ಉಡುಪಿ: ನಿಂತಿದ್ದ ಲಾರಿಗೆ ಸ್ಕೂಟರ್ ಢಿಕ್ಕಿ – ಸ್ಥಳದಲ್ಲೇ ಸಾವುಕಂಡ ಸವಾರ

Ad Widget ... ..

ಉಡುಪಿ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಉಚ್ಚಿಲ ಸಮೀಪದ ಮುಳೂರಿನಲ್ಲಿ ನಡೆದಿದೆ.

Ad Widget

ಸವಾರನನ್ನು ಪಡುಬಿದ್ರೆ ನಿವಾಸಿ ಚರಣ್ ಶೆಟ್ಟಿ ಮೃತ ಸ್ಕೂಟರ್ ಸವಾರ. ಇವರು ಉಡುಪಿಯಿಂದ ಪಡುಬಿದ್ರೆಯತ್ತ ಸ್ಕೂಟರ್ ಸವಾರಿ ಮಾಡಿಕೊಂಡು ಹೋಗುತ್ತಿದ್ದರು. ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ 66 ರ ಮೂಳೂರಿನ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಲಾದ ಲಾರಿಯ ಹಿಂಬದಿಗೆ ಢಿಕ್ಕಿಯಾಗಿದೆ. ಈ ಪರಿಣಾಮ ಸ್ಕೂಟರ್ ಲಾರಿಯ ಅಡಿಯಲ್ಲಿ ಸಿಲುಕಿದೆ.

ಘಟನೆಯಿಂದ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಗೆ ಸಾಗಿಸಲಾಗಿತ್ತು, ಆದರೆ ಸವಾರ ಅದಾಗಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *