ರಜೆ ನಿರಾಕರಿಸಿದ್ದಕ್ಕೆ ಮೇಲಾಧಿಕಾರಿಗಳಿಗೆ ಚಾಕುವಿನಿಂದ ಇರಿದ ಭೂಪ!!

ಸಮಗ್ರ ನ್ಯೂಸ್: ರಜೆಯನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡ ಸರ್ಕಾರಿ ನೌಕರನೊಬ್ಬ ತನ್ನ ಮೇಲಧಿಕಾರಿ ಸೇರಿದಂತೆ ನಾಲ್ವರಿಗೆ ಚಾಕು ಇರಿದಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಿನ್ನೆ (ಫೆ.06) ನಡೆದಿದೆ.

Ad Widget ... ..

ಅಮಿತ್ ಕುಮಾರ್ ಸರ್ಕಾರ್ ಎಂಬಾತ ಕೋಲ್ಕತದ ನ್ಯೂ ಟೌನ್ ಟೆಕ್ನಿಕಲ್ ಬಿಲ್ಡಿಂಗ್‌ನಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ರಜೆಯ ಅವಶ್ಯಕತೆ ಇದ್ದ ಕಾರಣ ಅಮಿತ್​ ಸರ್ಕಾರ್, ರಜೆ ನೀಡುವಂತೆ ಮಾಡಿದ್ದರು. ಆದರೆ, ಅವರ ಮೇಲಧಿಕಾರಿ ರಜೆ ಅರ್ಜಿಯನ್ನು ತಿರಸ್ಕರಿಸಿದರು.

Ad Widget

ಇದಾದ ಬಳಿಕ ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ತಮ್ಮ ಕಚೇರಿಯೊಳಗೆ ಮೇಲಧಿಕಾರಿ ಹಾಗೂ ಸಹೋದ್ಯೋಗಿಗಳೊಂದಿಗೆ ವಾಗ್ವಾದ ನಡೆಸಿದರು. ಕೋಪದಲ್ಲಿ ತಾಳ್ಮೆ ಕಳೆದುಕೊಂಡ ಸರ್ಕಾರ್​, ಚಾಕುವಿನಿಂದ ದಾಳಿ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *