾತ್ಮಿಕ ವಿಚಾರದಲ್ಲಿ ನಿಮಗೆ ಉತ್ತಮ ವಾರ.

ಕುಂಭ ರಾಶಿ:
ಕುಂಭ ರಾಶಿಯ ಜನರಲ್ಲಿ ಈ ವಾರ ಬಹಳ ಉತ್ತಮ ಫಲಿತಾಂಶಗಳ ಪಡೆಯುವ ವಾರ. ನಿಮ್ಮ ಹಲವು ವರ್ಷಗಳ ಶ್ರಮಕ್ಕೆ ಫಲ ಸಿಗಲಿದೆ. ಕೃಷಿ ಸಂಬಂಧಿತ ವಿಚಾರಲ್ಲಿ ಭಾಗಿಯಾದ ಮಂದಿಗೆ ಉತ್ತಮ ಸಮಯ. ವಾರದ ಮೊದಲಾರ್ಧದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಈ ಸಮಯದಲ್ಲಿ ನೀವು ಗಾಯಗೊಳ್ಳುವ ಅಥವಾ ಹಳೆಯ ಕಾಯಿಲೆ ಮತ್ತೆ ಕಾಣಿಸಿಕೊಳ್ಳುವ ಅಪಾಯವಿರುತ್ತದೆ. ನ್ಯಾಯಾಲಯ ಸಂಬಂಧಿ ವಿಚಾರದಲ್ಲಿ ನಿಮಗೆ ಆತಂಕದ ಕಾಲವಾಗಬಹುದು.

ಮೀನ ರಾಶಿ:
ಮೀನ ರಾಶಿಯ ಜನರಿಗೆ ಈ ವಾರ ಉತ್ತಮ ಲಾಭ ಬರಲಿದೆ. ಹೊಸ ಉದ್ಯೋಗ ಉದ್ಯಮ ಲಾಭದತ್ತ ತಿರುಬಹುದು. ನಿಮ್ಮ ಸ್ವಂತ ಉದ್ಯೋಗದ ಆಸೆಗೆ ಈ ವಾರದಲ್ಲಿ ಪ್ರಕ್ರಿಯೆ ಆರಂಭವಾಗಬಹುದು. ಅನಾರೋಗ್ಯ ಸಂಬಂಧಿ ಖರ್ಚು ಇದ್ದರೂ ನಿಮ್ಮಲ್ಲಿ ನೆಮ್ಮದಿ ಇರಲಿದೆ. ಆಪ್ತರೊಬ್ಬರಿಂದ ಹಣಕಾಸಿನ ನೆರವು ಪಡೆಯಬಹುದು. ಕುಟುಂಬದಲ್ಲಿ ಶಾಂತಿ ನೆಲೆಸುವ ವಾರವಿದು. ವಿದ್ಯಾರ್ಥಿಗಳಿಗೆ ಕಠಿಣವಾಗಬಹುದು. ಗೃಹಿಣಿಯರಲ್ಲಿ ಹೆಚ್ಚು ಖರ್ಚುಗಳು ಬರಬಹುದು.

Leave a Comment

Your email address will not be published. Required fields are marked *