ವಾರದ ಹಿಂದೆ ಪರಿಚಯವಾದ ಇನ್ಸ್ಟಾಗ್ರಾಮ್ ಲವರ್ ಗಾಗಿ 13ವರ್ಷದ ದಾಂಪತ್ಯ ತೊರೆದ ಮಹಿಳೆ| ರೀಲ್ಸ್ ನಲ್ಲಿ ಪತ್ನಿಯ ಮದುವೆ ನೋಡಿ ಪತಿ ಕಂಗಾಲು

ಸಮಗ್ರ ನ್ಯೂಸ್: ಮದುವೆಯಾಗಿ 13 ವರ್ಷದ ನಂತರ ಇನ್‌ಸ್ಟಾದಲ್ಲಿ ಪರಿಚಯವಾದವನೊಂದಿಗೆ ಪತ್ನಿ ಎಸ್ಕೇಪ್ ಆಗಿ, ಎರಡನೇ ಮದುವೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.

Ad Widget ... ..

ನೇತ್ರಾವತಿ ಜಕ್ಕಸಂದ್ರದ ರಾಘವೇಂದ್ರನಗರ ನಿವಾಸಿಯಾದ ರಮೇಶ್ ಎಂಬುವವರನ್ನು ಮದುವೆಯಾಗಿ 13 ವರ್ಷವಾಗಿತ್ತು. ಒಬ್ಬ ಮಗ ಕೂಡ ಇದ್ದಾನೆ.

Ad Widget

ಕಳೆದ 1 ವಾರದ ಹಿಂದೆ ಇನ್‌ಸ್ಟಾದಲ್ಲಿ ನೇತ್ರಾವತಿಗೆ ಸಂತೋಷ್ ಎಂಬಾತನ ಪರಿಚಯವಾಗಿತ್ತು. ಈ ಪರಿಚಯವು ಪ್ರೀತಿಗೆ ತಿರುಗಿತ್ತು. ನೇತ್ರಾವತಿಯು ಕೆಲವೇ ದಿನಗಳ ಪ್ರೀತಿಗಾಗಿ ಮೊದಲ ಪತಿಗೆ ಕೈಕೊಟ್ಟು, ಸಂತೋಷ್ ಜೊತೆ ದೇವಾಲಯಲ್ಲಿ ಎರಡನೇ ಮದುವೆಯಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ಮದುವೆಯ ವೀಡಿಯೋವನ್ನು ನೋಡಿ ಮೊದಲ ಪತಿ ಶಾಕ್ ಆಗಿದ್ದಾರೆ.

ಪೊಲೀಸರ ಭದ್ರತೆಯಲ್ಲಿ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನ ತೆಗೆದುಕೊಂಡು ಹೋಗಲು ಮನೆ ಬಳಿ ಬಂದ ನೇತ್ರಾವತಿಗೆ ಸ್ಥಳೀಯರು ಕ್ಲಾಸ್ ತೆಗೆದುಕೊಂಡಿದ್ದಾರೆ. ಅಮ್ಮನನ್ನು ಕಳೆದುಕೊಂಡು ಮಗ ಒಂಟಿಯಾಗಿದ್ದಾನೆ.

Leave a Comment

Your email address will not be published. Required fields are marked *