ಸಮಗ್ರ ನ್ಯೂಸ್: ಅನನ್ಯ ಭಟ್ ಸುಜಾತ್ ಭಟ್ ಅವರ ಮಗಳೇ ಅಲ್ಲ ಎಂದು ಮಾಧ್ಯಮಗಳಲ್ಲಿ ತನಿಖಾ ವರದಿಗಳು ಬರುತ್ತಿರುವುದರ ಬೆನ್ನಲ್ಲೇ ಇದೀಗ ಅನನ್ಯ ಭಟ್ ನಾಪತ್ತೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಗೆ ವಹಿಸಲಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣದ ಬೆನ್ನಲ್ಲಿಯೇ ಅನನ್ಯ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಾಯಿ ಸುಜಾತಾ ಭಟ್ ಜುಲೈ 15ರಂದು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು.
ಧರ್ಮಸ್ಥಳ ಪೊಲೀಸರು ನಂ. 175/PTN/DPS/2025 ರಂತೆ ದೂರರ್ಜಿಯನ್ನು ಸ್ವೀಕರಿಸಿದ್ದರು. ಈ ದೂರರ್ಜಿಯನ್ನು ಡಿಜಿ ಹಾಗೂ ಐಜಿಪಿಯವರು ಆ.19 ರಂದು ನೀಡಿದ ಆದೇಶದಂತೆ ಮುಂದಿನ ವಿಚಾರಣೆಗಾಗಿ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಿರುವುದಾಗಿ ಮಾಹಿತಿ ನೀಡಿದ್ದಾರೆ.







