ಧರ್ಮಸ್ಥಳ: ಶವ ಹೂತಿಟ್ಟ ಜಾಗದಲ್ಲಿ ‌ಸಿಗದ ಕಳೆಬರ| ನಿನ್ನೆ ಏನೇನಾಯ್ತು ಗೊತ್ತಾ?

ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಆರೋಪ ಮಾಡಿದ್ದ ದೂರುದಾರ ಮಹಜರು ವೇಳೆ ಹಲವು ಸಮಾಧಿ ಸ್ಥಳಗಳನ್ನು ಗುರುತಿಸಿದ್ದ. ಇಂದು ಎಸ್‌ಐಟಿ ಅಧಿಕಾರಿಗಳು ಎಲ್ಲಾ ಕಾನೂನು ಪ್ರಕ್ರಿಯೆ ಮೂಲಕ ಸಮಾಧಿ ಅಗೆದಿದ್ದಾರೆ. ದೂರುದಾರ ಗುರುತಿಸಿದ ಸಮಾಧಿ ಪೈಕಿ ನೇತ್ರಾವತಿ ಸ್ನಾನಘಟ್ಟದ ಪಕ್ಕದಲ್ಲೇ ಗುರುತಿಸಿದ್ದ ಸಮಾಧಿ ಸ್ಥಳ ಅಗೆದಿದ್ದಾರೆ.

Ad Widget ... ..

ಕಾರ್ಮಿಕರ ಮೂಲಕ 4 ಅಡಿ ಅಗೆದ ಬಳಿಕ ಜೆಸಿಬಿ ಮೂಲಕ 8 ಅಡಿ ಅಗೆದರೂ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. ಹೀಗಾಗಿ ಮೊದಲ ಸಮಾಧಿ ಸ್ಥಳದ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ.

Ad Widget

ಮುಸುಕುದಾರಿ ದೂರುದಾರ ಸೂಚಿಸಿದ ಮೊದಲ ಸಮಾಧಿ ಸ್ಥಳದಲ್ಲಿ ಬರೋಬ್ಬರಿ 8ಅಡಿ ಆಳ, 15 ಅಡಿ ಅಗಲದಲ್ಲಿ ಸಮಾಧಿ ಅಗೆಯಲಾಗಿದೆ. ಆದರೆ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಆರಂಭದಲ್ಲಿ ಕಾರ್ಮಿಕರು 4 ಅಡಿ ಆಳ ಅಗೆದಿದ್ದರು. ಕಳೇಬರ ಪತ್ತೆಯಾಗದ ಹಿನ್ನಲೆಯಲ್ಲಿ ಮತ್ತಷ್ಟು ಅಡಿ ಆಳ ಅಗೆಯಲು ದೂರುದಾರ ಸೂಚಿಸಿದ್ದ. ಹೀಗಾಗಿ ಜೆಸಿಬಿ ಮೂಲಕ 8 ಅಡಿ ಆಳ ಸಮಾಧಿ ಅಗೆಯಲಾಗಿದೆ. ಆದರೆ ಕಳೇಬರ ಪತ್ತೆಯಾಗಿಲ್ಲ.

ಮೊದಲ ಸಮಾಧಿ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ. 6 ಅಡಿಯಲ್ಲಿ ಶವ ಹೂತಿಟ್ಟಿರುವುದಾಗಿ ದೂರುದಾರ ಹೇಳಿದ್ದ. ಆದರೆ 6 ಅಡಿಯಲ್ಲೂ ಸಿಗದ ಕಾರಣ 8 ಅಡಿ ಅಗೆಯಲಾಗಿದೆ. ಕಳೇಬರ ಸಿಗದ ಕಾರಣ ಮೊದಲ ಸಮಾಧಿ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ. ಇದೀಗ ದೂರುದಾರ ಗುರುತಿಸಿದ 2ನೇ ಸಮಾಧಿ ಸ್ಥಳ ಅಗೆಯುವ ಕಾರ್ಯ ಇಂದು(ಜು.30) ಆರಂಭಗೊಳ್ಳಲಿದೆ.

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಕಾಡಿನಲ್ಲಿ ದೂರುದಾರ ಗುರುತಿಸಿದ ಸಮಾಧಿ ಸ್ಥಳಗಳಲ್ಲಿ ಕಾರ್ಯಾಚರಣೆ ತೀವ್ರಗೊಂಡಿದೆ. ಇದರ ನಡುವೆ ಕಾರ್ಯಾಚರಣೆಯಲ್ಲಿ ಪೊಲೀಸ್ ನಾಯಿ ಬಳಕೆ ಮಾಡಲಾಗಿದೆ. ಪೊಲೀಸ್ ಡಾಗ್ ಮೂಲಕ ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸಮಾಧಿ ಅಗೆದು ಕಳೇಬರಹ ಹೊರತೆಗೆಯುವ ಕಾರ್ಯಾಚರಣೆಗೆ ಪೊಲೀಸ್ ಡಾಗ್ ಬಳಕೆ ಕುತೂಹಲ ಕೆರಳಿಸಿದೆ.

ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟಿರುವುದಾಗಿ ದೂರು ನೀಡಿದ್ದ ಮುಸುಕುದಾರಿ ಮೊದಲ ದಿನದ ಸ್ಥಳ ಮಹಜರು ವೇಳೆ 13 ಸ್ಥಳಗಳನ್ನು ಗುರುತಿಸಿದ್ದ. 13 ಸ್ಥಳಗಳಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿದ್ದಾನೆ. ಎರಡನೇ ದಿನವಾದ ಇಂದು ಕೂಡ ಸ್ಥಳ ಮಹಜರು ಪ್ರಕ್ರಿಯೆ ಮುಂದುವರಿದಿದೆ. ಎಸ್‌ಐಟಿ ಅಧಿಕಾರಿಗಳ ಒಂದು ತಂಡ ದೂರುದಾರನ ಜೊತೆ ಸ್ಥಳ ಮಹಜರು ಪ್ರಕ್ರಿಯೆ ಮಾಡಿದೆ. ಮತ್ತಷ್ಟು ಸಮಾಧಿ ಇರುವ ಸ್ಥಳ ಗುರುತಿಸಿರುವುದಾಗಿ ವರದಿಯಾಗಿದೆ. ಇಂದು (ಜು.30) ಸ್ಥಳ ಮಹಜರು ಹಾಗೂ ಕಾರ್ಯಾಚರಣೆ ಮುಂದುವರಿಯಲಿದೆ.

ಮೊದಲ ಸಮಾಧಿ ಅಗೆದರೂ ಕಳೇಬರ ಪತ್ತೆಯಾಗದ ಕಾರಣ ಕಾರ್ಯಾಚರಣೆ ಅಂತ್ಯಗೊಳಿಸಿರುವ ಎಸ್‌ಐಟಿ ತಂಡ ಬರಿಗೈಯಲ್ಲಿ ವಾಪಾಸ್ಸಾಗಿದೆ. ಇಂದು ದೂರುದಾರ ಗುರುತಿಸಿದ ಎರಡನೇ ಸಮಾಧಿ ಅಗೆಯುವ ಕಾರ್ಯ ನಡೆಯಲಿದೆ. ನಿನ್ನೆ ಮಳೆ ಹಾಗೂ ಕತ್ತಲಾಗುತ್ತಿರುವ ಕಾರಣ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ. ಎರಡನೇ ಸಮಾಧಿ ಅಗೆಯುವ ಕಾರ್ಯ ಸಂಪೂರ್ಣವಾಗಿ ಜೆಸಿಬಿ ಮೂಲಕ ನಡೆಯಲಿದೆ. ಇಂದು ಮೊದಲ ಸಮಾಧಿಯನ್ನು ಆರಂಭಿಕ 4 ಅಡಿ ಕಾರ್ಮಿಕರು ಅಗೆದಿದ್ದರು. ಆದರೆ ಪತ್ತೆಯಾಗದ ಕಾರಣ ಹಾಗೂ ಮಳೆಯಿಂದ ಕಾರ್ಯಾಚರಣೆ ವಿಳಂಬವಾಗುತ್ತಿರುವ ಕಾರಣ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿತ್ತು.

Leave a Comment

Your email address will not be published. Required fields are marked *