Ad Widget .

ಪಂಜ: ಫೆ.1 ರಿಂದ ಫೆ. 9 ರವರೆಗೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಫೆ. 1 ರಿಂದ 9ರ ತನಕ ನಡೆಯಲಿದೆ. 

Ad Widget . Ad Widget . Ad Widget .

ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ಫೆ. 1 ರಂದು ದೇಗುಲದಲ್ಲಿ ಪೂರ್ವಾಹ್ನ 7.30ರಿಂದ ಶ್ರೀ ಗಣಪತಿ ಹವನ, ಶ್ರೀ ರುದ್ರ ಹವನ ಮತ್ತು ವೇದಪಾರಾಯಣಗಳ ಆರಂಭ ಪೂರ್ವಾಹ್ನ 10.30ರಿಂದ ಗರಡಿ ಬೈಲ್ ಮೂಲ ನಾಗನ ಕಟ್ಟೆಯಲ್ಲಿ ಆಶ್ಲೇಷ ಬಲಿ ಪೂಜೆ ಮತ್ತು ನಾಗ ತಂಬಿಲ ಸೇವೆ,  ಸಂಜೆ 6ಕ್ಕೆ ಕ್ಷೇತ್ರ ತಂತ್ರಿಗಳ ಆಗಮನ ಸಂಜೆ 7 ರಿಂದ ಧ್ವಜಾರೋಹಣ ನಡೆಯಲಿದೆ. 

Ad Widget .

ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಸಂಜೆ 6 ರಿಂದ 7 ರ ವರೆಗೆ ‘ನೃತ್ಯಾರ್ಪಣ’ ವಿದುಷಿ ಮಾನಸ ಪುನೀತ್ ರೈ ಅವರ ನಿರ್ದೇಶನದಲ್ಲಿ ವಿಶ್ವಮೋಹನ ನೃತ್ಯ ಕಲಾ ಶಾಲೆ ಕಡಬ ಇವರಿಂದ ನಡೆಯಲಿದೆ.  ಸಂಜೆ 7-30ರಿಂದ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಜೀವನ್ ಬೆಳ್ಳಾರೆ ನಿರ್ದೇಶನದಲ್ಲಿ ‘ನೃತ್ಯ ಸಂಭ್ರಮ’ ಡ್ಯಾನ್ಸ್ ಆಂಡ್ ಬೀಟ್ಸ್ ಪಂಜ, ಬೆಳ್ಳಾರೆ, ಕೈಕಂಬ ಹಾಗೂ ಸುಬ್ರಹ್ಮಣ್ಯ ಶಾಖೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಫೆ.2ರಂದು ಪೂ.7 ಕ್ಕೆ ನಾಗತೀರ್ಥದ ಮೂಲಸ್ಥಾನ ಬಂಟಮಲೆಯಿಂದ ದೇವಾಲಯಕ್ಕೆ ತೀರ್ಥ ತರುವುದು. 

ಫೆ.3ರಂದು ಪೂರ್ವಾಹ್ನದಿಂದ ಹಸಿರು ಕಾಣಿಕೆ ಸಂಗ್ರಹಣೆ ಮಾಡಿ ಸಂಜೆ 4ಕ್ಕೆ ಚೆಂಡೆ, ವಾದ್ಯ ಮೇಳಗಳ ವೈಭವದ ಮೆರವಣಿಗೆಯ ಮೂಲಕ ದೇಗುಲಕ್ಕೆ ಸಮರ್ಪಣೆ ಮಾಡಿ ಉಗ್ರಾಣ ತುಂಬಿಸುವುದು. ರಾತ್ರಿ ದಂಡ ಮಾಲೆಹಾಕಿ ಶ್ರೀ ದೇವರ ಬಲಿ ಹೊರಡುವುದು. ಫೆ.4 ರಂದು ದೇವರ ಉತ್ಸವ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಫೆ.5ರಂದು ಬುಧವಾರ ಬೆಳಿಗ್ಗೆ 10.30 ರಿಂದ ದರ್ಶನ ಬಲಿ, ಬಟ್ಟಲು ಕಾಣಿಕೆ ರಾತ್ರಿ ದೀಪೋತ್ಸವ, ದೈವಗಳ ನರ್ತನ ಸೇವೆ ನಡೆಯಲಿದೆ.

ಫೆ.6ರಂದು ರಾತ್ರಿ 8ಕ್ಕೆ ಬಲಿ ಹೊರಡುವುದು. ರಾತ್ರಿ 11 ರಿಂದ ಬ್ರಹ್ಮರಥೋತ್ಸವ ಕಾಚುಕುಜುಂಬ ದೈವಗಳ ನರ್ತನ ಸೇವೆ. ಅನ್ನಸಂತರ್ಪಣೆ. ಫೆ.7 ರಂದು ಮುಂಜಾನೆ 6ಕ್ಕೆ ಕವಾಟೊದ್ಘಾಟನೆ ದೇವರಿಗೆ ಅಭಿಷೇಕ ಕಾಚುಕುಜುಂಬ ದೈವ ನರ್ತನ ಸೇವೆಯೊಂದಿಗೆ ಶ್ರೀ ದೇವರ ಅವಕೃತ ಸ್ಥಾನ ಧ್ವಜಾವರೋಹಣ. ಸಂಜೆ 4ಕ್ಕೆ ದೇಗುಲದಿಂದ ಶ್ರೀ ಕಾಚುಕುಜುಂಬ ಉಳ್ಳಾಕುಲು ದೈವಗಳ ಭಂಡಾರ ಮೂಲಸ್ಥಾನ ಗರಡಿ ಬಯಲಿಗೆ ಹೋಗಿ ಧ್ವಜಾರೋಹಣ ಶ್ರೀ ಕಾಚುಕುಜುಂಬ ದೈವದ ನೇಮೋತ್ಸವ. ಫೆ.8ರಂದು ಮುಂಜಾನೆ 7ರಿಂದ ಮೂಲಸ್ಥಾನ ಗರಡಿಯಲ್ಲಿ ಶ್ರೀ ಉಳ್ಳಾಕುಲು ದೈವದ ನೇಮ ಧ್ವಜಾವರೋಣ.ದೇವಳದಲ್ಲಿ ಸಂಪ್ರೋಕ್ಷಣೆ ವೈದಿಕ ಮಂತ್ರಾಕ್ಷತೆ. ಫೆ.9ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ, ಶಿರಾಡಿ ದೈವ ಹಾಗೂ ರುದ್ರ ಚಾಮುಂಡಿ ದೈವಗಳ ನೇಮೋತ್ಸವ ನಡೆಯಲಿದೆ.

ಫೆ.1 ರಿಂದ5 ರ ವರೆಗೆ ಸಂಜೆ ಭಜನಾ ಸಂಕೀರ್ತನೆ ಜರುಗಲಿವೆ. ಫೆ.6 ರಂದು ರಥಬೀದಿಯಲ್ಲಿ ಕುಣಿತ ಭಜನೆ ನಡೆಯಲಿದೆ ಎಂದು ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.

 ಈ ಎಲ್ಲಾ ಕಾರ್ಯಕ್ರಮಗಳಿಗೂ ಸೀಮೆಯ ಭಕ್ತಾಧಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಬೇಕಾಗಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನಥೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *