ಹಾಸನ: ಪತ್ನಿ ಕಿರುಕುಳಕ್ಕೆ ಇಂಜಿನಿಯರ್ ಆತ್ಮಹತ್ಯೆ

ಸಮಗ್ರ ನ್ಯೂಸ್: ಪತ್ನಿ ಕಿರುಕುಳಕ್ಕೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದ್ದು, ನದಿಗೆ ಹಾರಿ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ.

Ad Widget ... ..

ಹಾಸನ ತಾಲೂಕಿನ ಗೊರೂರು ಶೆಟ್ಟಿಹಳ್ಳಿಯಲ್ಲಿ ಘಟನೆ ನಡೆದಿದೆ. ಇಂದಿರಾನಗರದ ನಿವಾಸಿ ಜೆಜೆ ಪ್ರಮೋದ್ ಎಂಬುವವರು ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ಕಿರುಕುಳಕ್ಕೆ ಬೇಸತ್ತು ನದಿಗೆ ಹಾರಿ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Ad Widget

ಪ್ರಮೋದ್ ಹಾಗೂ ಅವರ ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತ್ನಿಯ ತಮ್ಮಂದಿರು ಕೂಡ ಪ್ರಮೋದ್ ಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಡಿ.29 ರಿಂದ ಪ್ರಮೋದ್ ನಾಪತ್ತೆಯಾಗಿದ್ದರು. ನಂತರ ಹಾಸನದ ಕೆಆರ್ ಪುರಂ ಠಾಣೆಯಲ್ಲಿ ಪೋಷಕರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಬಳಿಕ ಹುಡುಕಾಟ ನಡೆಸಿದಾಗ ಹೇಮಾವತಿ ಸೇತುವೆ ಬಳಿ ಪ್ರಮೋದ್ ಬೈಕ್ ಪತ್ತೆಯಾಗಿತ್ತು. ನಂತರ ಅಗ್ನಿಶಾಮಕ ದಳ ಹಾಗೂ ಪೊಲೀಸರು ಪರಿಶೀಲನೆ ನಡೆಸಿದಾಗ ನದಿಯಲ್ಲಿ ಪ್ರಮೋದ್ ಶವ ಪತ್ತೆಯಾಗಿದೆ.ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Comment

Your email address will not be published. Required fields are marked *