ಧರ್ಮಸ್ಥಳ‌ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಕೈವಾಡ| ಆ ಆಗಂತುಕ ಬಿಚ್ಚಿಟ್ಟ ಅಸಲಿ ಸತ್ಯವೇನು?

ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ಶವ ಹೂತಿರುವ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯರೊಬ್ಬರ ಹೆಸರು ತನಿಖೆಯಲ್ಲಿ ತಳುಕು ಹಾಕಿಕೊಂಡಿದೆ, ಅನಾಮಿಕ ದೂರುದಾರ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರನ್ನು ತನಿಖಾ ತಂಡದ ಮುಂದೆ ಹೇಳಿದ್ದೇನೆ. ಎಸ್‌ಐಟಿ ವಿಚಾರಣೆಯಲ್ಲಿ ಈ ದೂರುದಾರ ನೀಡಿದ ಮಾಹಿತಿಯ ಪ್ರಕಾರ, ಶವಗಳನ್ನು ಹೂತಿಟ್ಟ ಕಾರ್ಯದಲ್ಲಿ ಅಂದು ಪೊಲೀಸ್ ಅಧಿಕಾರಿಯೂ ಸಾಥ್ ನೀಡಿದ್ದರು. ಪ್ರಕರಣ ಸಂಬಂಧ ಈಗ ಆ ಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ವಿಷಯ ಬಹಿರಂಗವಾಗುತ್ತಿದ್ದಂತೆ, ಸಂಬಂಧಿತ ಅಧಿಕಾರಿ ಈ ವಿಚಾರ ತಿಳಿದು ವಿಚಾರಣೆ ಭಯದಲ್ಲಿದ್ದು, ದೂರ ಉಳಿದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Ad Widget ... ..

ಇನ್ನು ಪ್ರಕರಣ ಸಂಬಂಧ ಧರ್ಮಸ್ಥಳ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದವರ ಲಿಸ್ಟ್‌ ತಲಾಶ್, 1995 ರಿಂದ ಕೆಲಸ ಮಾಡಿದ ಎಲ್ಲಾ ಪೊಲೀಸರ ಲಿಸ್ಟ್ ಅನ್ನು ಎಸ್.ಐ.ಟಿ ಕೇಳಿದೆ. ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಲಿಸ್ಟ್‌ ಗಾಗಿ ಎಸ್‌ಐಟಿ ರಿಕ್ವಸ್ಟ್ ಲೆಟರ್ ಕೊಟ್ಟಿದೆ.

Ad Widget

Leave a Comment

Your email address will not be published. Required fields are marked *