ಆ ಊರಲ್ಲಿದೆ ಅವಳಿ ಮಕ್ಕಳ ಬಾವಿ| ಇಲ್ಲಿನ ನೀರು ಕುಡಿದರೆ ಅವಳಿ ಮಕ್ಕಳ ಜನನ ಪಕ್ಕಾ ಅಂತೆ!!

ಸಮಗ್ರ ನ್ಯೂಸ್: ಅನೇಕರು ಅವಳಿ ಮಕ್ಕಳು ಬೇಕು ಅಂತ ಆಸೆ ಪಡ್ತಾರೆ. ಆದರೆ ಎಲ್ಲರಿಗೂ ಅವಳಿ ಮಕ್ಕಳು ಆಗಲ್ಲ, ತುಂಬಾ ವಿರಳಾತೀ ವಿರಳ ಪ್ರಕರಣಗಳಲ್ಲಿ ಅವಳಿ ಮಕ್ಕಳು ಜನಿಸುತ್ತಾರೆ. ಆದರೆ ಕೆಲವೊಂದು ಗ್ರಾಮಗಳಲ್ಲಿ ಅವಳಿ ಮಕ್ಕಳು ತುಂಬಾ ಜನ ಇರ್ತಾರೆ. ಅದೇನು ಆ ಸ್ಥಳದ ಮಹಿಮೆಯೂ ಆ ಊರಿನ ಜೀವನಶೈಲಿಯೂ ವಾತಾವರಣವೋ ಗೊತ್ತಿಲ್ಲ. ಆದರೆ ಇಲ್ಲೊಂದು ಕಡೆ ಅವಳಿ ಮಕ್ಕಳನ್ನು ಪಡೆಯುವುದಕ್ಕಾಗಿಯೇ ಇರುವ ಬಾವಿಯೊಂದಿದೆ.

Ad Widget ... ..

ಹೌದು ಕೇಳುವುದಕ್ಕೆ ನಿಮಗಿದು ಅಚ್ಚರಿ ಅನಿಸಬಹುದು. ಆದರೆ ಆ ಊರಿನ ಜನ ಹಾಗೂ ಅಕ್ಕಪಕ್ಕದ ಗ್ರಾಮಗಳ ಜನ ಇದನ್ನು ಬಹಳ ಬಲವಾಗಿ ನಂಬುತ್ತಿದ್ದಾರೆ. ಇವರ ನಂಬಿಕೆಗೆ ಸಾಕ್ಷಿ ಎಂಬಂತೆ ಆ ಊರಿನ ತುಂಬೆಲ್ಲಾ ಅವಳಿ ಮಕ್ಕಳನೇ ನೀವು ಕಾಣಬಹುದಾಗಿದೆ. ಅಂದಹಾಗೆ ಈ ಬಾವಿ ಇರುವುದು ಆಂಧ್ರಪ್ರದೇಶದಲ್ಲಿ. ಆಂಧ್ರಪ್ರದೇಶದ ರಾಜಮಂಡ್ರಿ ಜಿಲ್ಲೆಯಿಂದ 30 ಕಿಲೋಮೀಟರ್ ದೂರದಲ್ಲಿರುವ ದೊಡ್ಡಿಗುಂಟಾ ಗ್ರಾಮದಲ್ಲಿರುವ ಬಾವಿಯೊಂದು ಅವಳಿ ಮಕ್ಕಳ ಬಾವಿ ಎಂದೇ ಫೇಮಸ್ ಆಗಿದೆ. ಈ ಬಾವಿಯನ್ನು ಇಲ್ಲಿನ ಜನ ಕವಲುಪಿಲ್ಲಲ ಬಾವಿ ಎಂದೇ ಕರೆಯುತ್ತಾರೆ ಎಂದರೆ ಅವಳಿ ಮಕ್ಕಳ ಬಾವಿ ಎಂದರ್ಥ. ಯಾರು ಈ ಬಾವಿಯ ನೀರು ಕುಡಿಯುತ್ತಾರೋ ಅವರಿಗೆ ಅವಳಿ ಮಕ್ಕಳೇ ಜನಿಸುತ್ತಾರೆ ಎಂಬ ಬಲವಾದ ನಂಬಿಕೆ ಇಲ್ಲಿನವರಲ್ಲಿದೆ.

Ad Widget

ಅದೇ ರೀತಿ ಅಕ್ಕಪಕ್ಕದ ಊರಿನ ಜನರೂ ಕೂಡ ಈ ಬಾವಿಯ ನೀರನ್ನು ತೆಗೆದುಕೊಂಡು ಹೋಗಿ ಕುಡಿಯುತ್ತಾರೆ. ಅನೇಕರು ತಮ್ಮ ಮನೆಯ ಮಕ್ಕಳು ಸೊಸೆಯಂದಿರಿಗಾಗಿ ಈ ನೀರನ್ನು ಇಲ್ಲಿಂದ ವಾಹನಗಳಲ್ಲಿ ಹೊತ್ತುಕೊಂಡು ಹೋಗುತ್ತಾರೆ. ಅವಳಿ ಮಕ್ಕಳು ಜನಿಸಬೇಕಾದರೆ ಕನಿಷ್ಠ ಮೂರು ತಿಂಗಳು ಈ ನೀರು ಕುಡಿಯಬೇಕು ಎನ್ನುತ್ತಾರೆ ಇಲ್ಲಿನ ಜನ ಈ ವೀಡಿಯೋವನ್ನು ಟ್ರಾವೆಲ್ ಬ್ಲಾಗರ್‌, ಕನ್ನಡ ಯೂಟ್ಯೂಬರ್ ಅರುಣ್ ಎಂಬುವವರು ತಮ್ಮ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದು, ಸಾವಿರಾರು ಜನ ಈ ವಿಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ದೊಡ್ಡಿಗುಂಟಾ ಗ್ರಾಮದಲ್ಲಿ 120 ಜನ ಅವಳಿ ಮಕ್ಕಳಿದ್ದಾರೆ ಎನ್ನುತ್ತಾರೆ ಆ ಗ್ರಾಮದ ಜನ. ಮೂರು ತಿಂಗಳ ಕಾಲ ನಿರಂತರ ಈ ನೀರನ್ನು ಕುಡಿದರೆ ಶೇಕಡಾ 100 ರಷ್ಟು ಅವಳಿ ಮಕ್ಕಳು ಜನಿಸುತ್ತಾರೆ ಎಂದು ಹೇಳುತ್ತಾರೆ ಗ್ರಾಮಸ್ಥರು.

ಮಕ್ಕಳಾಗದ ಅನೇಕರಿಗೂ ಈ ನೀರು ಕುಡಿದ ನಂತರ ಮಕ್ಕಳಾಗಿದೆಯಂತೆ, ವೈದ್ಯರು ಪರೀಕ್ಷಿಸಿ ಮಕ್ಕಳಾಗುವುದಿಲ್ಲ ಎಂದು ಹೇಳಿದ ನಂತರವೂ ಈ ಬಾವಿಯ ನೀರು ಕುಡಿ ನಂತರ ಕೆಲ ಹೆಣ್ಣು ಮಕ್ಕಳಿಗೆ ಮಕ್ಕಳಾಗಿದೆ ಎಂದು ಹೇಳುತ್ತಾರೆ ಈ ಊರಿನ ಸ್ಥಳೀಯರೊಬ್ಬರು. ಕೆಲ ಯೂಟ್ಯೂಬರ್‌ಗಳಿಂದಾಗಿ ಈ ಗ್ರಾಮದ ಈ ಅವಳಿ ಮಕ್ಕಳ ಬಾವಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ದೂರದೂರದ ಊರುಗಳಿಂದಲೂ ಇಲ್ಲಿಗೆ ಜನ ಆಗಮಿಸಿ ಈ ಬಾವಿಯ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಇಲ್ಲಿನ ಶಾಲೆಗಳಲ್ಲೂ ಸಾಕಷ್ಟು ಅವಳಿ ಮಕ್ಕಳನ್ನು ಕಾಣಬಹುದಾಗಿದೆ. ಹೀಗಾಗಿ ಇಲ್ಲಿ ಇದೊಂದು ಸಣ್ಣ ಉದ್ಯಮದಂತಾಗಿದೆ. ಇಲ್ಲಿನ ಅಂಗಡಿಗಳಲ್ಲಿ ನೀರು ಸಾಗಿಸುವುದಕ್ಕೆ ಬೇಕಾದ ಬಿಳಿ ಬಣ್ಣದ 5 ರಿಂದ 10 ಲೀಟರ್‌ನ ಕ್ಯಾನ್‌ಗಳು ಸಾಕಷ್ಟು ಮಾರಾಟವಾಗುತ್ತಿದೆ.

Leave a Comment

Your email address will not be published. Required fields are marked *