ಸಮಗ್ರ ನ್ಯೂಸ್: ಹಲವಾರು ಮೃತದೇಹ ಹೂತು ಹಾಕಿದ ಆರೋಪ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜುಲೈ 31 ರಂದು 6 ನೇ ಗುರುತು ಮಾಡಿದ ಜಾಗದಲ್ಲಿ ಪತ್ತೆಯಾದ ಅಸ್ಥಿಪಂಜರ ಪ್ರಕರಣ ಆಗಸ್ಟ್ 1 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ಮತ್ತು ಆಗಸ್ಟ್ 4 ರಂದು ಅಪ್ರಾಪ್ತ ಬಾಲಕಿಯನ್ನು ಕಾನೂನು ಬಾಹಿರವಾಗಿ ಹೂತು ಹಾಕಿರುವ ಬಗ್ಗೆ ಜಯಂತ್.ಟಿ ನೀಡಿದ ದೂರಿನ ಪಿಟಿಷನ್ ಪ್ರಕರಣವನ್ನು ಮುಂದಿನ ತನಿಖೆಗಾಗಿ ಕರ್ನಾಟಕ ರಾಜ್ಯದ ಡಿಜಿಪಿ & ಐಜಿಪಿ ರವರು ಆ.5 ರಂದು ಎಸ್.ಐ.ಟಿ ಗೆ ನೀಡಲು ಆದೇಶ ಮಾಡಿದ್ದಾರೆ.
ಈ ನಡುವೆ ರ್ಮಸ್ಥಳದಲ್ಲಿ ಅಸ್ತಿಪಂಜರಗಳು ಪತ್ತೆಯಾಗಿರುವ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (SIT) ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಸರ್ಕಾರವು ತನಿಖೆಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ, ಹಲವು ವಿಷಯಗಳ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ದೂರುದಾರ ವ್ಯಕ್ತಿ ತೋರಿಸಿದ ಸ್ಥಳಗಳಲ್ಲಿ ಎಸ್‌ಐಟಿ ಶೋಧ ಕಾರ್ಯ ನಡೆಸುತ್ತಿದೆ. ಎಲ್ಲಿ ಗುರುತಿಸಬೇಕು, ಹೇಗೆ ತನಿಖೆ ನಡೆಸಬೇಕು ಎಂದು ಸರ್ಕಾರ ಯಾವುದೇ ನಿರ್ದೇಶನ ನೀಡುವುದಿಲ್ಲ. ತನಿಖೆಯು ಒಂದು ಹಂತಕ್ಕೆ ಬಂದ ನಂತರ ಎಸ್‌ಐಟಿಯೇ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ,” ಎಂದು ತಿಳಿಸಿದರು.







