ಮಂಗಳೂರಿಗೆ ಬಂದಿಳಿದ T-55 ಯುದ್ಧ ಟ್ಯಾಂಕ್

ಸಮಗ್ರ ನ್ಯೂಸ್: ಸಾಮಾನ್ಯವಾಗಿ ಯುದ್ಧದಲ್ಲಿ ಪಾಲ್ಗೊಂಡು ಸೇವೆಯಿಂದ ನಿವೃತ್ತಿ ಪಡೆದ ಟ್ಯಾಂಕ್ ಮತ್ತಿತರ ಸೇನೆಯ ಆಯುಧಗಳನ್ನು ವಾರ್ ಟ್ರೋಫಿ (ಯುದ್ಧ ಸ್ಮರಣಿಕೆ) ರೀತಿಯಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಅದೇ ರೀತಿ ಮಂಗಳೂರಿಗೆ ಟ್ಯಾಂಕ್ ಅನ್ನು ನೀಡುವಂತೆ ಸಂಸದ ಕ್ಯಾ|ಬ್ರಿಜೇಶ್ ಚೌಟ ರಕ್ಷಣಾ ಸಚಿವಾಲಯಕ್ಕೆ ಮನವಿ ಮೇರೆಗೆ ಯುದ್ದ ಟ್ಯಾಂಕ್ ಮಂಗಳೂರು ತಲುಪಿದೆ.

Ad Widget . Ad Widget . Ad Widget . Ad Widget . Ad Widget .

ಕದ್ರಿ ಯುದ್ಧಸ್ಮಾರಕ ಅಥವಾ ಸರ್ಕಿಟ್ ಹೌಸ್ ಮುಂಭಾಗ ಅಥವಾ ಇತರ ಯೋಗ್ಯ ಸ್ಥಳದಲ್ಲಿ ಟ್ಯಾಂಕ್ ಅನ್ನು ಇರಿಸಲಾಗುವುದು. ಅದಕ್ಕಾಗಿ ಪ್ರತ್ಯೇಕ ವೇದಿಕೆ ನಿರ್ಮಿಸುವ ಕೆಲಸವನ್ನು ಮಹಾನಗರಪಾಲಿಕೆ ಮಾಡಲಿದೆ. ಟಿ-55 ಟ್ಯಾಂಕ್ ಹಿಂದೆ ಯುದ್ದದಲ್ಲಿ ಬಳಕೆಯಾಗಿದ್ದು, ಸದ್ಯ ಬಳಸುವ ಸ್ಥಿತಿಯಲ್ಲಿಲ್ಲ. ಅಂತಹವುಗಳನ್ನು ದೇಶದ ವಿವಿಧೆಡೆ ಆಸಕ್ತ ಸಂಸ್ಥೆಗಳಿಗೆ ದೇಶದಲ್ಲಿ “ಸ್ಪೂರ್ತಿದಾಯಕ’ವಾಗಿ ಪ್ರದರ್ಶಿಸಲು ನೀಡಲಾಗುತ್ತದೆ. ಅದರಂತೆ ಮೂರು ತಿಂಗಳ ಹಿಂದೆ ಮಹಾನಗರಪಾಲಿಕೆಗೆ ಉಚಿತವಾಗಿ ರಕ್ಷಣಾ ಇಲಾಖೆ ನೀಡಲು ಒಪ್ಪಿದೆ. ಪುಣೆಯ ಕಿರ್ಕಿ ಎಂಬಲ್ಲಿನ ಡಿಪೋದಿಂದ ಈ ಟಿ-55 ಟ್ಯಾಂಕ್ ತರಲಾಗಿದೆ.

Ad Widget . Ad Widget .

ಪ್ರವಾಸೋದ್ಯಮಕ್ಕೆ ಮೆರುಗು
ಸುಮಾರು 40 ಟನ್ ತೂಕವಿರುವ ಟ್ಯಾಂಕ್ ಇದಾಗಿದ್ದು, ಯುದ್ಧ ಬಳಕೆಯ ಟ್ಯಾಂಕ್ ಮಂಗಳೂರು ಪ್ರವಾಸೋದ್ಯಮಕ್ಕೂ ಆಕರ್ಷಣೆ ತುಂಬಲಿದೆ. ನಗರದಲ್ಲಿ ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಲಿದ್ದು, ಗಾಳಿ, ಬಿಸಿಲಿನಿಂದ ರಕ್ಷಣೆ ನೀಡುವಂತಹ ಶೆಡ್ ಒದಗಿಸಬೇಕಿದೆ. ಟಿ- 55 ಟ್ಯಾಂಕ್‌ಗಳನ್ನು 1965 ಹಾಗೂ 1971ರ ಪಾಕಿಸ್ತಾನ ಯುದ್ಧದಲ್ಲಿ ಬಳಸಲಾಗಿತ್ತು. ಸಂಸತ್ತಿಗೆ ಭಯೋತ್ಪಾದಕರ ಆಕ್ರಮಣದ ನಂತರ ನಡೆದ ಆಪರೇಷನ್ ಪಾರಾಕ್ರಮ ದಲ್ಲೂ ಭಾಗಿಯಾಗಿದೆ. ಭಾರತದ ಮಿಲಿಟರಿ ಪಡೆಯ ಶೌರ್ಯದ ಪ್ರತೀಕವಾಗಿ ಈ ಟ್ಯಾಂಕ್‌ಗಳನ್ನು ಪ್ರಸ್ತುತ ವಿವಿಧ ಕಡೆಗಳಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಇದರ ವೀಕ್ಷಣೆಯಿಂದ ಯುವಜನತೆಗೆ ಸೇನೆ ಸೇರುವ ಸ್ಫೂರ್ತಿ ಸಿಗಬೇಕು ಎನ್ನುವುದು ಇದರ ಉದ್ದೇಶ.

Leave a Comment

Your email address will not be published. Required fields are marked *