Ad Widget .

ಜಾರಕಿಹೋಳಿ ಸಿಎಂ ಆಗಲೆಂದು ಪ್ರಯಾಗದಲ್ಲಿ ಹರಕೆ ಕಟ್ಟಿಕೊಂಡ ಅಭಿಮಾನಿಗಳು

ಸಮಗ್ರ ನ್ಯೂಸ್: ಸಚಿವ ಸತೀಶ್​ ಜಾರಕಿಹೋಳಿ ಮುಂದಿನ ಸಿಎಂ ಎಂದು ಸತೀಶ್​ ಅಭಿಮಾನಿಗಳು ಪ್ರಯಾಗ್​ ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಹರಕೆ ಕಟ್ಟಿಕೊಂಡಿದ್ದು, ಸತೀಶ್​ ಜಾರಕಿಹೋಳಿ ಸಿಎಂ ಆಗಬೇಕು ಎಂದು ಅಭಿಯಾನ ಮುಂದುವರಿದಿದೆ.

Ad Widget . Ad Widget . Ad Widget .

ಕಳೆದ ತಿಂಗಳು ಸಿಗಂದೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸತೀಶ್ ಜಾರಕಿಹೋಳಿ ಅಭಿಮಾನಿಗಳು ಮುಂದಿನ ಸಿಎಂ ಸತೀಸ್​ ಜಾರಕಿಹೋಳಿ ಎಂಬ ಪೋಸ್ಟರ್​ ಹಿಡಿದು ವಿಶೇಷ ಪೂಜೆ ಸಲ್ಲಿಸಿದ್ದರು.

Ad Widget . Ad Widget .

ಇದೀಗ ಸತೀಶ್​ ಅಭಿಮಾನಿಗಳು ತಮ್ಮ ಅಭಿಯಾನವನ್ನು ಮುಂದುವರಿಸಿದ್ದು. ಪ್ರಯಾಗ್​ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲೂ ತಮ್ಮ ಅಭಿಯಾನವನ್ನು ಮುಂದುವರಿಸಿದ್ದಾರೆ.

ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭೇಟಿ ನೀಡಿರುವ ಸತೀಶ್​ ಜಾರಕಿಹೋಳಿ ಅಭಿಮಾನಿಗಳು ತ್ರಿವೇಣಿ ಸಂಗಮದಲ್ಲಿ ಸತೀಶ್​ ಜಾರಕಿಹೋಳಿ ಅವರ ಪೋಸ್ಟರ್​ ಹಿಡಿದು ಪುಣ್ಯ ಸ್ನಾನ ಮಾಡಿದ್ದು, ಮುಂದಿನ ಸಿಎಂ ಆಗಲಿ ಎಂದು ಹರಕೆ ಕಟ್ಟಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *